Monday, September 25, 2023
Powertv Logo

Kannada Kannada English English Hindi Hindi Telugu Telugu Tamil Tamil Malayalam Malayalam

Homeರಾಜಕೀಯಗ್ರೌಂಡ್​ ರಿಪೋರ್ಟ್ : ಬೆಣ್ಣೆದೋಸೆ ನಗರಿಯಲ್ಲಿ 'ಕಮಲ' ಕಲಿ ಮಣಿಸಲು 'ಕೈ' ಹೊಸ ಲೆಕ್ಕಾಚಾರ!

ಗ್ರೌಂಡ್​ ರಿಪೋರ್ಟ್ : ಬೆಣ್ಣೆದೋಸೆ ನಗರಿಯಲ್ಲಿ ‘ಕಮಲ’ ಕಲಿ ಮಣಿಸಲು ‘ಕೈ’ ಹೊಸ ಲೆಕ್ಕಾಚಾರ!

ಗ್ರೌಂಡ್​ ರಿಪೋರ್ಟ್ 15 :ದಾವಣಗೆರೆ ಲೋಕಸಭಾ ಕ್ಷೇತ್ರ

ದಾವಣಗೆರೆ : ಹ್ಯಾಟ್ರಿಕ್ ಹೀರೊ, ಹಾಲಿ ಸಂಸದ ಜಿ.ಎಂ ಸಿದ್ದೇಶ್ವರ್​ ಮತ್ತು ಕಾಂಗ್ರೆಸ್​​​ನ ಎಚ್​.ಬಿ ಮಂಜಪ್ಪ ಅವರ ನಡುವಿನ ನೇರ ಹಣಾಹಣಿಗೆ ವೇದಿಕೆ ಆಗಿರುವ ಕ್ಷೇತ್ರ ಬೆಣ್ಣೆ ದೋಸೆ ನಗರಿ ದಾವಣಗೆರೆ ಲೋಕಸಭಾ ಕ್ಷೇತ್ರ. ಈ ಕ್ಷೇತ್ರದ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳಲ್ಲಿ 6 ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರಿದ್ದಾರೆ. 2ರಲ್ಲಿ ಕಾಂಗ್ರೆಸ್​ ಎಂಎಲ್​ಎಗಳಿದ್ದಾರೆ.
ಅಸೆಂಬ್ಲಿ ಕ್ಷೇತ್ರಗಳು ಮತ್ತು ಶಾಸಕರು
ದಾವಣಗೆರೆ ಉತ್ತರ ಬಿಜೆಪಿ ಎಸ್ ಎ ರವೀಂದ್ರನಾಥ್

ದಾವಣಗೆರೆ  ದಕ್ಷಿಣ – ಕಾಂಗ್ರೆಸ್ -ಶಾಮನೂರು ಶಿವಶಂಕರಪ್ಪ

ಹರಿಹರ- ಕಾಂಗ್ರೆಸ್- ರಾಮಪ್ಪ

ಹೊನ್ನಾಳಿ- ಬಿಜೆಪಿ-ಎಂ.ಪಿ ರೇಣುಕಾಚಾರ್ಯ

ಜಗಳೂರು- ಬಿಜೆಪಿ -ಎಸ್​.ವಿ ರಾಮಚಂದ್ರ

ಹರಪನಹಳ್ಳಿ -ಬಿಜೆಪಿ -ಕರುಣಾಕರರೆಡ್ಡಿ

ಚನ್ನಗಿರಿ- ಬಿಜೆಪಿ -ಮಾಡಾಳ್ ವಿರೂಪಾಕ್ಷಪ್ಪ

ಮಾಯಕೊಂಡ- ಬಿಜೆಪಿ -ಪ್ರೊ. ಲಿಂಗಣ್ಣ

ಲೋಕಸಭಾ ಚುನಾವಣೆ ಇತಿಹಾಸವನ್ನು ನೋಡಿದ್ರೆ 6 ಬಾರಿ ಕಾಂಗ್ರೆಸ್​​ ಅಭ್ಯರ್ಥಿಗಳು, 5 ಬಾರಿ ಬಿಜೆಪಿ ಅಭ್ಯರ್ಥಿಗಳು ಈ ಕ್ಷೇತ್ರದಿಂದ ಲೋಕಸಭೆ ಪ್ರವೇಶಿಸಿದ್ದಾರೆ.

1977 : ಕೊಂಡಾಜಿ ಬಸಪ್ಪ, ಕಾಂಗ್ರೆಸ್​
1980 : ಟಿ.ವಿ ಚಂದ್ರಶೇಖರಪ್ಪ, ಕಾಂಗ್ರೆಸ್​
1984, 1989, 1991 :ಚನ್ನಯ್ಯ ಒಡೆಯರ್, ಕಾಂಗ್ರೆಸ್​
1996 : ಜಿ. ಮಲ್ಲಿಕಾರ್ಜುನಪ್ಪ, ಬಿಜೆಪಿ
1998 : ಶಾಮನೂರು ಶಿವಶಂಕರಪ್ಪ, ಕಾಂಗ್ರೆಸ್​
1999 : ಜಿ. ಮಲ್ಲಿಕಾರ್ಜುನಪ್ಪ, ಬಿಜೆಪಿ
2004,2009, 2014 : ಜಿ.ಎಂ ಸಿದ್ದೇಶ್ವರ

2014ರ ಚುನಾವಣೆ : ಕಳೆದ ಬಾರಿಯ ಚುನಾವಣೆಯಲ್ಲಿ ಬಿಜೆಪಿಯ ಜಿ.ಎಂ ಸಿದ್ದೇಶ್ವರ್​ ಅವರು ಎಸ್​​.ಎಸ್​ ಮಲ್ಲಿಕಾರ್ಜುನ್ ಅವರ ಎದುರು 17,607 ಮತಗಳ ಅಂತರದ ಗೆಲುವು ಪಡೆದಿದ್ದರು. ಜಿ.ಎಂ. ಸಿದ್ದೇಶ್ವರ ಅವರಿಗೆ 5,18,894 ಮತಗಳು, ಎಸ್.ಎಸ್.ಮಲ್ಲಿಕಾರ್ಜುನ್ ಅವರಿಗೆ 5,01,287 ಮತಗಳು ಬಂದಿದ್ದವು.

‘ಮತ’ಗಣಿತ 

ಪುರುಷರು 8,11,697

ಮಹಿಳೆಯರು 7,92,030

ಒಟ್ಟು 16,03, 727

‘ಜಾತಿ’ ಗಣಿತ

ಲಿಂಗಾಯತ 4,23,220

ಕುರುಬ 1,32,779

ಎಸ್​​ಸಿ 3,34,214

ಎಸ್​ಟಿ 1,92,224

ಮುಸ್ಲಿಂ 1,93,989

ಬ್ರಾಹ್ಮಣ 11,218

ಮಡಿವಾಳ 19770

ಉಪ್ಪಾರ 40,341

ಮರಾಠ 34,488

ಗೊಲ್ಲರು 22,252

ವಿಶ್ವಕರ್ಮ 20,829

ನೇಕಾರ 14,122

ರೆಡ್ಡಿ 20,020

ದೇವಾಂಗ 11,408

ಬಾರಿಕಾರು 29,121

ವೈಶ್ಯ 7,655

ಸವಿತಾ ಸಮಾಜ 5,626

ಇತರೆ 39,550

ಒಟ್ಟು 12,03,772

ಅಭ್ಯರ್ಥಿಗಳ ಬಲಾಬಲ

ಜಿ.ಎಂ. ಸಿದ್ದೇಶ್ವರ ಅವರಿಗೆ ಪೂರಕ ಅಂಶಗಳೇನು?
ಈ ಕ್ಷೇತ್ರ ಪ್ರಾಬಲ್ಯ ಹೊಂದಿರುವ ಲಿಂಗಾಯತ ಸಮುದಾಯಕ್ಕೆ ಸೇರಿರುವುದು
ಹ್ಯಾಟ್ರಿಕ್​ ಗೆಲವು ಸಾಧಿಸಿರುವುದು
ಕ್ಷೇತ್ರಾದ್ಯಂತ ಹಳ್ಳಿ ಹಳ್ಳಿಗಳಿಗೂ ಭೇಟಿ ನೀಡಿ ಜನರಿಗೆ ಹತ್ತಿರುವಾಗಿರುವುದು
ಶಾಮನೂರು ಕುಟುಂಬ ಚುನಾವಣೆ ಕಣದಿಂದ ಹಿಂದೆ ಸರಿದಿರುವುದು
ಪ್ರಧಾನಿ ನರೇಂದ್ರ ಮೋದಿ ಅಲೆ
ಉತ್ಸಾಹದಿಂದ ಕೆಲಸ ಮಾಡುತ್ತಿರುವ ಬಿಜೆಪಿ ಪರ ಸಂಘಟನೆಗಳು
ಕ್ಷೇತ್ರದಲ್ಲಿ 6 ಬಿಜೆಪಿ ಶಾಸಕರು ಇರುವುದು
ಸ್ಮಾರ್ಟ್​ ಸಿಟಿ ಯೋಜನೆ, ಅಮೃತ ಸಿಟಿ ಯೋಜನೆ ಕೈ ಹಿಡಿಯುವ ಸಾಧ್ಯತೆ
ಸಾಕಷ್ಟು ಅಭಿವೃದ್ಧಿ ಕಾರ್ಯಗಳಿಂದ ಜನ ಮನ್ನಣೆ ಗಳಿಸಿರುವುದು

ಜಿ.ಎಂ. ಸಿದ್ದೇಶ್ವರ ಅವರಿಗೆ ಆತಂಕಗಳೇನು?
ಹಿಂದಿ ಭಾಷಾ ಜ್ಞಾನದ ಕೊರತೆ
ಸಂವಹನ ಕೊರತೆಯಿಂದ ಮಂತ್ರಿ ಗಿರಿ ಕಳೆದುಕೊಂಡ್ರು ಎನ್ನುವ ಮಾತುಗಳು
ಕ್ಷೇತ್ರದಲ್ಲಿ ಶಾಮನೂರು ಕುಟುಂಬದ ಪ್ರಭಾವ ಇರುವುದು

ಎಚ್​. ಬಿ. ಮಂಜಪ್ಪ ಅವರಿಗೆ ಪೂರಕ ಅಂಶಗಳೇನು?
ಅಹಿಂದ ವರ್ಗಕ್ಕೆ ಸೇರಿರುವುದು
ಕ್ಷೇತ್ರದಲ್ಲಿರುವ ಶಾಮನೂರು ಕುಟುಂಬದ ಬೆಂಬಲ
ಕುರುಬ ಸಮುದಾಯದ ಪ್ರಾಬಲ್ಯ
ಹಿಂದುಳಿದ ವರ್ಗಗಳ ಮತ ಇಲಿಯುವ ನಿರೀಕ್ಷೆ
ಈ ಕ್ಷೇತ್ರದಲ್ಲಿ 3 ಬಾರಿ ಗೆದ್ದವರು 4ನೇ ಬಾರಿ ಗೆದ್ದಿಲ್ಲ
ಇದು ಅಭ್ಯರ್ಥಿ, ಕಾರ್ಯಕರ್ತರ ಮನೋಬಲ ಹೆಚ್ಚಿಸಿದೆ
ಸಾಮಾನ್ಯ ಕಾರ್ಯಕರ್ತರನ್ನು ಗುರುತಿಸಿ ಕಾಂಗ್ರೆಸ್​ ಟಿಕೆಟ್ ನೀಡಿರುವುದು

ಎಚ್​.ಬಿ. ಮಂಜಪ್ಪ ಅವರಿಗೆ ಆತಂಕಗಳೇನು?

ಕ್ಷೇತ್ರಕ್ಕೆ ಹೊಸ ಮುಖ
ಅಹಿಂದ ಮತಗಳನ್ನೇ ಹೆಚ್ಚು ನೆಚ್ಚಿಕೊಂಡಿರುವುದು
ಬಿಜೆಪಿ ಹಿರಿಯ ನಾಯಕ ಜಿ.ಎಂ. ಸಿದ್ದೇಶ್ವರರನ್ನು ಸೋಲಿಸುವುದು ಸುಲಭವಲ್ಲ

ಪ್ರಭಾವ ಬೀರುವ ಅಂಶಗಳು
ನಗರದ ಮಂಡಕ್ಕಿ ಭಟ್ಟಿಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಕನಿಷ್ಠ ಸೌಲಭ್ಯಗಳು ಸಿಗುತ್ತಿಲ್ಲ
ತುಂಗಭದ್ರಾ ನದಿ ನೀರನ್ನು ಜಿಲ್ಲೆ ಆಶ್ರಯಿಸಿದ್ದು, ಕುಡಿಯುವ ನೀರಿನ ಸಮಸ್ಯೆ ಹೆಚ್ಚು
ಬೇಸಿಗೆಯಲ್ಲಿ ಕುಡಿಯುವ ನೀರನ್ನು ಪೂರೈಕೆ ಮಾಡಲು ಮಹಾನಗರ ಪಾಲಿಕೆ ಪರದಾಡುತ್ತದೆ
ಜಿಲ್ಲೆಯ ಗ್ರಾಮಾಂತರ ಪ್ರದೇಶಗಳಿಗೆ ಇನ್ನೂ ಸರಿಯಾದ ಸಾರಿಗೆ ಸೌಕರ್ಯ ಸಿಕ್ಕಿಲ್ಲ
ನೆನೆಗುದಿಗೆ ಬಿದ್ದ ಅಶೋಕ ರೈಲ್ವೆ ಗೇಟ್ ಫ್ಲೈ ಓವರ್ ಕಾಮಗಾರಿ
ದಾವಣಗೆರೆ – ಚಿತ್ರದುರ್ಗ – ಬೆಂಗಳೂರು ನೇರ ರೈಲ್ವೆ ಮಾರ್ಗದ ಸಂಪರ್ಕ ಇಲ್ಲದಿರುವುದು
ಕೊಟ್ಟೂರು – ಹರಿಹರ ರೈಲ್ವೆ ಮಾರ್ಗ ಸರಿಯಾಗಿ ಅನುಷ್ಠಾನ ಆಗದಿರುವುದು

ಸಂಸದರು ಮಾಡಿದ್ದೇನು? (ಅನುದಾನ ಬಳಕೆ) (ಜಿ.ಎಂ. ಸಿದ್ದೇಶ್ವರ)
ಕ್ಷೇತ್ರಕ್ಕೆ ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ಒಟ್ಟು 10 ಸಾವಿರ ಕೋಟಿ ರೂ. ತಂದ ಹೆಗ್ಗಳಿಕೆ
ನಗರಕ್ಕೆ ಸ್ಮಾರ್ಟ್ ಸಿಟಿಗೆ 2,000 ಕೋಟಿ ರೂಪಾಯಿ
ಅಮೃತ್ ಸಿಟಿ ಯೋಜನೆಗೆ 1,500 ಕೋಟಿ ರೂ. ತಂದ ಹೆಗ್ಗಳಿಕೆ
ಹರಿಹರ – ಬೆಂಗಳೂರು ಇಂಟರ್​ಸಿಟಿ ರೈಲು ಓಡಾಟ ಆರಂಭ
1,141 ಕೋಟಿ ರೂ. ವೆಚ್ಚದಲ್ಲಿ ಹುಬ್ಬಳ್ಳಿಯವರೆಗೆ ದ್ವಿಪಥ ರೈಲು ಮಾರ್ಗ
ಫ್ರಾನ್ಸ್ ಸಹಭಾಗಿತ್ವದಲ್ಲಿ ಜಲಸಿರಿ ಯೋಜನೆ
1 ಸಾವಿರ ಕೋಟಿ ರೂ. ವೆಚ್ಚದಲ್ಲಿ ಚಿತ್ರದುರ್ಗ – ದಾವಣಗೆರೆ 6 ಪಥದ ಹೆದ್ದಾರಿ ರಸ್ತೆ ನಿರ್ಮಾಣ
ಚಿತ್ರದುರ್ಗ-ಜಗಳೂರು-ಹೊಸಪೇಟೆ ರಸ್ತೆಗೆ 1,388 ಕೋಟಿ ರೂಪಾಯಿ
ಚಿತ್ರದುರ್ಗ-ಚನ್ನಗಿರಿ-ಶಿವಮೊಗ್ಗ ರಸ್ತೆಗೆ 334 ಕೋಟಿ ರೂಪಾಯಿ ವೆಚ್ಚ
ಕೇಂದ್ರಿ ವಿದ್ಯಾಲಯ ಸ್ಥಾಪನೆ, ಮಕ್ಕಳಿಗೆ ಬಹಳ ಅನುಕೂಲ
966 ಕೋಟಿ ವೆಚ್ಚದಲ್ಲಿ ಹರಿಹರದಲ್ಲಿ 2ಜಿ ಎಥೆನಾಲ್ ಘಟಕ
ತುಂಗಾನಾಲಾ ಆಧುನೀಕರಣಕ್ಕೆ 343 ಕೋಟಿ ರೂಪಾಯಿ
ಪಾಸ್​ಪೋರ್ಟ್​​ ಸೇವಾಕೇಂದ್ರ, ಐಟಿ ಪಾರ್ಕ್‌
ವಿದ್ಯುತ್ ಕಾಮಗಾರಿಗಳಿಗೆ 102 ಕೋಟಿ ರೂಪಾಯಿ ಮೀಸಲು
ರಾಷ್ಟ್ರೀಯ ಮಾನಸಿಕ ಆರೋಗ್ಯ ಆಸ್ಪತ್ರೆ ನಿರ್ಮಾಣ

ಕ್ಷೇತ್ರ ಪರಿಚಯ
ಸಂತೆಬೆನ್ನೂರು ಪುಷ್ಕರಣಿ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣ
ಏಷ್ಯಾ ಖಂಡದ ಎರಡನೇ ಅತಿದೊಡ್ಡ ಕೆರೆ ಶಾಂತಿಸಾಗರ
ಪುರಾಣ ಪ್ರಸಿದ್ಧ ಹರಿಹರದ ಹರಿಹರೇಶ್ವರ ದೇವಸ್ಥಾನ
ಕಣ್ಮನ ಸೆಳೆಯುವ ದೇಶದ ಅತಿ ದೊಡ್ಡ ಗಾಜಿನ ಮನೆ
ಉಚ್ಚಂಗಿದುರ್ಗದ ದೇವಸ್ಥಾನ, ಕಲ್ಲೇಶ್ವರ ದೇಗುಲ
ಹೆಚ್ಚು ಪ್ರಸಿದ್ಧ ದಾವಣಗೆರೆಯ ಬೆಣ್ಣೆ ದೋಸೆ

LEAVE A REPLY

Please enter your comment!
Please enter your name here

Most Popular

Recent Comments