Wednesday, November 6, 2024

ಪೆನ್ಸಿಲ್​ ಲೆಡ್​ನಲ್ಲಿ ಮೋದಿ..!

ಮೈಸೂರು: ಕಲಾವಿದರೊಬ್ಬರು ಪೆನ್ಸಿಲ್ ಲೆಡ್​ನಲ್ಲಿ ಮೋದಿ ಚಹರೆಯನ್ನ ರೂಪಿಸಿ ಗಮನ ಸೆಳೆದಿದ್ದಾರೆ. ಮೈಸೂರಿನ ತಿಲಕ್ ನಗರದ ನಂಜುಂಡ ಎಂಬವರು ಮೋದಿಯ ರೂಪವನ್ನ ಪೆನ್ಸಿಲ್ ಲೆಡ್​ನಲ್ಲಿ ರೂಪಿಸಿದ್ದಾರೆ. ಪೆನ್ಸಿಲ್ ಲೆಡ್​ನಲ್ಲಿ ಹಲವಾರು ಕಲಾಕೃತಿಗಳನ್ನ ರಚಿಸಿರುವ ನಂಜುಂಡ ಅವರು ಮೋದಿಯ ಕಲಾಕೃತಿಯನ್ನೂ ಸಹ ರೂಪಿಸಿದ್ದಾರೆ.

ಸುಮಾರು ಎರಡೂವರೆ ಗಂಟೆಗಳ ಕಾಲಾವಕಾಶ ತೆಗೆದುಕೊಂಡು ಮೋದಿಯ ಚಹರೆಯನ್ನ ರೂಪಿಸಿರುವ ನಂಜುಂಡ ಅದನ್ನು ಮೆಚ್ಚಿನ ಪ್ರಧಾನಿಗೆ ನೀಡಲು ಕಾತುರದಿಂದ ಕಾಯುತ್ತಿದ್ದಾರೆ. “ಈ ಪೆನ್ಸಿಲ್ ಕಲಾಕೃತಿ ಮೈಸೂರಿಗೆ ಭೇಟಿ ನೀಡುತ್ತಿರುವ ಮೋದಿಯವರಿಗೆ ತಲುಪಿದರೆ ನಾನು ಧನ್ಯ” ಅಂತಾರೆ ನಂಜುಂಡ. ಮೋದಿ ಕೈಗೆ ತಲುಪಬೇಕಿದ್ದಲ್ಲಿ ಸಾಕಷ್ಟು ನಿಯಮಗಳನ್ನ ಪಾಲಿಸಬೇಕಿದ್ದು ತನಗೆ ಸಹಕರಿಸುವಂತೆ ಶಾಸಕ ರಾಮದಾಸ್ ಅವರನ್ನು ಕೇಳಿಕೊಂಡಿದ್ದು, ಕಲಾಕೃತಿಯನ್ನು ಶಾಸಕರ ಕೈಗೆ ಒಪ್ಪಿಸಿದ್ದಾರೆ. ಪ್ರಧಾನಿಗಳ ಕಚೇರಿಯಿಂದ ಅನುಮತಿ ಪಡೆಯಲು ರಾಮದಾಸ್ ಪ್ರಯತ್ನಿಸುತ್ತಿದ್ದಾರೆ. ಒಂದು ವೇಳೆ ಪ್ರಧಾನಿಗಳ ಕಚೇರಿಯಿಂದ ಅನುಮತಿ ಸಿಕ್ಕಲ್ಲಿ ನಂಜುಂಡ ಅವರ ಶ್ರಮ ಸಾರ್ಥಕವಾದಂತೆ.

RELATED ARTICLES

Related Articles

TRENDING ARTICLES