Friday, September 13, 2024

ಎ. ಮಂಜು ಸೋಲಿಸಲು ಪ್ರೀತಂಗೌಡ ನಡೆಸಿದ್ದಾರಾ ಪಿತೂರಿ?

ಹಾಸನ : ಶಾಸಕ ಪ್ರೀತಂಗೌಡ ಸ್ವ-ಪಕ್ಷದ ಅಭ್ಯರ್ಥಿಯನ್ನೇ ಸೋಲಿಸಲು ಪಿತೂರಿ ನಡೆಸಿದ್ದಾರಾ ಅನ್ನೋ ಪ್ರಶ್ನೆಯೊಂದು ಮೂಡಿದೆ. ಆ ಪ್ರಶ್ನೆ ಮೂಡಲು ಕಾರಣ ಪ್ರೀತಂಗೌಡ ತನ್ನ ಬೆಂಬಲಿಗರ ಜೊತೆ ಮಾತನಾಡಿದ್ದಾರೆ ಎನ್ನಲಾದ ಒಂದು ಆಡಿಯೋ..!
ಪ್ರೀತಂಗೌಡ ತನ್ನ ಬೆಂಬಲಿಗನ ಜೊತೆ ನಡೆಸಿದ್ದಾರೆ ಎನ್ನಲಾದ ಸಂಭಾಷಣೆ ಪ್ರಕಾರ ಅವರು ಹಾಸನ ಬಿಜೆಪಿ ಅಭ್ಯರ್ಥಿ ಎ. ಮಂಜು ಅವರನ್ನು ಸೋಲಿಸಲು ಸ್ವತಃ ಬಿಜೆಪಿಯ ಶಾಸಕ ಪ್ರೀತಂಗೌಡ ಅವರೇ ಒಳಗೊಳಗೆ ತಂತ್ರ ರೂಪಿಸಿದ್ದಾರೆ ಎಂದು ಸಾರುವಂತಿದೆ.
”ಪುಕ್ಸಟ್ಟೆ ಲೀಡರ್ ಆಗೋಕೆ ಹೊರಟವರೆ. ಹಾಸನದಲ್ಲಿ ಬಳ್ಳಾರಿ ಎಲೆಕ್ಷನ್​ ರಿಸಲ್ಟ್​​​ ಮರುಕಳಿಸುತ್ತೆ. 7 ತಿಂಗಳ ಹಿಂದೆ ಮಂತ್ರಿಯಾಗಿ ಮಾಡಿರೋ ಅವಾಂತರ ಮರೆತಿರ್ತಾರಾ? ಜೆಡಿಎಸ್​ ಗೆಲ್ಲುತ್ತೆ”..! ಎಂದು ಪ್ರೀತಂಗೌಡ ಹೇಳಿದ್ದಾರೆ ಎನ್ನಲಾದ ಆಡಿಯೋ ಅದು.

RELATED ARTICLES

Related Articles

TRENDING ARTICLES