Thursday, December 26, 2024

ಯುಗಾದಿ ಹಬ್ಬಕ್ಕೆ ಸ್ಯಾಂಡಲ್​​ವುಡ್​ನಿಂದ ‘ಪೋಸ್ಟರ್ಸ್​’ ಗಿಫ್ಟ್..!

ಯುಗಾದಿ ಹಬ್ಬದ ಸಂಭ್ರಮ ಸ್ಯಾಂಡಲ್​​​ವುಡ್​​ನಲ್ಲೂ ಮನೆ ಮಾಡಿದೆ. ಹಬ್ಬದ ಪ್ರಯುಕ್ತ ಸ್ಟಾರ್ ನಟರ ಹಾಗೂ ಹೈ ಬಜೆಟ್ ಮೂವಿಗಳ ಪೋಸ್ಟರ್​ಗಳು ಬಿಡುಗಡೆಯಾಗಿವೆ.
ಹ್ಯಾಟ್ರಿಕ್ ಹೀರೊ ಶಿವರಾಜ್​​ಕುಮಾರ್​ ಅಭಿನಯದ ‘ಕವಚ’ ಚಿತ್ರ ತೆರೆ ಕಂಡಿದ್ದು ಅಭಿಮಾನಿಗಳು ಬಹಳ ಖುಷಿಯಲ್ಲಿದ್ದಾರೆ, ಈ ನಡುವೆ ಶಿವಣ್ಣ ತಮ್ಮ ಫ್ಯಾನ್ಸ್​ಗೆ ಮತ್ತೊಂದು ಗಿಫ್ಟ್​ ನೀಡಿದ್ದಾರೆ.ಅವರ ಅಭಿನಯದ ‘ರುಸ್ತುಂ’ ಸಿನಿಮಾದ ಪೋಸ್ಟರ್​ ರಿಲೀಸ್​ ಆಗಿದೆ. ಈ ಪೋಸ್ಟರ್​ನಲ್ಲಿ ಕರುನಾಡ ಚಕ್ರವರ್ತಿ ಶಿವಣ್ಣ ಪೊಲೀಸ್ ಗೆಟಪ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಶಿವಣ್ಣನ ಲುಕ್​ಗೆ ಫ್ಯಾನ್ಸ್​​​ ಫುಲ್​ ಫಿದಾ ಆಗಿದ್ದಾರೆ.
ಇನ್ನು ಈಗಾಗಲೇ ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿರೋ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ‘ಪೈಲ್ವಾನ್​​​’ ಸಿನಿಮಾದ ಮತ್ತೊಂದು ಪೋಸ್ಟರ್ ಕೂಡ ರಿಲೀಸ್ ಆಗಿದೆ. ಕಿಚ್ಚನ ಮೀಸೆಯೇ ಈ ಪೋಸ್ಟರ್​​ನ ಹೈಲೆಟ್. ಇದಲ್ಲದೆ ಸುದೀಪ್ ಮತ್ತು ಅವರ ಪತ್ನಿ ಪ್ರಿಯಾ ಅವರು ಸೇರಿ ಯೂಟ್ಯೂಬ್​ ಚಾನಲ್​ ಒಂದನ್ನು ಲಾಂಚ್ ಮಾಡಿದ್ದಾರೆ. ಈ ಚಾನಲ್​ ಅನ್ನು ಹೊಸ ಪ್ರತಿಭೆಗಳ ಅನಾವರಣಕ್ಕೆ ವೇದಿಕೆ ಮಾಡಿಕೊಳ್ಳಲು ಕಿಚ್ಚ ದಂಪತಿ ಉದ್ದೇಶಿಸಿದ್ದಾರೆ.
ಧ್ರುವ ಸರ್ಜಾ ಅಭಿನಯದ ‘ಪೊಗರು’ ಚಿತ್ರದ ಹೊಸ ಲುಕ್ ಬಿಡುಗಡೆಯಾಗಿದೆ. ಈ ಪೋಸ್ಟರ್​ನಲ್ಲಿ ಧ್ರುವ ಲಾಂಗ್​ ಹೇರ್​ ಜೊತೆಗೆ ರಗಡ್​ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ.
ಈಗಾಗಲೇ ಟೀಸರ್​​ ಮೂಲಕ ಪ್ರೇಕ್ಷಕರ ಮನಗೆದ್ದಿರುವ ಪ್ರಿಯಾಂಕ ಉಪೇಂದ್ರ ಅಭಿನಯದ ‘ದೇವಕಿ’ ಚಿತ್ರದ ಪೋಸ್ಟರ್ ಸಹ ರಿಲೀಸ್ ಆಗಿದೆ.
ಈ ಸ್ಟಾರ್ ನಟರ ಚಿತ್ರಗಳ ಮಧ್ಯ ಹೊಸಬರ ಚಿತ್ರವಾದ ಏಕಲವ್ಯ ಚಿತ್ರದ ಪೋಸ್ಟರ್ ಕೂಡ ರಿಲೀಸ್ ಆಗಿದೆ. ಈ ಪೋಸ್ಟರ್​ನಲ್ಲಿ ಹೊಸ ನಾಯಕ ನಟ ರಾಣ ಅವರು ಸಖತ್ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ.
-ಚರಿತ ಪಟೇಲ್​

RELATED ARTICLES

Related Articles

TRENDING ARTICLES