Monday, November 4, 2024

‘ಇಲ್ಲಿ ರಿಜ್ವಾನ್​​ನ ಗೆಲ್ಲಿಸ್ತೀವಿ, ಮಂಡ್ಯದಲ್ಲಿ ಸುಮಲತಾ ಅವ್ರನ್ನು ಗೆಲ್ಲಿಸಿ’..!

ಬೆಂಗಳೂರು : ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ರಿಜ್ವಾನ್ ಅರ್ಷದ್ ಅವರನ್ನು ಗೆಲ್ಲಿಸ್ತೀವಿ. ಮಂಡ್ಯದಲ್ಲಿ ಸುಮಲತಾ ಅಂಬರೀಶ್ ಅವರನ್ನು ಗೆಲ್ಲಿಸಿ ಅಂತ ಕಾಂಗ್ರೆಸ್​ ಕಾರ್ಯಕರ್ತರು ಮಾಜಿ ಸಿಎಂ, ಸಿಎಲ್​ಪಿ ನಾಯಕ ಸಿದ್ದರಾಮಯ್ಯ ಅವರಲ್ಲಿ ಆಗ್ರಹಿಸಿದ್ದಾರೆ.
ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷದ್ ಅವರ ಪರ ಸಿದ್ದರಾಮಯ್ಯ ಅವರು ಪ್ರಚಾರ ಮಾಡುತ್ತಿರುವಾಗ ಅಲ್ಲಿ ನೆರೆದಿದ್ದ ಕಾರ್ಯಕರ್ತರು, ‘ನಾವಿಲ್ಲಿ ರಿಜ್ವಾನ್​ ಅರ್ಷದ್ ಅವರನ್ನು ಗೆಲ್ಲಿಸಿಕೊಳ್ಳುತ್ತೇವೆ. ಮಂಡ್ಯದಲ್ಲಿ ಸುಮಲತಾ ಅಂಬರೀಶ್ ಅವರನ್ನು ಗೆಲ್ಲಿಸಿ’ ಅಂತ ಕೂಗಿದರು. ಆದರೆ, ಸಿದ್ದರಾಮಯ್ಯ ಕೇಳಿಸಿಕೊಂಡರೂ ಕೇಳಿಸದಂತೆ ಮಾತು ಮುಂದುವರೆಸಿದ್ರು..!

RELATED ARTICLES

Related Articles

TRENDING ARTICLES