ಮಂಡ್ಯ : ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ರಾಕಿಂಗ್ ಸ್ಟಾರ್ ಯಶ್ ವಿರುದ್ಧ ಮಂಡ್ಯ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಬಹಿರಂಗವಾಗಿ ಹರಿ ಹಾಯ್ದಿದ್ದಾರೆ.
ಬಿಜೆಪಿ ಬೆಂಬಲಿತ ಅಭ್ಯರ್ಥಿಯ ಹಿರಿ ಮಗನೋ, ಕಿರಿ ಮಗನೋ ನಂಗೆ ಗೊತ್ತಿಲ್ಲ. ಅವರು ನನ್ ಯೋಗ್ಯತೆ ಬಗ್ಗೆ ಮಾತಾಡ್ತಾರೆ. ಅವರು ಹಿರಿ ಮಗನೋ, ಕಿರಿಮಗನೋ ಅಂತ ಅವರಿಗೇ ಗೊತ್ತಿರಬೇಕು. ಕುಮಾರಣ್ಣನ ಸ್ಟೇಟ್ಮೆಂಟ್ಗೆ ಪ್ರತಿಕ್ರಿಯೆ ಕೊಡೋವಷ್ಟು ಇವರು ದೊಡ್ಡವರಾಗಿದ್ದಾರೆ ಅಂತ ದರ್ಶನ್ ಮತ್ತು ಯಶ್ ವಿರುದ್ಧ ವ್ಯಂಗವಾಡುತ್ತಾ ವಾಗ್ದಾಳಿ ನಡೆಸಿದ್ರು.