Monday, December 9, 2024

6ನೇ ಮ್ಯಾಚ್​​ನಲ್ಲೂ ಕೊಹ್ಲಿ ಪಡೆಗೆ ಸೋಲು..!

ಬೆಂಗಳೂರು : ಟೀಮ್​ ಇಂಡಿಯಾದ ಕ್ಯಾಪ್ಟನ್​ ವಿರಾಟ್​ ಕೊಹ್ಲಿ ನೇತೃತ್ವದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಸತತ 6 ನೇ ಮ್ಯಾಚ್​ನಲ್ಲೂ ಸೋತು ಅಭಿಮಾನಿಗಳಿಗೆ ನಿರಾಸೆಯುಂಟು ಮಾಡಿದೆ.
ತವರಿನಂಗಳ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​​ ವಿರುದ್ಧ ನಡೆದ ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್​ಸಿಬಿ ತನ್ನ ಪಾಲಿನ 20 ಓವರ್​ಗಳಲ್ಲಿ 8 ವಿಕೆಟ್​ ಕಳೆದುಕೊಂಡು 149 ರನ್ ಗಳಿಸಿತು. ನಾಯಕ ವಿರಾಟ್​ ಕೊಹ್ಲಿ (41) ಮತ್ತು ಮೊಯೀನ್ ಅಲಿ (32) ತಂಡದ ಪರ ಅತೀ ಹೆಚ್ಚು ರನ್​ಗಳಿಸಿದ ಆಟಗಾರರೆನಿಸಿದರು.
ಗುರಿ ಬೆನ್ನತ್ತಿದ ಡೆಲ್ಲಿ ಇನ್ನೂ 7 ಎಸೆತಗಳು ಬಾಕಿ ಇರುವಂತೆಯೇ ಗುರಿ ತಲುಪಿತು. ಡೆಲ್ಲಿ ಪರ ನಾಯಕ ಶ್ರೇಯಸ್​ ಅಯ್ಯರ್ 67 ರನ್ ಬಾರಿಸಿ ಮಿಂಚಿದ್ರು.

RELATED ARTICLES

Related Articles

TRENDING ARTICLES