ಮಂಡ್ಯ : ಸಿಎಂ ಕುಮಾರಸ್ವಾಮಿ ಅವರ ಪುತ್ರ, ಮಂಡ್ಯ ರಣಕಣದ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ರಾಕಿಂಗ್ ಸ್ಟಾರ್ ಯಶ್ ವಿರುದ್ಧ ಬಹಿರಂಗವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಂಡ್ಯದಲ್ಲಿ ಪ್ರಚಾರದ ವೇಳೆಯಲ್ಲಿ ಮಾತನಾಡಿದ ನಿಖಿಲ್. ಜನ್ರಿಗೆ ಒಂದ್ ಮಾತು ಹೇಳಲು ಇಷ್ಟಪಡ್ತೀನಿ. ನಮ್ ತಾತ ದೇವೇಗೌಡ್ರು ಪ್ರಧಾನಿಯಾಗಿದ್ದಾಗ ನಾವು ಬೆಂಗಳೂರಿನ ಕತ್ರಿಗುಪ್ಪೆಯಲ್ಲಿ 5 ಸಾವಿರ ರೂ ಬಾಡಿಗೆ ಮನೆಯಲ್ಲಿದ್ವಿ. ಆದ್ರೆ, ಇವತ್ತು ಬಾಡಿಗೆ ಕಟ್ಟದವ್ರು, ಬಾಡಿಗೆ ಕೊಡದೇ ಇಷ್ಟೆಲ್ಲಾ ಮಾತಾಡ್ತಾರೆ ಎಂದು ಯಶ್ ವಿರುದ್ಧ ಹರಿಹಾಯ್ದರು. ನೀವು ನನ್ನ ತಂದೆ-ತಾತಗೆ ಹೃದಯದಲ್ಲಿ ಸ್ಥಾನ ಕೊಟ್ಟಿದ್ದೀರ, ನಂಗೂ ಕೊಡ್ತೀರ ಅಂತ ಬಂದಿದ್ದೇನೆ ಎಂದು ಜನತೆಯಲ್ಲಿ ಮತಾ ಹಾಕುವಂತೆ ಮನವಿ ಮಾಡಿದ್ರು.