Wednesday, May 22, 2024

ಕಾಂಗ್ರೆಸ್​ ಟೈಟಾನಿಕ್​ನಂತೆ ಮುಳುಗಲಿದೆ: ಮೋದಿ

ಮುಂಬೈ: ಕಾಂಗ್ರೆಸ್ ಪಕ್ಷ ಟೈಟಾನಿಕ್​ನಂತೆ ಮುಳುಗಲಿದ್ದು, ಅದು ಶಾಶ್ವತವಾಗಿ ಇಲ್ಲದಾಗುವ ದಿನ ದೂರವಿಲ್ಲ ಅಂತ ಪ್ರಧಾನಿ ಮೋದಿ ಹೇಳಿದ್ದಾರೆ. ಮಹಾರಾಷ್ಟ್ರದ ನಂದೆಡ್​​ನಲ್ಲಿ ನಡೆದ ಚುನಾವಣಾ ರ‍್ಯಾಲಿಯಲ್ಲಿ ಮಾತನಾಡಿದ ಅವರು, “ಕಾಂಗ್ರೆಸ್​ನ ಸ್ಥಿತಿ ಟೈಟಾನಿಕ್​ಗಿಂತ ಭಿನ್ನವಿಲ್ಲ. ದಿನ ಹೋದಂತೆ ಪಕ್ಷ ಮುಳುಗುತ್ತಿದೆ” ಅಂತ ಹೇಳಿದ್ರು.

“ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 44ಸ್ಥಾನ ಕೆಳಗಿಳಿದಿದೆ. ಈ ಬಾರಿ ಕಾಂಗ್ರೆಸ್​ನ ಸ್ಥಿತಿ ಇನ್ನಷ್ಟು ಹೀನಾಯವಾಗಲಿದೆ. ಅದಕ್ಕಾಗಿಯೇ ಶರದ್ ಪವಾರ್, ಪ್ರಫುಲ್ ಪಟೇಲ್, ರಾಜೀವ್ ಸತವ್ ಸೇರಿ ಹಲವು ನಾಯಕರು ಚುನಾವಣೆಗೆ ಸ್ಪರ್ಧಿಸುತ್ತಿಲ್ಲ. ಇತ್ತೀಚೆಗೆ ತಮ್ಮ ಸ್ವಕ್ಷೇತ್ರದಲ್ಲಿ ಕಾಂಗ್ರೆಸ್​ ಅಧ್ಯಕ್ಷ ರಾಹುಲ್ ಗಾಂಧಿ ನಡೆಸಿದ ರ‍್ಯಾಲಿ ಸಂಪೂರ್ಣ ವಿಫಲವಾಗಿತ್ತು. ಒಂದೇ ಒಂದು ಪಕ್ಷದ ಬಾವುಟ ಕಂಡು ಬರಲಿಲ್ಲ. ಹಾಗಾಗಿ ರಾಹುಲ್​ ಸ್ಪರ್ಧಿಸಿದರೆ ಗೆಲ್ಲುವ ಸಾಧ್ಯತೆ ಇರುವಂತಹ ಕ್ಷೇತ್ರವನ್ನು ಮೈಕ್ರೋಸ್ಕೋಪ್ ಇಟ್ಟು ಹುಡುಕುವಂತಾಗಿದೆ” ಅಂತ ಹೇಳಿದ್ರು.

RELATED ARTICLES

Related Articles

TRENDING ARTICLES