ಮಂಡ್ಯ : ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರು ಮಂಡ್ಯ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರ ಪುತ್ರ ಅಭಿಷೇಕ್ ಅಂಬರೀಶ್ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ನಾನು ಕಣ್ಣಲ್ಲಿ ನೀರು ಹಾಕಿದ್ರೂ ಅದನ್ನ ಟೀಕೆ ಮಾಡ್ತಾರೆ. ನನ್ನನ್ನು ಟೀಕೆ ಮಾಡುವಷ್ಟು ದೊಡ್ಡ ಮಟ್ಟಕ್ಕೆ ಅಭಿಷೇಕ್ ಬಂದಿದ್ದಾರೆ. ಮೈಕ್ ಮುಂದೆ ಟವಲ್ ಹಿಡಿದು ಕಣ್ಣೀರು ಹಾಕುವ ಹಾಗೆ ನಾಟಕ ಅಂತಾರೆ. ರಾಜಕೀಯದಲ್ಲಿ ಇನ್ನೂ ಅಂಬೆಗಾಲು ಇಡ್ತಾ ಇದ್ದಾರೆ ನನ್ನೇ ಟೀಕೆ ಮಾಡ್ತಾರೆ’ ಅಂತ ತಿರುಗೇಟು ನೀಡಿದ್ರು.