Tuesday, October 15, 2024

ಗುರೂಜಿ ಆಶಿರ್ವಾದ ಪಡೆದ ಸದಾನಂದ ಗೌಡ

ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆ ಬೆಂಗಳೂರು ಉತ್ತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಿ‌.ವಿ ಸದಾನಂದ ಗೌಡ ಅವರು ಆರ್.ಟಿ ನಗರದ ದ್ವಾರಕಾನಾಥ ಗುರೂಜಿ ಮನೆಗೆ ಭೇಟಿ ನೀಡಿ ಆಶಿರ್ವಾದ ಪಡೆದಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿರುವ ಸದಾನಂದ ಗೌಡರು, “ತಿಂಗಳುಗಳ ಹಿಂದೆಯೇ ಗುರುಗಳನ್ನ ಭೇಟಿ ಮಾಡಬೇಕಿತ್ತು. ಆದರೆ ಗುರುಗಳ ಸಮಯ ಸಿಗದ ಕಾರಣ ತಡವಾಯಿತು. ಅವರ ಆಶಿರ್ವಾದ ನಮಗೆ ಮುಖ್ಯ” ಅಂತ ಹೇಳಿದ್ದಾರೆ. ದ್ವಾರಕನಾಥ್ ಗುರೂಜಿ ಮಾತಾಡಿ, “ದೇಶದ ಬೆಳವಣಿಗೆಗೆ ಪ್ರಧಾನಿ ಮೋದಿ ಅವರ ನಾಯಕತ್ವ ಅಗತ್ಯ ಇದೆ. ಮೋದಿ ಅವರು ಸಮರ್ಥ ನಾಯಕ, ಮತ್ತೊಮ್ಮೆ ರೈಲ್ವೆ ಖಾತೆ ರಾಜ್ಯಕ್ಕೆ ಸಿಗಲಿ, ಸದಾನಂದ ಗೌಡರು ಮುಖ್ಯ ಮಂತ್ರಿಗಳಾಗಲಿ”‌ ಎಂದಿದ್ದಾರೆ. ಬೆಂಗಳೂರು ಉತ್ತರ ಕ್ಷೇತ್ರದಿಂದ ಮೈತ್ರಿ ಅಭ್ಯರ್ಥಿಯಾಗಿ ಸಚಿವ ಕೃಷ್ಣ ಭೈರೇ ಗೌಡ ಅವರನ್ನು ಕಣಕ್ಕಿಳಿಸಿದೆ.

 

RELATED ARTICLES

Related Articles

TRENDING ARTICLES