Saturday, April 27, 2024

ಗ್ರೌಂಡ್​​ರಿಪೋರ್ಟ್​ : ಗುರು-ಶಿಷ್ಯರ ಕಾಳಗಕ್ಕೆ ವೇದಿಕೆಯಾದ ಕಲಬುರಗಿ..!

ಗ್ರೌಂಡ್​​ರಿಪೋರ್ಟ್​ 18 : ಕಲಬುರಗಿ ಲೋಕಸಭಾ ಕ್ಷೇತ್ರ

ಕಲಬುರಗಿ : ಗುರು -ಶಿಷ್ಯರ ನಡುವಿನ ಕಾಳಗಕ್ಕೆ ಸಾಕ್ಷಿಯಾಗಿದೆ ಪ್ರತಿಷ್ಠಿತ ಕಲಬುರಗಿ ಲೋಕಸಭಾ ಕ್ಷೇತ್ರ. ಹಿರಿಯ ರಾಜಕೀಯ ಮುತ್ಸದ್ಧಿ, ಹಾಲಿ ಸಂಸದ ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್​ ರಣಕಲಿ. ಇವರಿಗೆ ಈ ಬಾರಿ ಶಿಷ್ಯನೇ ಪ್ರತಿಸ್ಪರ್ಧಿ..! ಇತ್ತೀಚೆಗಷ್ಟೇ ಕಾಂಗ್ರೆಸ್​ ತೊರೆದು ಬಿಜೆಪಿ ಸೇರಿರೋ ಉಮೇಶ್ ಜಾಧವ್​​ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪ್ರಬಲ ಎದುರಾಳಿಯಾಗಿದ್ದಾರೆ.
ಈ ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳಲ್ಲಿ 4 ಕ್ಷೇತ್ರಗಳಲ್ಲಿ ಕಾಂಗ್ರೆಸ್​, 3ರಲ್ಲಿ ಬಿಜೆಪಿ ಹಾಗೂ 1ರಲ್ಲಿ ಮಾತ್ರ ಜೆಡಿಎಸ್​ ಶಾಸಕರಿದ್ದಾರೆ.

ಅಸೆಂಬ್ಲಿ ಕ್ಷೇತ್ರಗಳು ಮತ್ತು ಶಾಸಕರು

ಕಲಬುರಗಿ ಉತ್ತರ ಕಾಂಗ್ರೆಸ್​ ಖನಿಜ್ ಫಾತಿಮಾ ಖಮರ್ ಉಲ್ ಇಸ್ಲಾಂ

ಕಲಬುರಗಿ ದಕ್ಷಿಣ ಬಿಜೆಪಿ ದತ್ತಾತ್ರೇಯ ಪಾಟೀಲ ರೇವೂರ

ಕಲಬುರಗಿ ಗ್ರಾಮೀಣ ಬಿಜೆಪಿ ಬಸವರಾಜ ಮತ್ತಿಮಾಡ

ಸೇಡಂ ಬಿಜೆಪಿ ರಾಜಕುಮಾರ ಪಾಟೀಲ ತೆಲಕೂರ್

ಜೇವರ್ಗಿ ಕಾಂಗ್ರೆಸ್ ಡಾ ಅಜಯ್ ಸಿಂಗ್

ಚಿತ್ತಾಪುರ ಕಾಂಗ್ರೆಸ್​ ಪ್ರಿಯಾಂಕ್ ಖರ್ಗೆ

ಅಫಜಲ್​ಪುರ ಕಾಂಗ್ರೆಸ್​ ಎಮ್ ವಾಯ್ ಪಾಟೀಲ್

ಗುರುಮಠಕಲ್ ಜೆಡಿಎಸ್​​​​ ನಾಗನಗೌಡ ಕಂದಕುರ

ಇದುವರೆಗೆ ನಡೆದ ‘ಲೋಕ’ ಸಮರದಲ್ಲಿ ಕಾಂಗ್ರೆಸ್ 15 ಬಾರಿ, ಬಿಜೆಪಿ ಮತ್ತು ಜೆಡಿಎಸ್​ ಅಭ್ಯರ್ಥಿಗಳು ತಲಾ 1 ಬಾರಿ ಯಶ ಕಂಡಿದ್ದಾರೆ.
1951 : ಸ್ವಾಮಿ ರಮಾಬಂದ ತಿರ್ಥ, ಕಾಂಗ್ರೆಸ್​
1957/62 : ಮಹಾದೇವಪ್ಪ ವೈ ಶಂಕರ್ರಾವ್ ,ಕಾಂಗ್ರೆಸ್
1967 : ಎಮ್ ಯಶವಂತಪ್ಪ, ಕಾಂಗ್ರೆಸ್
1971 : ಧರ್ಮರಾವ್, ಕಾಂಗ್ರೆಸ್
1974/77 : ಸಿದ್ರಾಮ ರೆಡ್ಡಿ, ಕಾಂಗ್ರೆಸ್​
1980 : ಎನ್​.ಧರಂಸಿಂಗ್, ಕಾಂಗ್ರೆಸ್​
1980 : ಸಿ ಎಂ ಸ್ಟೀಫನ್, ಕಾಂಗ್ರೆಸ್
1984 : ​ ವೀರೇಂದ್ರ ಪಾಟೀಲ, ಕಾಂಗ್ರೆಸ್
1989/1991 : ಬಿ ಜಿ ಜವಳಿ, ಕಾಂಗ್ರೆಸ್​
1996 : ಖಮರ್ ಉಲ್ ಇಸ್ಲಾಂ, ಜೆಡಿಎಸ್​
1998 : ಬಸವರಾಜ ಪಾಟೀಲ ಸೆಡಂ, ಬಿಜೆಪಿ
1999/2004 : ಇಕ್ಬಾಲ್ ಅಹಮದ್ ಸರಡಗಿ -ಕಾಂಗ್ರೆಸ್
2009/2014 : ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್

ಕಲಬುರಗಿ ಲೋಕ ಸಮರ – 2014

ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್​​ 5,07,193

ರೇವು ನಾಯಕ್​ ಬೆಳಮಗಿ ಬಿಜೆಪಿ 4,32,460

ಅಂತರ : 74,733

ಮತ ಗಣಿತ
ಪುರುಷರು 9,67,936

ಮಹಿಳೆಯರು 9,53,041

ಒಟ್ಟು 19,20,977

 

ಜಾತಿ ಗಣಿತ
ಲಿಂಗಾಯತ 5,50,000

ಬ್ರಾಹ್ಮಣ 60,000

ಮರಾಠರು 20,000

ಜೈನ 10,000

ದಲಿತ 3,10,000

ಕುರುಬ 1,91,000

ಬಂಜಾರಾ 2,00,000

ಮಾದಿಗ 1,50,000

ಕೋಲಿ 2,06,000

ರೆಡ್ಡಿ 17,000

ಭೋವಿ 33,000

ಈಡಿಗ 32,000

ಇತರೆ 1,19,000

ಮುಸ್ಲಿಂ 3,00,000

ಅಭ್ಯರ್ಥಿಗಳ ಬಲಾಬಲ
ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪೂರಕ ಅಂಶಗಳೇನು?

ಸೋಲರಿಯದ ಸರದಾರ
ಸತತ 11 ಚುನಾವಣೆ ಗೆದ್ದವರು
ಗೆಲ್ಲುವ ಕುದುರೆಯಾಗಿಯೇ ರಾಜಕೀಯದಲ್ಲಿ ದಾಖಲೆ ಬರೆದವರು
ಕಾಂಗ್ರೆಸ್‌ ಪಕ್ಷದತ್ತ ಒಲವಿರುವ ಕ್ಷೇತ್ರ
ಹೈ-ಕ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವಲ್ಲಿ ಪ್ರಮುಖ ಪಾತ್ರ
ಸಂಸದರಾಗಿ ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳು
ಪುತ್ರ ಪ್ರಿಯಾಂಕ್ ಖರ್ಗೆ ಕೂಡ ಸಚಿವರಾಗಿ ಪ್ರಭಾವ ಹೊಂದಿದ್ದಾರೆ
ಕಲಬುರಗಿಯನ್ನು ರೈಲ್ವೆ ವಿಭಾಗೀಯ ಕೇಂದ್ರವನ್ನಾಗಿ ಮಾಡಿರುವುದು
ಏರ್​​​ಪೋರ್ಟ್​ ನಿರ್ಮಾಣದಲ್ಲಿ ಪ್ರಮುಖ ಪಾತ್ರ
ಕಲಬುರಗಿಯಲ್ಲಿ ಕರ್ನಾಟಕದ ಏಕೈಕ ಕೇಂದ್ರಿಯ ವಿವಿ ಸ್ಥಾಪನೆ
ದೇಶದ 2ನೇ ಬೃಹತ್ ಇಎಸ್ಐ ಮೆಡಿಕಲ್ ಹಬ್ ಸ್ಥಾಪನೆ
ಯಾದಗಿರಿ ಜಿಲ್ಲೆಯಲ್ಲಿ ರೈಲ್ವೆ ಸಿಯಾಟ್ ಕೋಚ್ ಫ್ಯಾಕ್ಟರಿ ನಿರ್ಮಾಣ

ಮಲ್ಲಿಕಾರ್ಜುನ ಖರ್ಗೆ ಅವರಿಗಿರುವ ಆತಂಕಗಳೇನು?
ಹೈ-ಕ ಭಾಗಕ್ಕೆ ವಿಶೇಷ ಸ್ಥಾನಮಾನ ಸಿಗಲು ನಾನೇ ಕಾರಣ ಎಂದು ಹೇಳಿರುವುದು
ಹೀಗಾಗಿ ಹೋರಾಟಗಾರರು ಖರ್ಗೆ ವಿರುದ್ಧ ಸಿಟ್ಟಾಗಿದ್ದಾರೆ
ಪುತ್ರ ವ್ಯಾಮೋಹದಿಂದ ಪ್ರಿಯಾಂಕ್ ಖರ್ಗೆಗೆ ಸಚಿವ ಸ್ಥಾನ ದೊರಕಿಸಿಕೊಟ್ಟಿದ್ದು
ಖರ್ಗೆ ಸೋಲಿಸಲು ಉಮೇಶ್ ಜಾಧವ್ ಕಣಕ್ಕಿಳಿಸಿ ಬಿಜೆಪಿ ವಿಶೇಷ ಪ್ರಯತ್ನ
ನೀರಾವರಿ ಸಮಸ್ಯೆಗಳಿಗೆ ಸ್ಪಂದಿಸದೇ ಇರೋದು
1,800 ಕೋಟಿ ವೆಚ್ಚದ ಇಎಸ್ಐ ಮೆಡಿಕಲ್ ಹಬ್​​ ಬಳಕೆಯಾಗುತ್ತಿಲ್ಲ
ಇಎಸ್​ಐ ಮೆಟಿಕಲ್​ ಹಬ್​ ಕೇವಲ 15ರಷ್ಟು ಮಾತ್ರ ಬಳಕೆಯಾಗುತ್ತಿರುವುದು
ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡದಿರುವುದು
ಜನ ಸ್ಪಂದನ ಕಾರ್ಯಕ್ರಮಗಳನ್ನು ಮಾಡದಿರುವುದು
ಕೇವಲ ಕಾರ್ಯಕರ್ತರು, ಮುಖಂಡರ ಸಭೆ ನಡೆಸಿ ಹೋಗುವುದು
ಕೆಡಿಪಿ ಸಭೆಯಲ್ಲಿ ಭಾಗವಹಿಸಿದ್ರೂ ಸಮಸ್ಯೆಗಳ ಪರಿಹಾರಕ್ಕೆ ನಿರ್ಲಕ್ಷ್ಯ
ಹಿರಿಯ ಶಾಸಕರನ್ನು ಕಡೆಗಣಿಸಿದ್ದಾರೆ ಎನ್ನುವ ಗಂಭೀರ ಆರೋಪ

ಉಮೇಶ್​ ಜಾಧವ್​​ಗೆ ಪೂರಕ ಅಂಶಗಳೇನು?
ಮಲ್ಲಿಕಾರ್ಜುನ ಖರ್ಗೆಗೆ ಸವಾಲು ಹಾಕಿ ದಿಟ್ಟತನ ತೋರಿರುವುದು
ಲಂಬಾಣಿ ಸಮುದಾಯದ ಮತ ನಿರ್ಣಾಯಕ
ಉಮೇಶ್ ಜಾಧವ್ ಇದೇ ಸಮುದಾಯದವರು
ಬಿಜೆಪಿಯ ಎಲ್ಲಾ ಮುಖಂಡರು ಬೆನ್ನಿಗೆ ನಿಂತಿರುವುದು
ರಾಜಕೀಯವಾಗಿ ಮಹತ್ವಾಕಾಂಕ್ಷಿ ನಾಯಕ
ಕ್ಷೇತ್ರದಲ್ಲಿ ನರೇಂದ್ರ ಮೋದಿ ಹವಾ
ಅಸಮಾಧಾನಿತ ನಾಯಕರು ‘ಕೈ’ ತೊರೆದು ಬಿಜೆಪಿ ಸೇರಿರುವುದು
ಮಾಲಿಕಯ್ಯ ಗುತ್ತೇದಾರ್​​, ಚಿಂಚನಸೂರ್ ಖರ್ಗೆ ಸೋಲಿಸಲು ಪಣತೊಟ್ಟಿರುವುದು
ಜಿಲ್ಲಾ ಕಾಂಗ್ರೆಸ್ ಪಕ್ಷದಲ್ಲಿ ಬೂದಿ ಮುಚ್ಚಿದ ಕೆಂಡದಂತಿದೆ ಅಸಮಾಧಾನ
ಸದಾಕಾಲ ಕ್ಷೇತ್ರದ ಜನರ ಸಮಸ್ಯೆಗಳಿಗೆ ಸ್ಪಂದಿಸುವ ನಾಯಕ

ಉಮೇಶ್​ ಜಾಧವ್​ ಅವರಿಗೆ ಆತಂಕಗಳೇನು?

ಆಪರೇಷನ್ ಕಮಲಕ್ಕೆ ಒಳಗಾಗಿ ಕೋಟಿ ಕೋಟಿ ಹಣ ಪಡೆದಿದ್ದಾರೆ ಎನ್ನುವ ಆರೋಪ
ಶಾಸಕರಾಗಿ ರಾಜೀನಾಮೆ ಕೊಟ್ಟು ಕ್ಷೇತ್ರದ ಜನರಿಗೆ ಅನ್ಯಾಯ ಮಾಡಿದ ಆರೋಪ
ಸ್ವ ಕ್ಷೇತ್ರ ಚಿಂಚೋಳಿ ಬೀದರ್ ಕ್ಷೇತ್ರ ವ್ಯಾಪ್ತಿಗೆ ಸೇರಿರುವುದರಿಂದ ಅಲ್ಲಿನ ಮತಗಳು ಬಾರದಿರುವುದು
ಕ್ಷೇತ್ರದಲ್ಲಿ ಸೋಲಿಲ್ಲದ ಸರದಾರ ಮಲ್ಲಿಕಾರ್ಜುನ್ ಖರ್ಗೆಯವರ ಪ್ರಭಾವ
ಮೂಲ ಬಿಜೆಪಿ ಕಾರ್ಯಕರ್ತರಿಗೆ ಇರುವ ಅಸಮಾಧಾನ
ಸೋಲರಿಯದ ಸರದಾರನ ಮುಂದೆ ರಾಜಕೀಯ ಅನುಭವ ತುಂಬಾ ಕಡಿಮೆ

ಪ್ರಭಾವ ಬೀರುವ ಅಂಶಗಳು
ಜಿಲ್ಲೆಯಲ್ಲಿ ಭೀಮಾ ಏತ ನೀರಾವರಿ ಯೋಜನೆ ನೆನೆಗುದಿಗೆ ಬಿದ್ದಿದೆ
ಬೆಣ್ಣೆತೋರಾ, ಮುಲ್ಲಾಮಾರಿ, ಅಮರ್ಜಾ ನೀರಾವರಿ ಯೋಜನೆ ಜಾರಿಯಾಗಿಲ್ಲ
ಜಿಲ್ಲೆಗೆ ವಿಶೇಷ ಸ್ಥಾನಮಾನ ಸಿಕ್ಕಿದ್ರೂ ಸರ್ವತೋಮುಖ ಏಳಿಗೆ ಆಗಿಲ್ಲ
ದೇಶದ 2ನೇ ಬೃಹತ್ ಇಎಸ್ಐ ಮೆಡಿಕಲ್ ಹಬ್​​ ವಿಫಲ
ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿರುವುದು

ಸಂಸದ್ದರು ಮಾಡಿದ್ದೇನು?
ಕ್ಷೇತ್ರಕ್ಕೆ ತಂದಿರುವ ಅನುದಾನ ಒಟ್ಟು 19.99 ಕೋಟಿ ರೂಪಾಯಿ
ಒಟ್ಟು 468 ವಿವಿಧ ಯೋಜನೆಯ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ
ಒಟ್ಟು 240 ಯೋಜನೆಗಳ ಕಾಮಗಾರಿಗಳು ಪೂರ್ಣಗೊಂಡಿವೆ
97 ಕಾಮಗಾರಿಗಳು ಇನ್ನೂ ಪ್ರಗತಿಯಲ್ಲಿವೆ
130 ಕಾಮಗಾರಿಗಳ ಬಗ್ಗೆ ಮಾಹಿತಿಯೇ ಇಲ್ಲ

ಕ್ಷೇತ್ರ ಪರಿಚಯ
ಶರಣ ಸಂತ ಸೂಫಿಗಳ ನಾಡು ಅಂತ ಖ್ಯಾತಿ ಪಡೆದ ಜಿಲ್ಲೆ
ಶತಮಾನದ ಇತಿಹಾಸವುಳ್ಳ ಕಲಬುರಗಿ ಕೋಟೆ
ಶರಣ ಬಸವೇಶ್ವರ ಕೆರೆ, ಶರಣಬಸವೇಶ್ವರ ದೇವಸ್ಥಾನ
ಖಾಜಾ ಬಂದೇನವಾಜ ದರ್ಗಾ ಹೆಚ್ಚು ಪ್ರಸಿದ್ಧ
ಬುದ್ಧ ವಿಹಾರ, ಸನ್ನತಿ ಚಂದ್ರಲಾಂಬ ದೇವಸ್ಥಾನ ಐತಿಹಾಸಿಕ ತಾಣ
ಏಷ್ಯಾದಲ್ಲೇ ಅತಿ ಹೆಚ್ಚು ತೊಗರಿ ಬೆಳೆಯುವ ನಾಡು ‘ತೊಗರಿ ಕಣಜ’ ಎಂದೇ ಪ್ರಸಿದ್ಧ

RELATED ARTICLES

Related Articles

TRENDING ARTICLES