Sunday, December 8, 2024

ಸ್ಯಾಂಡಲ್​​ವುಡ್​​​ಗೂ ಕಾಲಿಟ್ಟ ‘ನಿಖಿಲ್​​ ಎಲ್ಲಿದ್ದಿಯಪ್ಪಾ’..!

ಕಳೆದ ವರ್ಷ ಇದೇ ಟೈಮ್​ನಲ್ಲಿ ‘ಈ ಸಲ ಕಪ್​ ನಮ್ದೇ’ ಅನ್ನೋದು ಸಿಕ್ಕಾಪಟ್ಟೆ ವೈರಲ್​ ಆಗಿತ್ತು. ಈ ಬಾರಿ ಅದಕ್ಕಿಂತ ಹೆಚ್ಚಾಗಿ ಸೌಂಡ್ ಮಾಡ್ತಿದೆ ‘ನಿಖಿಲ್ ಎಲ್ಲಿದ್ದಿಯಪ್ಪಾ’..!
ಮುಖ್ಯಮಂತ್ರಿ ಹೆಚ್​.ಡಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್​ ಕುಮಾರಸ್ವಾಮಿ ಅವರು ಮಂಡ್ಯ ರಣಕಣಕ್ಕೆ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದೇ ತಡ ಅವರ ಚೊಚ್ಚಲ ಚಿತ್ರ ‘ಜಾಗ್ವಾರ್​’ ಸಿನಿಮಾ ಆಡಿಯೋ ರಿಲೀಸ್​ ಕಾರ್ಯಕ್ರಮದಲ್ಲಿ ಕುಮಾರಸ್ವಾಮಿ ಅವರು ಮಾತನಾಡುತ್ತಾ, ನಿಖಿಲ್ ಅವರನ್ನು ಎಲ್ಲಿದ್ದಿಯಪ್ಪಾ ಎಂದು ಕರೆದಿದ್ದು ಟ್ರೋಲ್ ಆಗ ತೊಡಗಿದೆ. ಈಗ ಎಲ್ಲಿ ನೋಡಿದರೂ ನಿಖಿಲ್​ ಎಲ್ಲಿದ್ದಿಯಪ್ಪಾ ಮಾತೇ..!
ಇದೀಗ ‘ನಿಖಿಲ್​​ ಎಲ್ಲಿದ್ದಿಯಪ್ಪಾ’ ಸ್ಯಾಂಡಲ್​ವುಡ್​ಗೂ ಕಾಲಿಟ್ಟಿದೆ. ಟೈಟಲ್​ ಕೋರಿ ಸಿನಿಮಾ ತಂಡವೊಂದು ಫಿಲ್ಮ್​ ಚೇಂಬರ್ ಮೆಟ್ಟಿಲೇರಿದೆ. ಮೇ.23ರ ನಂತರ ನಿರ್ಧಾರ ತಿಳಿಸೋದಾಗಿ ಫಿಲ್ಮ್ ಚೇಂಬರ್ ಹೇಳಿದೆ.
ಇದರ ಜೊತೆಗೆ ಜೋಡೆತ್ತು, ಕಳ್ಳೆತ್ತು ಟೈಟಲ್​​​ಗ​​​ಳಿಗೂ ಡಿಮ್ಯಾಂಡ್​ ಬಂದಿದೆ.

RELATED ARTICLES

Related Articles

TRENDING ARTICLES