ರಾಜಕೀಯ ನಾಯಕರು, ಜನಪ್ರತಿನಿಧಿಗಳು ಕೆಲವೊಮ್ಮೆ ಏನ್ ಮಾತಾಡ್ತಾರೆ ಅಂತ ಬಹುಶಃ ಅವರಿಗೇ ಗೊತ್ತಿರಲಿಕ್ಕಿಲ್ಲ. ವಿರೋಧಿ ಪಕ್ಷದ ನಾಯಕರನ್ನು ಟೀಕಿಸುವ ಭರದಲ್ಲಿ ಮನಬಂದಂತೆ ಮಾತಾನಾಡುತ್ತಾರೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ನೇತೃತ್ವದ ಕೇಂದ್ರ ಸರ್ಕಾರವನ್ನು ಟೀಕಿಸುವ ಭರದಲ್ಲಿ ವಿಪಕ್ಷಗಳ ನಾಯಕರು ಮಾತನಾಡುತ್ತಿರುವ ಮಾತು ದೇಶದ ಭದ್ರತೆ ಬಗ್ಗೆ ಕೈಗೊಂಡ ಕ್ರಮಗಳನ್ನೇ ಪ್ರಶ್ನಿಸುವಂತಿರುತ್ತವೆ.
ಇತ್ತೀಚೆಗೆ ರಾಯಚೂರು ಕಾಂಗ್ರೆಸ್ ಸಂಸದ ಬಿ.ವಿ ನಾಯಕ್ ಅವರು ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಮಾತನಾಡಿದ್ದ ವಿಡಿಯೋ ಈಗ ಮತ್ತೆ ಮುನ್ನಲೆಗೆ ಬಂದಿದ್ದು, ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಹಾಲಿ ಸಂಸದರು, ರಾಯಚೂರು ಕ್ಷೇತ್ರದ ಮೈತ್ರಿ ಅಭ್ಯರ್ಥಿ ಬಿ.ವಿ ನಾಯಕ್ ಅವರ ಪ್ರಕಾರ ಪಾಕಿಸ್ತಾನ ಪಾಪಾ ತುಂಬಾ ಬಡ ರಾಷ್ಟ್ರವಂತೆ. ಈ ರಾಷ್ಟ್ರದ ಮೇಲೆ ಮೋದಿ ಪೌರುಷ ಮೆರೆದಿದ್ದಾರಂತೆ. ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಅನ್ನೋ ರೀತಿಯಲ್ಲಿ ಮೋದಿ, ಬಡ ರಾಷ್ಟ್ರ ಪಾಕ್ ಮೇಲೆ ದಾಳಿ ಮಾಡಿಸಿದ್ದಾರೆ ಅಂತ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ತುಂಬಾ ಹಗುರವಾಗಿ ಮಾತಾಡಿದ್ದರು. ಈ ಬಗ್ಗೆ ಬಿಜೆಪಿ ರಾಜ್ಯ ಚುನಾವಣಾ ಆಯೋಗಕ್ಕೆ ದೂರು ನೀಡಿದೆ. ಸದ್ಯ ಬಿ.ವಿ ನಾಯಕರ ಹೇಳಿಕೆ ವಿವಾದವನ್ನು ಸೃಷ್ಟಿಸಿದೆ.
ಬಿ.ವಿ ನಾಯಕರ ಕಣ್ಣಿ ಪಾಕಿಸ್ತಾನ ಯಾವ ರೀತಿಯಲ್ಲಿ ಪಾಪದ ರಾಷ್ಟ್ರದಂತೆ ಕಾಣುತ್ತೋ..! ಆ ಪಾಪಿ ರಾಷ್ಟ್ರ ಸಾಲದಲ್ಲಿ ಮುಳುಗಿರೋದು, ಭಿಕ್ಷೆ ಎತ್ತುತ್ತಿರೋದು ಜಗಜ್ಜಾಹಿರ. ಆದರೆ. ಉಗ್ರರನ್ನು ಸಾಕಿ ಸಲಹಲು ಆ ರಣಹೇಡಿ ರಾಷ್ಟ್ರದ ಬಳಿ ದುಡ್ಡಿದೆ. ಅಷ್ಟೇ ಅಲ್ಲದೆ ಭಾರತಕ್ಕೆ ಉಗ್ರರನ್ನು ನುಗ್ಗಿಸಿ, ಗಡಿಯಲ್ಲಿ ಮತ್ತೆ ಮತ್ತೆ ಶಾಂತಿ ಕದಡುವ ಕೆಲಸವನ್ನು ಮಾಡೋ ಪಾಪಿ ರಾಷ್ಟ್ರವದು. ಉಗ್ರರನ್ನು ಸಾಕೋ ರಾಷ್ಟಕ್ಕೆ ಬಡ ರಾಷ್ಟ್ರ, ಅಯ್ಯೋ ಪಾಪಾ ಅಂತೀರಲ್ಲಾ ಬಿ.ವಿ ನಾಯಕರ್ರೇ..? ನಿಮ್ಮನ್ನೇ ನೀವು ಪ್ರಶ್ನಿಸಿಕೊಳ್ಳಿ.
ಉಗ್ರರನ್ನು ಪೋಷಿಸುತ್ತಾ… ಪದೇ ಪದೇ ದಾಳಿ ಮಾಡುತ್ತಿರೋ ಪಾಪಿ ರಾಷ್ಟ್ರದ ಪರ ಮಾತಾಡ್ತೀರಲ್ಲ? ಪುಲ್ವಾಮಾ ದಾಳಿಯಲ್ಲಿ 40 ಯೋಧರು ಹುತಾತ್ಮರಾದ ಬಗ್ಗೆ ನಿಮಗೆ ಅಯ್ಯೋ..ಪಾಪಾ ಅಂತ ಅನಿಸಲ್ಲ..! ಆದ್ರೆ, ಆ ದಾಳಿಗೆ ಪ್ರತಿಕಾರವಾಗಿ ನಡೆಸಿದ ಏರ್ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಹಗುರವಾಗಿ ಮಾತನಾಡ್ತೀರ..? ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಅಂತೀರ..? ಈ ದೇಶದ ಒಬ್ಬ ಪ್ರಜೆಯಾಗಿ
ಬಿ.ವಿ ನಾಯಕ್ ಅವ್ರೇ ಉಗ್ರರನ್ನು ಪೋಷಿಸೋ ‘ಪಾಪಿ’ಸ್ತಾನ ಬಡ ರಾಷ್ಟ್ರವೇ..?
TRENDING ARTICLES