ಬೆಂಗಳೂರು : ಚೌಕಿದಾರ್ ಅಲ್ಲ ಭ್ರಷ್ಟಾಚಾರದ ಭಾಗಿದಾರ್ ಅಂತ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ತಮ್ಮ ಪಕ್ಷದ ಅಭ್ಯರ್ಥಿ ರಿಜ್ವಾನ್ ಅರ್ಷದ್ ಅವರ ಪರ ಪ್ರಚಾರ ಮಾಡುವಾಗ ಸಿದ್ದರಾಮಯ್ಯ ಮೋದಿ ಮತ್ತು ಬಿಜೆಪಿ ನಾಯಕರ ವಿರುದ್ಧ ವಾಕ್ಸಮರ ನಡೆಸಿದರು.
”ವಿಜಯ ಮಲ್ಯ ಹೆಂಗೆ ಹೊರಟು ಹೋದ, ಹೆಂಗೆ ಕದ್ದು ಹೋದ, ಲಲಿತ್ ಮೋದಿ ಹೆಂಗೆ ಹೊರಟು ಹೋದ? ಇವರೆಲ್ಲಾ ಕೋಟ್ಯಾಂತರ ರೂ ಜನರ ದುಡ್ಡನ್ನು ಬ್ಯಾಂಕ್ಗಳಲ್ಲಿ ಕದ್ದು ಹೊರಟು ಹೋದ್ರು. ವಿಜಯ ಮಲ್ಯ ಒಂದು ಸ್ಟೇಟ್ಮೆಂಟ್ ಕೊಟ್ಟ ನಾನು ಅರುಣ್ ಜೇಟ್ಲಿಗೆ ಹೇಳಿಯೇ ಹೋದೆ ಅಂತ. ನೋಡಿ ಚೌಕಿದಾರ್ಗೆ ಗೊತ್ತಿಲ್ದೇ ಅವರೆಲ್ಲಾ ಹೋದ್ರಾ? ಈ ಚೌಕಿದಾರ್ ಚೌಕಿದಾರ ಅಲ್ಲ…ಭಾಗಿದಾರ್, ದೇಶದ ಭ್ರಷ್ಟಾಚಾರದಲ್ಲಿ ಭಾಗಿದಾರ್. ವಿದೇಶಗಳಲ್ಲಿ ಇರುವಂತಹ ಕಪ್ಪು ಹಣ ತಂದು ಎಲ್ಲರ ಅಕೌಂಟ್ಗೆ 15 ಲಕ್ಷ ರೂ ಹಾಕ್ತೀವಿ… 15 ಪೈಸೇ ಆದ್ರೂ ಹಾಕಿದ್ರಾ? ಇವ್ರ ಮನೆ ಹಾಳಾಗ? ಸ್ವತಂತ್ರ ಭಾರತದಲ್ಲಿ ಮೋದಿ ಅಷ್ಟು ಸುಳ್ ಹೇಳೋ ಪ್ರಧಾನಿಯನ್ನು ಕಂಡಿಲ್ಲ” ಎಂದು ಹರಿಹಾಯ್ದರು.
ಚೌಕಿದಾರ್ ಅಲ್ಲ, ಭ್ರಷ್ಟಾಚಾರದ ಭಾಗಿದಾರ್..!
TRENDING ARTICLES