Friday, September 20, 2024

ತವರಿನಲ್ಲಿ ಮುಗ್ಗರಿಸಿದ ಎಸ್​ಆರ್​ಹೆಚ್

ಹೈದರಾಬಾದ್ : ರೋಹಿತ್​ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್​​ ಭುವನೇಶ್ವರ್ ಕುಮಾರ್  ನೇತೃತ್ವದ ಸನ್​ರೈಸರ್ಸ್​ ಹೈದರಾಬಾದ್​ ತಂಡವನ್ನು ಅದರ ತವರು ನೆಲದಲ್ಲೇ ಮಣಿಸಿದೆ. 

ಹೈದರಾಬಾದ್​ನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ 7 ವಿಕೆಟ್ ನಷ್ಟಕ್ಕೆ 136ರನ್ ಗಳಿಸಿತು. ಮುಂಬೈ ಪರ ಪೊಲಾರ್ಡ್​ 46ರನ್​ಗಳಿಸಿ ತಂಡದ ಪರ ಗರಿಷ್ಠ ಸ್ಕೋರರ್ ಅನಿಸಿಕೊಂಡರು. 

137 ರನ್​ ಗುರಿ ಬೆನ್ನತ್ತಿದ ಎಸ್​ಆರ್​ಹೆಚ್​ ಕೇವಲ 96ರನ್​ಗಳಿಗೆ ಆಲೌಟ್​ ಆಗುವುದರೊಂದಿಗೆ ಹೀನಾಯ ಸೋಲನುಭವಿಸಿತು. ಮುಂಬೈ ಪರ ಅಲ್ಜಾರಿ ಜೋಸೆಫ್ ಪದಾರ್ಪಣೆ ಪಂದ್ಯದಲ್ಲೇ 6 ವಿಕೆಟ್​ ತೆಗೆದು ಮಿಂಚಿದ್ರು. 

RELATED ARTICLES

Related Articles

TRENDING ARTICLES