Friday, September 20, 2024

ಗ್ರೌಂಡ್​​ ರಿಪೋರ್ಟ್​​ : ‘ಸ್ಮೈಲ್​’ ಗೌಡರ 2ನೇ​ ಕನಸು ಆಗುತ್ತಾ ‘ಕೃಷ್ಣ’ರ್ಪಣಮಸ್ತು?

ಗ್ರೌಂಡ್​​ ರಿಪೋರ್ಟ್​​ 13 : ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ

ಬೆಂಗಳೂರು : ಕೇಂದ್ರ ಸಚಿವ ಡಿ.ವಿ ಸದಾನಂದಗೌಡ ಮತ್ತು ಮೈತ್ರಿ ಸರ್ಕಾರದ ಸಚಿವ ಕೃಷ್ಣಬೈರೇಗೌಡ ಅವರ ನಡುವಿನ ನೇರ ಹಣಾಹಣಿಗೆ ವೇದಿಕೆಯಾಗಿರುವ ಲೋಕಸಭಾ ಕ್ಷೇತ್ರ ಬೆಂಗಳೂರು ಉತ್ತರ. ಈ ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳಲ್ಲಿ 5ರಲ್ಲಿ ಕಾಂಗ್ರೆಸ್, 2ರಲ್ಲಿ ಜೆಡಿಎಸ್​ 1 ರಲ್ಲಿ ಬಿಜೆಪಿ ಶಾಸಕರಿದ್ದಾರೆ.

ಅಸೆಂಬ್ಲಿ ಕ್ಷೇತ್ರಗಳು ಮತ್ತು ಶಾಸಕರು
ಯಶವಂತಪುರ ಕಾಂಗ್ರೆಸ್​ ಎಸ್​.ಟಿ ಸೋಮಶೇಖರ್​

ಬ್ಯಾಟರಾಯನಪುರ ಕಾಂಗ್ರೆಸ್​ ಕೃಷ್ಣ ಬೈರೇಗೌಡ

ಪುಲಕೇಶಿನಗರ ಕಾಂಗ್ರೆಸ್​ ಅಖಂಡ ಶ್ರೀನಿವಾಸ್​ ಮೂರ್ತಿ

ಕೆ.ಆರ್​.ಪುರಂ ಕಾಂಗ್ರೆಸ್​ ಬಿ.ಎ ಬಸವರಾಜು

ಹೆಬ್ಬಾಳ ಕಾಂಗ್ರೆಸ್​ ಜಗದೀಶ್​ ಕುಮಾರ್​

ದಾಸರಹಳ್ಳಿ ಜೆಡಿಎಸ್​ ಎಸ್​. ಮುನಿರಾಜು

ಮಹಾಲಕ್ಷ್ಮೀ ಲೇಔಟ್ ಜೆಡಿಎಸ್​ ಗೋಪಾಲಯ್ಯ

ಮಲ್ಲೇಶ್ವರಂ ಬಿಜೆಪಿ ಸಿ.ಎನ್​ ಡಾ.ಅಶ್ವಥ್ ನಾರಾಯಣ್​

ಇದುವರೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ 12 ಬಾರಿ ಕಾಂಗ್ರೆಸ್​, 3 ಬಾರಿ ಬಿಜೆಪಿ, 1 ಬಾರಿ ಜೆಡಿಎಸ್​​ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.
1951, 1957 : ಕೇಶವ್​​ ಐಯ್ಯಂಗರ್ – ಕಾಂಗ್ರೆಸ್
1962, 1967, 1971 : ಕೆ. ಹನುಮಂತಯ್ಯ, ಕಾಂಗ್ರೆಸ್
1977, 1980, 1984, 1989, 1991 : ಸಿ.ಕೆ ಜಾಫರ್ ಷರೀಫ್
1996 : ಸಿ.ನಾರಾಯಣ ಸ್ವಾಮಿ, ಜನತಾದಳ
1999 : ಸಿ.ಕೆ ಜಾಫರ್ ಷರೀಫ್, ಕಾಂಗ್ರೆಸ್
2004 : ಹೆಚ್​.ಟಿ ಸಾಂಗ್ಲಿಯಾನ – ಬಿಜೆಪಿ
2009 : ಡಿ.ಬಿ ಚಂದ್ರೇಗೌಡ, ಬಿಜೆಪಿ
2014 : ಡಿ.ವಿ ಸದಾನಂದ ಗೌಡ – ಬಿಜೆಪಿ

2014ರ ‘ಲೋಕ’ಸಮರ

ಕಳೆದ ಚುನಾವಣೆಯಲ್ಲಿ ಬಿಜೆಪಿಯ ಡಿ.ವಿ ಸದಾನಂದಗೌಡರು ಕಾಂಗ್ರೆಸ್​ನ ಸಿ.ನಾರಾಯಣಸ್ವಾಮಿ ಅವರ ಎದುರು 2,29,764 ಮತಗಳ ಅಂತರದ ಗೆಲುವು ದಾಖಲಿಸಿದ್ದರು. ಸದಾನಂದ ಗೌಡ್ರು 7,18,326 ಮತಗಳನ್ನು, ನಾರಾಯಣ ಸ್ವಾಮಿ 4,88,562 ಮತಗಳನ್ನು ಪಡೆದಿದ್ದರು.

‘ಮತ’ಗಣಿತ

ಪುರುಷರು 12,60,356

ಮಹಿಳೆಯರು 11,41,116

ಒಟ್ಟು 2,401,472

‘ಜಾತಿ’ ಗಣಿತ
ಒಕ್ಕಲಿಗರು 6,00,000

ಮುಸ್ಲಿಮರು 4,00,000

ಲಿಂಗಾಯತರು 3,00,000

ಕ್ರೈಸ್ತರು 1,50,000

ಡಿ.ವಿ ಸದಾನಂದಗೌಡರಿಗೆ ಪೂರಕ ಅಂಶಗಳೇನು?
ಕಾರ್ಮಿಕ ವರ್ಗದ ಅಚ್ಚುಮೆಚ್ಚಿನ ನೇತಾರರಾಗಿ ಗುರುತಿಸಿಕೊಂಡಿರುವುದು
ಕರ್ನಾಟಕ ಮುಖ್ಯಮಂತ್ರಿ, ಕೇಂದ್ರ ಸಚಿವರಾಗಿ ಕರ್ತವ್ಯ ನಿರ್ವಹಿಸಿರುವುದು
ಕೇಂದ್ರದಲ್ಲಿ ರಾಜ್ಯದ ಪ್ರತಿನಿಧಿಯಾಗಿ ಕರ್ತವ್ಯ ನಿಭಾಯಿಸಿರುವುದು
ಪಕ್ಷ ಬೇಧವಿಲ್ಲದೆ ಸರ್ವ ಜನ ಹಿತಕ್ಕಾಗಿ ಕೆಲಸ ಮಾಡಿರುವುದು
‘ಸದಾ’ ಪಕ್ಷ ನಿಷ್ಠೆ ಮತ್ತು ಕಾರ್ಯಕರ್ತರ ಬಗ್ಗೆ ಇರುವ ಗೌರವ ಭಾವನೆ
ಶುದ್ಧ ಹಸ್ತದ ನಿಷ್ಠ ರಾಜಕಾರಣಿ ಎನ್ನುವ ನಂಬಿಕೆ ಇರುವುದು
ಕ್ಷೇತ್ರದಲ್ಲಿ ಅನುದಾನ ಸಮರ್ಪಕ ಬಳಕೆ ಮಾಡಿ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದು

ಡಿ.ವಿ ಸದಾನಂದಗೌಡರಿಗೆ ಇರುವ ಆತಂಕಗಳೇನು?
8 ವಿಧಾನಸಭೆ ಕ್ಷೇತ್ರಗಳಲ್ಲಿ ಐವರು ಕಾಂಗ್ರೆಸ್​ ಶಾಸಕರೇ ಇರುವುದು
ಕೃಷ್ಣ ಬೈರೇಗೌಡ ಈ ಬಾರಿ ಪ್ರಬಲ ಎದುರಾಳಿ ಆಗಿರುವುದು
ಬ್ಯಾಟರಾಯನಪುರ ಕೃಷ್ಣ ಬೈರೇಗೌಡರದ್ದೇ ವಿಧಾನಸಭಾ ಕ್ಷೇತ್ರ
ಎದುರಾಳಿ ಕೂಡ ಒಕ್ಕಲಿಗ ಆಗಿರುವುದರಿಂದ ‘ಮತ’ ವಿಭಜನೆ ಆತಂಕ
ಹೆಬ್ಬಾಳ ಕ್ಷೇತ್ರದ ರಾಜಕೀಯ ಪಲ್ಲಟ ಡಿವಿಎಸ್​ ವರ್ಚಸ್ಸಿನ ಮೇಲೆ ಬಾಧಿಸಿರುವುದು
ಕ್ರಮೇಣ ಕ್ಷೇತ್ರದ ಹಿಡಿತ ಕಳೆದುಕೊಳ್ಳುತ್ತಿದ್ದಾರೆ ಎಂಬ ಅಭಿಪ್ರಾಯ ಸ್ವತಃ ಬಿಜೆಪಿ ಕಾರ್ಯಕರ್ತರಲ್ಲಿ ಇರುವುದು
ಕ್ಷೇತ್ರದಲ್ಲಿ ನೀರಿನ ಸಮಸ್ಯೆ ಬಗೆಹರಿಸುವುದರಲ್ಲಿ ವಿಫಲರಾಗಿರುವುದು

ಕೃಷ್ಣ ಬೈರೇಗೌಡರಿಗೆ ಪೂರಕ ಅಂಶಗಳೇನು?

ಈ ಹಿಂದೆಯೂ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ ಅನುಭವ
ಕಾಂಗ್ರೆಸ್ ಪಕ್ಷದ ಶಿಸ್ತಿನ ಸಿಪಾಯಿ, ಮಿತಭಾಷಿ
ಮೈತ್ರಿಕೂಟದಿಂದ ಒಮ್ಮತದ ಅಭ್ಯರ್ಥಿಯಾಗಿ ಚುನಾವಣೆಗೆ ಅಭ್ಯರ್ಥಿ ಆಗಿರುವುದು
ಜೆಡಿಎಸ್ ಕಾಂಗ್ರೆಸ್​ ಕಾರ್ಯಕರ್ತರು, ಕಾರ್ಪೋರೇಟರ್​​ಗಳ ಸಂಪೂರ್ಣ ಬೆಂಬಲ
ಬ್ಯಾಟರಾಯನಪುರ ಕೃಷ್ಣ ಬೈರೇಗೌಡರ ಕ್ಷೇತ್ರವಾಗಿರುವುದು ಪ್ಲಸ್​ ಪಾಯಿಂಟ್​​
ಕಾಂಗ್ರೆಸ್​ನ ಹಿರಿಯ ನಾಯಕ ಜಾಫರ್​​ ಷರೀಫ್​​ ನಿಧನ ಆಗಿದ್ದರೂ ಅವರ ಪ್ರಭಾವದ ಮತಗಳು

ಕೃಷ್ಣ ಬೈರೇಗೌಡರಿಗೆ ಇರೋ ಆತಂಕಗಳೇನು?
ಸದಾನಂದ ಗೌಡರ ವಿರುದ್ಧ ಗೆಲುವು ಅಷ್ಟು ಸುಲಭವಲ್ಲ
ಬಿಜೆಪಿ ಪಾರಂಪರಿಕ ಮತಬುಟ್ಟಿ ಪ್ರಬಲ ಆಗಿರುವುದು
ನರೇಂದ್ರ ಮೋದಿ ವರ್ಚಸ್ಸು ಪರಿಣಾಮ ಬೀರುವ ಸಾಧ್ಯತೆ
ಯುವಕರು ಮೋದಿ ಬೆಂಬಲಕ್ಕೆ ನಿಂತಿರುವುದು

ಪ್ರಭಾವ ಬೀರುವ ಅಂಶಗಳು
ಕ್ಷೇತ್ರದಲ್ಲಿ ಒಕ್ಕಲಿಗ ಮತಗಳೇ ನಿರ್ಣಾಯಕ
ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಸಂಚಾರ ದಟ್ಟಣೆ ಹೆಚ್ಚು
ಕುಡಿಯುವ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದು
ಕ್ಷೇತ್ರದ ಅರ್ಧದಷ್ಟು ಭಾಗದಲ್ಲಿ ನೀರಿಗಾಗಿ ವಾಟರ್ ಟ್ಯಾಂಕರ್ ಅವಲಂಬನೆ
ಪಾರ್ಕಿಂಗ್ ಸಮಸ್ಯೆಯೊಂದಿಗೆ ಕಸ ವಿಲೇವಾರಿಯೂ ಒಂದು ದೊಡ್ಡ ಸಮಸ್ಯೆ
ರಸ್ತೆಗಳು ಕೆಲವೆಡೆ ಸುಸಜ್ಜಿತವಾಗಿದ್ರೂ ಹಲವೆಡೆ ಇನ್ನಷ್ಟು ಸುಧಾರಿಸಬೇಕಾಗಿದೆ

ಸಂಸದರು ಮಾಡಿದ್ದೇನು? (ಅನುದಾನ ಬಳಕೆ)
ಸಂಸದರ ನಿಧಿಯಿಂದ 22.50 ಕೋಟಿ ರೂ. ಬಿಡುಗಡೆ ಮಾಡಲಾಗಿತ್ತು
ಈ ಪೈಕಿ 2.50 ಕೋಟಿ ರೂಪಾಯಿ ಬಳಕೆಯಾಗಬೇಕು
ಅಂದರೆ ಇದುವರೆಗೆ 20 ಕೋಟಿ ರೂ. ಅನುದಾನ ಬಳಕೆ ಮಾಡಿದ್ದಾರೆ
ಇನ್ನೂ ಎರಡು ಕಂತಿನ ಅನುದಾನ ಬಳಕೆ ಮಾಡಿಕೊಳ್ಳಬೇಕಿದೆ
ಅನುದಾನ ಗ್ರಾಮೀಣ ಕಾಂಕ್ರೀಟ್ ರಸ್ತೆಗಳ ನಿರ್ಮಾಣಕ್ಕೆ ಬಳಕೆ
ಗ್ರಾಮಗಳಲ್ಲಿ ಚರಂಡಿ ನಿರ್ವಹಣೆ, ಅಂಗನವಾಡಿ ಕಟ್ಟಡ ಕಾಮಗಾರಿಗಳಿಗೆ ವಿನಿಯೋಗ
ಸಂಸದರ ಆದರ್ಶ ಗ್ರಾಮವಾಗಿ ನೆಲಗುಳಿ ಗ್ರಾ.ಪಂಪಾಯತ್​ ಅಭಿವೃದ್ಧಿ
ಮೀನುಕುಂಟೆ ಗ್ರಾ.ಪಂ.ಗಳ ಅಭಿವೃದ್ಧಿ
ರಕ್ಷಣಾ ಇಲಾಖೆ ಜಮೀನನ್ನು ನಾಗರಿಕ ಬಳಕೆ ಉದ್ದೇಶಕ್ಕೆ ರಾಜ್ಯ ಸರ್ಕಾರಕ್ಕೆ ಹಸ್ತಾಂತರಿಸುವಲ್ಲಿ ಮಹತ್ವದ ಪಾತ್ರ
ರಾಷ್ಟ್ರೀಯ ಹೆದ್ದಾರಿ ಅಂಚಿನ ಗ್ರಾಮಗಳಿಗೆ ಕೆಳ ಸೇತುವೆ ನಿರ್ಮಾಣದ ವಿಚಾರದಲ್ಲಿ ಕೆಲಸ
ವಿಮಾನನಿಲ್ದಾಣ ರಸ್ತೆಗೆ ಹೊಂದಿಕೊಂಡಂತಿರುವ ಗ್ರಾಮಗಳಲ್ಲಿ ಕೆಳ ಸೇತುವೆ ನಿರ್ಮಾಣ

ಕ್ಷೇತ್ರ ಪರಿಚಯ
ಯಶವಂತಪುರದ ಕೃಷಿ ನಿಯಂತ್ರಿತ ಮಾರುಕಟ್ಟೆ
ಹೆಚ್ಚು ಪ್ರಸಿದ್ಧಿ ಪಡೆದಿರುವ ಕಾಡು ಮಲ್ಲೇಶ್ವರ ದೇವಾಲಯ
ಪ್ರಧಾನ ಹೆಗ್ಗುರುತು ವಿಶ್ವ ವಾಣಿಜ್ಯ ಕೇಂದ್ರ
ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್​ ಸೈನ್ಸ್​
1980ರಲ್ಲಿ ನಿರ್ಮಿಸಲಾದ ಚೌಡಯ್ಯ ಮೆಮೋರಿಯಲ್ ಹಾಲ್
ಹೆಬ್ಬಾಳದಲ್ಲಿರುವ ಸುಂದರವಾದ ಕೆರೆ

RELATED ARTICLES

Related Articles

TRENDING ARTICLES