Monday, April 22, 2024

ಯಶ್​ಗೆ ಸೇಬಿನ ಹಾರದ ಸ್ವಾಗತ – ಇಂದು 24ಹಳ್ಳಿಯಲ್ಲಿ ಕ್ಯಾಂಪೇನ್

ಮಂಡ್ಯ: ಯುಗಾದಿ ಹಬ್ಬದ ವಿಶ್ರಾಂತಿ ನಂತರ ನಟ ಯಶ್ ಮತ್ತೆ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಪ್ರಚಾರ ಆರಂಭಿಸಿದ್ದಾರೆ. ಅಭಿಮಾನಿಗಳು ಯಶ್​ಗೆ ಬೃಹತ್​ ಸೇಬಿನ ಹಾರ ಹಾಕಿ ವಿಶೇಷವಾಗಿ ಸ್ವಾಗತ ಮಾಡಿದ್ದಾರೆ. ಮಂಡ್ಯದಲ್ಲಿ ‘ರಾಜಾಹುಲಿ’ ಪ್ರಚಾರ ಆರಂಭಿಸಿದ್ದು, ಮಂಡ್ಯ ತಾಲೂಕಿನ ಉಮ್ಮಡಹಳ್ಳಿಯಿಂದ ಪ್ರಚಾರ ಆರಂಭಿಸಿದ್ದಾರೆ. ಸುಮಲತಾ ಅಂಬರೀಶ್ ಪರ ಚುನಾವಣಾ ಪ್ರಚಾರ ನಡೆಸುತ್ತಿರುವ ಯಶ್​ 24 ಹಳ್ಳಿಗಳಲ್ಲಿ ಕ್ಯಾಂಪೇನ್​ ನಡೆಸಲಿದ್ದಾರೆ. ನಟ ಯಶ್ ಹಾಗೂ ದರ್ಶನ್ ಸುಮಲತಾ ಪರ ಕ್ಯಾಂಪೇನ್ ಮಾಡುತ್ತಿರೋ ಬಗ್ಗೆ ಟೀಕೆಯೂ ಕೇಳಿ ಬಂದಿದ್ದು, ಮಂಡ್ಯ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರು ಯಶ್​ ವಿರುದ್ಧ ವಾಗ್ದಾಳಿ ನಡೆಸಿದ್ದರು. ಇನ್ನು ನಟ ದರ್ಶನ್ ಅವರು ನಿನ್ನೆ ಬೆಂಗಳೂರಿನಲ್ಲಿ ಬಿಜೆಪಿ ಅಭ್ಯರ್ಥಿ ಪಿ. ಸಿ ಮೋಹನ್ ಪರ ಪ್ರಚಾರ ನಡೆಸಿದ್ದರು.

RELATED ARTICLES

Related Articles

TRENDING ARTICLES