Friday, September 20, 2024

ಕೆಜಿಎಫ್ ನಂತ್ರ ರಾಕಿ ಭಾಯ್ ಆಗ್ತಾರಾ ‘ಕಿರಾತಕ’?

ಇವತ್ತು ಯಶ್ ಆಲ್ ಇಂಡಿಯಾ ಸ್ಟಾರ್ . ಕೆಜಿಎಫ್ ಅನ್ನೋ ಒಂದು ಸಿನಿಮಾ ರಾಕಿಂಗ್​ ಸ್ಟಾರ್​ ಯಶ್ ಅವ್ರಿಗೆ ದೊಡ್ಡ ಮಟ್ಟದ ಹೆಸರು ತಂದುಕೊಟ್ಟಿದೆ . ಯಶ್ ಅವ್ರ ಕಾಲ್ ಶೀಟ್​ಗಾಗಿ ಅದೆಷ್ಟೋ ನಿರ್ಮಾಪಕರು, ನಿರ್ದೇಶಕರು ಮನೆ ಮುಂದೆ ಕ್ಯೂ ನಿಂತಿದ್ದಾರೆ . ಅಷ್ಟೇ ಅಲ್ಲದೆ ವಿಶ್ವ ಚಿತ್ರರಂಗ ಇವತ್ತು ಸ್ಯಾಂಡಲ್​ವುಡ್​ನತ್ತ ಚಿತ್ತ ನೆಟ್ಟಿರೋದಕ್ಕೆ ಕಾರಣ ಕೆಜಿಎಫ್ ಸಿನಿಮಾ ಅಂದ್ರೆ ತಪ್ಪಗೋದಿಲ್ಲ.
ಯಶ್ ಅವರ ಇವತ್ತಿನ ಈ ಮಟ್ಟದ ಸಕ್ಸಸ್ ಗೆ ಆ ಒಂದು ಚಿತ್ರ ಕಾರಣ .

ಯೆಸ್ .. ಆ ಚಿತ್ರವೇ ಕಿರಾತಕ .. ಕಿರಾತಕ ಚಿತ್ರ ಬರೋದಕ್ಕೆ ಮುನ್ನ ಯಶ್ ಅವ್ರ ಯಾವ ಸಿನಿಮಾ ಕೂಡಾ ಹೇಳಿಕೊಳ್ಳೋ ಮಟ್ಟಿಗೆ ಹಿಟ್ ಆಗಿರಲಿಲ್ಲ . ಮೊಗ್ಗಿನ ಮನಸ್ಸು ಹಿಟ್ ಆದರೂ ಆ ಸಕ್ಸಸ್ ಯಶ್ ಅವ್ರಿಗೆ ಸಲ್ಲಿರಲಿಲ್ಲ. ಯಾವಾಗ ಕಿರಾತಕ ಸಿನಿಮಾ ಹಿಟ್ ಆಯಿತೋ ಯಶ್ ಅವ್ರಿಗೆ ಒಂದು ಬ್ರಾಂಡ್ ತಂದು ಕೊಟ್ಟಿದ್ದು ಸುಳಲ್ಲ.
ಕಿರಾತಕ ಚಿತ್ರದ ಮಂಡ್ಯ ನೇಟಿವಿಟಿ ಜನರಿಗೆ ಇಷ್ಟವಾಗಿದ್ದು . ಯಶ್ ಅವರ ಸಹಜ ನಟನೆಗೆ ಜನರು ಫಿದಾ ಆಗಿದ್ದರು . ಈ ಚಿತ್ರದ ನಂತ್ರ ಯಶ್ ಅವ್ರು ಸಾಲು ಸಾಲು ಹಿಟ್ ಕೊಟ್ಟರು . ಒಂದು ರೀತಿಯಲ್ಲಿ ಕೆಜಿಎಫ್ ಸಕ್ಸಸ್ ಗೆ ಯಶ್ ಅವ್ರಿಗೆ ಭದ್ರ ಬುನಾದಿ ಹಾಕಿ ಕೊಟ್ಟಿದ್ದು ಇದೆ ಕಿರಾತಕ . ಕಿರಾತಕ ಚಿತ್ರದ ನಂತ್ರ ಯಶ್ ಜಾತಕವೇ ಬದಲಾಗಿದ್ದು ಮಾತ್ರ ನಿಜ.
ಈಗ ಕಿರಾತಕ ಚಿತ್ರದ ಸೀಕ್ವೆಲ್ ಬಗ್ಗೆ ಹಲವಾರು ಸುದ್ದಿ ಗಳು ಕೇಳಿಬಂದಿದ್ವು . ಹತ್ತು ದಿನಗಳ ಕಾಲ ಚಿತ್ರೀಕರಣ ಪೂರ್ಣ ಮಾಡಿದ್ದ ಕಿರಾತಕ ಸಿನಿಮಾ ಸಧ್ಯಕ್ಕೆ ನಿಂತು ಹೋಗಿದೆ . ಇದರ ಬೆನ್ನಲ್ಲೇ ನಿರ್ದೇಶಕ ಅನಿಲ್ ಹೊಸ ಸಿನಿಮಾ ಕೈಗೆತ್ತಿಕೊಂಡಿದ್ದು . ಯಶ್ ಮತ್ತೆ ರಾಕಿ ಭಾಯ್ ಅವತಾರದಲ್ಲಿ ಕಾಣಿಸಿಕೊಂಡಿದ್ದು ಎಲ್ಲವೂ ಹಳೆ ವಿಷಯ. ಇದೆಲ್ಲಾ ಗಮನಿಸಿದ ಕೆಲವ್ರು ರಾಕೀ ಭಾಯ್ ‘ಕಿರಾತಕ’ನ ಕತ್ತು ಹಿಸುಕಿದ್ರು ಅಂತ ಮಾತನಾಡಿಕೊಂಡರು..!
ಸಧ್ಯ ಹೊಸ ವಿಷಯ ಏನು ಅಂದ್ರೆ ಕಿರಾತಕ ಸೀಕ್ವೆಲ್ ಬರೋದು ಕನ್ಫರ್ಮ್ . ಕೆಜಿಎಫ್ ಆದ್ಮೇಲೆ ಯಶ್ ನಟಿಸೋದು ಪಕ್ಕಾ ಆಗಿದೆ . ಯಾಕಂದ್ರೆ ಯಶ್ ಅವ್ರು ಈ ಮಟ್ಟದ ಗೆಲುವಿಗೆ ಸಹಾಯ ಮಾಡಿದ್ದು ನಿರ್ಮಾಪಕ ಜಯಣ್ಣ , ಜಯಣ್ಣ ಅವರ ಬ್ಯಾನರ್ ನಲ್ಲಿ ಕಿರಾತಕ ಸೀಕ್ವೆಲ್ ಬರುತ್ತಿದೆ ಹಾಗಾಗಿ ಯಶ್ ಈ ಸಿನಿಮಾದಿಂದ ಹಿಂದೆ ಸರಿಯೋ ಮಾತೆ ಇಲ್ಲ ಅನ್ನುತ್ತಿದೆ ಯಶ್ ಅವ್ರ ಆಪ್ತ ಮೂಲಗಳು
ಕೆಜಿಎಫ್ ಚಿತ್ರದ ಮುಗಿದ ಮೇಲೆ ರಾಕೀಭಾಯ್ ಕಿರಾತಕನ ಅವತಾರ ಎತ್ತಲಿದ್ದಾರೆ . ಈ ಹಿಂದೆ ಯಶ್ ಕೂಡಾ ಇದನ್ನ ಸ್ಪಷ್ಟ ಪಡಿಸಿದ್ದರು .ಕೆಜಿಎಫ್ ಯಶಸ್ಸು ತಲೆಗೆ ಹತ್ತಿಲ್ಲ ಅನ್ನೋ ಮಾತುಗಳಿಂದ ಕಿರಾತಕನ ಬಗ್ಗೆ ಯಶ್ ಗುಟ್ಟು ಬಿಟ್ಟುಕೊಟ್ಟಿದ್ದರು.
ಒಟ್ಟಿನಲ್ಲಿ ಯಶ್ ಅವ್ರಿಗೆ ಬ್ರ್ಯಾಂಡ್ ವ್ಯಾಲ್ಯೂ ತಂದು ಕೊಟ್ಟಿದ್ದ ಗೂಳಿ ನಂದೀಶನ ಪಾತ್ರದಲ್ಲಿ ಯಶ್ ಮತ್ತೆ ಬರಲಿದ್ದಾರೆ . ರಾಕೀ ಭಾಯ್ ಅವ್ರ ಕಿರಾತಕನ ಅವತಾರ ನೋಡಲು ಇನ್ನು ಒಂದೂವರೆ ವರ್ಷ ಕಾಯಲೇ ಬೇಕು . ಈ ಸಮಯದಲ್ಲಿ ಮತ್ತೆ ಏನಾದ್ರು ನೆಗೆಟಿವ್ ಬದಲಾವಣೆಗಳಾದ್ರು ಅಚ್ಚರಿ ಪಡೆಬೇಕಾಗಿಲ್ಲ . ಆದ್ರೆ ಅಭಿಮಾನಿಗಳು ಕಿರಾತಕನ ಅವತಾರದಲ್ಲಿ ಯಶ್ ಅವರನ್ನ ನೋಡೋಕೆ ಕಾಯ್ತಾ ಇರೋದು ಮಾತ್ರ ಸತ್ಯ.

-ಮನೋಜ್ ನರಗುಂದಕರ್

RELATED ARTICLES

Related Articles

TRENDING ARTICLES