Thursday, December 26, 2024

ಸುದೀಪ್​ -ಆರ್​ಜಿವಿ ಕಾಂಬಿನೇಷನ್​​ನಲ್ಲಿ ಹೊಸ ಸಿನಿಮಾ..?

ಬಾಲಿವುಡ್​ ಹಾಗೂ ಟಾಲಿವುಡ್​​ನಲ್ಲಿ ತನ್ನದೇಯಾದ ಛಾಪು ಮೂಡಿಸಿರೋ ಡೈರೆಕ್ಟರ್​ ರಾಮ್​ಗೋಪಾಲ್​ ವರ್ಮಾ ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕಾಂಬಿನೇಷನ್​ನಲ್ಲಿ ಹೊಸ ಸಿನಿಮಾ ಬರಲಿದೆಯೇ..? ಕಿಚ್ಚ ಸುದೀಪ್​ ಮಾಡಿರೋ ಟ್ವೀಟ್​​​​​​​​​ ಸುದೀಪ್ ಮತ್ತು ಆರ್​ಜಿವಿ ಮತ್ತೆ ಒಟ್ಟಿಗೆ ಸಿನಿಮಾ ಮಾಡ್ತಾರೆ ಅನ್ನೋ ಕುತೂಹಲವನ್ನು ಹುಟ್ಟು ಹಾಕಿದೆ.
ಇವತ್ತು ರಾಮ್ ಗೋಪಾಲ್ ವರ್ಮಾ ಅವರ ಹುಟ್ಟುಹಬ್ಬ. ಅವರಿಗೆ ಟ್ವೀಟ್ ಮೂಲಕ ವಿಶ್ ಮಾಡಿರೋ ಸುದೀಪ್ ಆದಷ್ಟೂ ಬೇಗ ನಿಮ್ಮನ್ನ ಭೆಟಿಯಾಗುತ್ತೆನೆ ಎಂದಿದ್ದಾರೆ.
ಸುದೀಪ್ ಅವರು ಆರ್​​​​​​​ಜಿವಿ ಅವರನ್ನ ಮೀಟ್ ಆಗುವ ಸುದ್ದಿ ಕೇಳುತ್ತಿದ್ದಂತೆ ಇತ್ತ ಚಂದನ ವನದಲ್ಲಿ ಗುಸು ಗುಸು ಗಾಸಿಪ್ ಶುರುವಾಗಿದೆ. ಕಿಚ್ಚ ಹಾಗೂ ಆರ್​ಜಿವಿ ಕಾಂಬಿನೇಷನ್ ನಲ್ಲಿ ಮತ್ತೊಂದು ಸಿನಿಮಾ ಬರುತ್ತೆ ಅಂತ.
ಆರ್‌ಜಿವಿ, ಸುದೀಪ್‌ ನಡುವೆ ಬಹಳ ವರ್ಷಗಳ ಆತ್ಮೀಯ ಒಡನಾಟವಿದೆ. 2008ರಲ್ಲಿ ಆರ್‌ಜಿವಿ ನಿರ್ದೇಶಿಸಿದ್ದ ಹಿಂದಿಯ ‘ಫೂಂಕ್’ ಚಿತ್ರದಲ್ಲಿ ಕಿಚ್ಚ ಅಭಿನಯಿಸಿದ್ರು. ನಂತ್ರ ಆರ್‌ಜಿವಿಯ ರಣ್, ಫೂಂಕ್-2, ರಕ್ತಚರಿತ್ರಾ-1, ರಕ್ತಚರಿತ್ರಾ-2 ಚಿತ್ರಗಳಲ್ಲೂ ಕಿಚ್ಚ ಅಭಿನಯಿಸೋ ಮೂಲಕ ಇವರಿಬ್ಬರ ಸ್ನೇಹ ಇನ್ನೂ ಹೆಚ್ಚಾಗಿತ್ತು. ಈ ಹಿಂದೆ ಸ್ವತಃ ಆರ್‌ಜಿವಿ ತಮ್ಮ ಸಿನಿಮಾವೊಂದಕ್ಕೆ ‘ಮೊದಲು ಲೀಡ್‌ ರೋಲ್‌ ಅನ್ನು ಸುದೀಪ್‌ ಅವರಿಂದ ಮಾಡಿಸಬೇಕು ಅಂದುಕೊಂಡಿದ್ದೆ. ಅವರು ಕೂಡ ಒಪ್ಪಿಕೊಂಡಿದ್ದರು. ಹಲವು ಕಾರಣಗಳಿಂದಾಗಿ ಸದ್ಯ ಅವರ ಜತೆ ಕೆಲಸ ಮಾಡಲು ಆಗುತ್ತಿಲ್ಲ ‘ ಅಂತ ಟ್ವೀಟ್‌ ಮಾಡಿದ್ರು. ಆ ನಂತ್ರ ಸಾಕಷ್ಟು ಬಾರಿ ಸುದೀಪ್‌ರನ್ನ ಹಾಕ್ಕೊಂಡು ಆರ್‌ಜಿವಿ ಸಿನಿಮಾ ಮಾಡ್ತಾರಂತೆ ಅನ್ನೋ ಸುದ್ದಿಯಿತ್ತಾದ್ರೂ ಅದಿನ್ನೂ ಕೈಗೂಡಿಲ್ಲ. ಈಗ ಕಿಚ್ಚ ಆರ್‌ಜಿವಿನ ಹೀಗೆ ಆತ್ಮೀಯತೆಗೆ ಭೇಟಿಯಾಗಲಿದ್ದಾರೋ ಅಥವಾ ಸಿನಿಮಾವೊಂದ್ರ ಸಂಬಂಧವೋ ಅನ್ನೋದು ಮುಂದೆ ತಿಳಿಯಬೇಕಿದೆ.

RELATED ARTICLES

Related Articles

TRENDING ARTICLES