Monday, April 22, 2024

ಗ್ರೌಂಡ್​​ ರಿಪೋರ್ಟ್​​ : ತ್ರಿಕೋನ ಸ್ಪರ್ಧೆಯಲ್ಲಿ ಯಾರಿಗೆ ‘ಸೆಂಟ್ರಲ್’​ ಪ್ರಮೋಷನ್​?

ಗ್ರೌಂಡ್​​ ರಿಪೋರ್ಟ್​​ 12 : ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ
ಬೆಂಗಳೂರು : ತ್ರಿಕೋನ ಸ್ಪರ್ಧೆಗೆ ಸಾಕ್ಷಿಯಾಗಿರುವ ಲೋಕಸಭಾ ಕ್ಷೇತ್ರ ಬೆಂಗಳೂರು ಕೇಂದ್ರ. ಹಾಲಿ ಸಂಸದ ಪಿ.ಸಿ ಮೋಹನ್ ಬಿಜೆಪಿ ಅಭ್ಯರ್ಥಿ. ಇವರ ಪ್ರತಿಸ್ಪರ್ಧಿಗಳು ಕಾಂಗ್ರೆಸ್​ ಅಭ್ಯರ್ಥಿ ರಿಜ್ವಾನ್ ಅರ್ಷದ್​ ಹಾಗೂ ಪಕ್ಷೇತರ ಅಭ್ಯರ್ಥಿ ಪ್ರಕಾಶ್​ ರೈ.
ಈ ಲೋಕಸಭಾ ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳಲ್ಲಿ 5ರಲ್ಲಿ ಕಾಂಗ್ರೆಸ್​ 3ರಲ್ಲಿ ಬಿಜೆಪಿ ಅಭ್ಯರ್ಥಿಗಳಿದ್ದಾರೆ.

ಅಸೆಂಬ್ಲಿ ಕ್ಷೇತ್ರಗಳು ಮತ್ತು ಶಾಸಕರು

ಸರ್ವಜ್ಞ ನಗರ ಕಾಂಗ್ರೆಸ್​ ಕೆ.ಜೆ ಜಾರ್ಜ್​

ಶಿವಾಜಿನಗರ ಕಾಂಗ್ರೆಸ್​ ಆರ್ ರೋಷನ್​ ಬೇಗ್​

ಶಾಂತಿನಗರ ಕಾಂಗ್ರೆಸ್​ ಎನ್​​.ಎ ಹ್ಯಾರಿಸ್​

ಗಾಂಧಿನಗರ ಕಾಂಗ್ರೆಸ್​ ದಿನೇಶ್​ ಗುಂಡೂರಾವ್​

ಚಾಮರಾಜಪೇಟೆ ಕಾಂಗ್ರೆಸ್​ ಜಮೀರ್​ ಅಹಮದ್​ ಖಾನ್​

ಸಿ.ವಿ. ರಾಮನ್​ನಗರ ಬಿಜೆಪಿ ಸಿ.ರಘು

ಮಹದೇವಪುರ ಬಿಜೆಪಿ ಅರವಿಂದ ಲಿಂಬಾವಳಿ

ರಾಜಾಜಿನಗರ ಬಿಜೆಪಿ ಎಸ್​.ಸುರೇಶ್​ ಕುಮಾರ್

 

ಪಕ್ಷಗಳ ಬಲಾಬಲ
ಈ ಕ್ಷೇತ್ರ ಅಸ್ಥಿತ್ವಕ್ಕೆ ಬಂದ ಮೇಲೆ ನಡೆಯುತ್ತಿರೋ ಮೂರನೇ ಲೋಕ ಸಮರವಿದು. 2009 ಮತ್ತು 2014 ಎರಡೂ ಬಾರಿಯೂ ಬಿಜೆಪಿ ಪಿ.ಸಿ ಮೋಹನ್ ಅವರು ಗೆಲುವಿನ ನಗೆಬೀರಿದ್ದು, ಹ್ಯಾಟ್ರಿಕ್​ ಗೆಲುವಿನ ಕನಸಿನಲ್ಲಿದ್ದಾರೆ. 2014ರ ಚುನಾವಣೆಯಲ್ಲಿ ಪಿ.ಸಿ ಮೋಹನ್ ಕಾಂಗ್ರೆಸ್​ನ ರಿಜ್ವಾನ್ ಅರ್ಷದ್ ಅವರ ಎದುರು 1,37,500 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಪಿ.ಸಿ. ಮೋಹನ್​​ 5,57,130 ಮಗತಗಳನ್ನು, ರಿಜ್ವಾನ್​ ಅರ್ಷದ್ 4,19,630 ಮತಗಳನ್ನು ಪಡೆದಿದ್ದರು.

‘ಮತ’ಗಣಿತ

ಪುರುಷರು 8,74,263

ಮಹಿಳೆಯರು 8,22,712

ಹೊಸ ಮತದಾರರು 12,398

ತೃತೀಯ ಲಿಂಗಿಗಳು 169

ಒಟ್ಟು 16,97,144

‘ಜಾತಿ’ ಗಣಿತ

ತಮಿಳರು 5,50,000

ಮುಸಲ್ಮಾನರು 4,50,000

ಕ್ರಿಶ್ಚಿಯನ್ನರು 2,00,000

ಅಭ್ಯರ್ಥಿಗಳ ಬಲಾಬಲ 
ಪಿ.ಸಿ ಮೋಹನ್​​ ಅವರಿಗೆ ಪೂರಕ ಅಂಶಗಳೇನು?
ಈಗಾಗಲೇ ಎರಡು ಬಾರಿ ಸಂಸದರಾಗಿರುವುದು
ಕಳೆದ ಬಾರಿ ಸೋತ ಅಭ್ಯರ್ಥಿಯೇ ಈಗ ಮತ್ತೆ ಎದುರಾಳಿಯಾಗಿರುವುದು
ಕಾಂಗ್ರೆಸ್​ ಅಭ್ಯರ್ಥಿ ಇನ್ನೂ ಅಪರಿಚಿತ. ಇದು ಬಿಜೆಪಿಗೆ ದೊಡ್ಡ ಲಾಭ
ಎಲ್ಲಾ ವರ್ಗದವರನ್ನು ಸಮಾನ ರೀತಿಯಲ್ಲಿಯೇ ಕಾಣುತ್ತಾರೆ
ಅಭಿವೃದ್ಧಿ ಕಾರ್ಯಗಳೊಂದಿಗೆ ಮೋದಿ ಅಲೆಯ ಪ್ರಭಾವ
3ನೇ ಬಾರಿಯೂ ಜನರು ಕೈ ಹಿಡಿಯಲಿದ್ದಾರೆ ಎನ್ನುವ ನಂಬಿಕೆ
ಇಲ್ಲಿನ ಜನರು ಆಶ್ವಾಸನೆ, ಜಾತಿಗಿಂತ ಅಭ್ಯರ್ಥಿ ನೋಡಿ ಮತ ಹಾಕುವುದು ವಾಡಿಕೆ
ದಲಿತರು ಹಾಗೂ ಕೂಲಿ ಕಾರ್ಮಿಕರೇ ಹೆಚ್ಚು ಇರುವ ಭಾಗಗಳಲ್ಲಿ ಮೋದಿ ಪರ ಅಲೆ ಇರುವುದು
ಕ್ಷೇತ್ರ ರಚನೆಯಾದ ವರ್ಷದಿಂದ ಇಲ್ಲಿ ಬಿಜೆಪಿಯದ್ದೇ ಪ್ರಾಬಲ್ಯ
ಹೊರ ರಾಜ್ಯಗಳಿಂದ ಬಂದು ನೆಲೆಸಿರುವವರ ಸಂಖ್ಯೆಯೇ ಹೆಚ್ಚು
ಹೊರ ರಾಜ್ಯದವರ ದೃಷ್ಟಿ ರಾಜ್ಯದ ಕಡೆಗಿಂತ ಕೇಂದ್ರದ ಕಡೆ ಜಾಸ್ತಿ
ಹೊರ ರಾಜ್ಯದವರ ಮತಗಳು ಬಿಜೆಪಿಯತ್ತ ವಾಲಬಹುದು ಎಂಬ ಲೆಕ್ಕಾಚಾರ

ಪಿ.ಸಿ ಮೋಹನ್ ಅವರಿಗಿರುವ ಆತಂಕಗಳು

8 ವಿಧಾನಸಭೆ ಕ್ಷೇತ್ರಗಳಲ್ಲಿ ಐವರು ಕಾಂಗ್ರೆಸ್​ ಶಾಸಕರೇ ಇರುವುದು
ಬಿಜೆಪಿ ಭದ್ರಕೋಟೆಗೆ ಕಾಂಗ್ರೆಸ್​ – ಜೆಡಿಎಸ್​ ಮೈತ್ರಿಕೂಟ ಲಗ್ಗೆಯಿಟ್ಟಿರುವುದು
ಈ ಬಾರಿ ರಿಜ್ಚಾನ್ ಅರ್ಷದ್​ರನ್ನು ಗೆಲ್ಲಿಸಲು ಮೈತ್ರಿಕೂಟದ ರಣತಂತ್ರ
ಬೆಂಗಳೂರಿನ ಟ್ರಾಫಿಕ್​​, ತ್ಯಾಜ್ಯ ನಿರ್ವಹಣೆ ಬಗ್ಗೆ ಚರ್ಚಿಸಿಲ್ಲ ಎಂಬ ಅಸಮಾಧಾನ
ತ್ರಿಕೋನ ಸ್ಪರ್ಧೆ ಏರ್ಪಟ್ಟಿರುವುದು, ಸ್ವಲ್ಪ ಮಟ್ಟಿಗೆ ಆಡಳಿತ ವಿರೋಧಿ ಅಲೆ

ರಿಜ್ವಾನ್​ ಅರ್ಷದ್​​ ಅವರಿಗೆ ಪೂರಕ ಅಂಶಗಳೇನು?
ಕಳೆದ ಸಲ ಸೋತಿರುವುದರಿಂದ ಈ ಬಾರಿ ಅನುಕಂಪ ಅಲೆ ಕೈ ಹಿಡಿಯುವ ಸಾಧ್ಯತೆ
ಕಾಂಗ್ರೆಸ್-ಜೆಡಿಎಸ್​ ಮೈತ್ರಿಕೂಟದಿಂದ ಒಮ್ಮತದ ಅಭ್ಯರ್ಥಿಯಾಗಿರುವುದು
ವಿಧಾನಸಭಾ ಕ್ಷೇತ್ರಗಳಲ್ಲಿರುವ ಘಟಾನುಘಟಿ ನಾಯಕರ ಬೆಂಬಲ
ಕ್ಷೇತ್ರದಲ್ಲಿ ಗಣನೀಯವಾಗಿ ಅಲ್ಪಸಂಖ್ಯಾತ ಮತಗಳು ಇರುವುದು

ರಿಜ್ವಾನ್​ ಅರ್ಷದ್​ ಅವರಿಗಿರುವ ಆತಂಕಗಳೇನು?
ಕಳೆದ ಸಲ ಸೋತ ನಂತರ ಕ್ಷೇತ್ರಕ್ಕೆ ತಲೆಹಾಕಿಲ್ಲ ಎಂಬುದು ಜನರ ಆರೋಪ
ಹೀಗಾಗಿ ಕ್ಷೇತ್ರದಲ್ಲಿ 65ರಷ್ಟು ಜನರಿಗೆ ರಿಜ್ವಾನ್​ ಅರ್ಷದ್ ಯಾರೂ ಅಂತಲೇ ಸರಿಯಾಗಿ ತಿಳಿದಿಲ್ಲ
ಕಾರ್ಯಕರ್ತರನ್ನು ಸಂಘಟಿಸುವ ಪ್ರಬಲ ಕೆಲಸ ಮಾಡದೇ ಇರುವುದು
ಟಿಕೆಟ್​ ವಂಚಿತರ ಒಳ ಏಟು ಬೀಳುವ ಸಾಧ್ಯತೆ
ಕ್ಷೇತ್ರ ರಚನೆಯಾದಾಗಿನಿಂದಲೂ ಈ ಕ್ಷೇತ್ರ ಬಿಜೆಪಿಯ ಭದ್ರಕೋಟೆ
ಕಾಂಗ್ರೆಸ್​ ಪಾಲಿಗೆ ಪ್ರಕಾಶ್​ ರೈ​ ಸ್ಪರ್ಧೆಯೇ ಕಗ್ಗಂಟಾಗಬಹುದು
ಪ್ರಕಾಶ್‌ ರೈ ಸ್ಪರ್ಧೆಯಿಂದ ಕಾಂಗ್ರೆಸ್‌ ಮತಗಳೇ ವಿಭಜನೆಯಾಗುವ ಸಾಧ್ಯತೆ

ಪಕ್ಷೇತರ ಅಭ್ಯರ್ಥಿ ಪ್ರಕಾಶ್​ ರೈ ಅವರಿಗೆ ಪೂರಕಗಳೇನು..?

ಪಂಚ ಭಾಷಾ ಚಿತ್ರನಟರೆಂಬ ಖ್ಯಾತಿ
ಬಹುಭಾಷಾ ನಟರಾಗಿರುವುದರಿಂದ ಅಭಿಮಾನಿಗಳು ಹೆಚ್ಚಿದ್ದಾರೆ
ಬಹಳ ದಿನಗಳಿಂದ ಪ್ರಚಾರ ನಡೆಸುತ್ತಿರುವುದು
ಹಲವು ಹೋರಾಟಗಳಲ್ಲಿ ಸಕ್ರಿಯ
ತಮಿಳು, ತೆಲುಗು, ಕ್ರಿಶ್ಚಿಯನ್ನರು ಕೈ ಹಿಡಿಯಬಹುದು ಎನ್ನುವ ನಂಬಿಕೆ
ಆಮ್​ ಆದ್ಮಿ ಪಕ್ಷ​ ಹಾಗು ಪ್ರಗತಿಪರ ಸಂಘಟನೆಗಳ ಬೆಂಬಲ ನಿರೀಕ್ಷೆ
ಪ್ರತಿದಿನ ಸ್ಲಂಗಳಿಗೆ ಭೇಟಿ ನೀಡಿ ಸಿನಿಮಾ ಶೈಲಿಯಲ್ಲಿ ಪ್ರಚಾರ ಮಾಡುತ್ತಿರುವುದು

ಪಕ್ಷೇತರ ಅಭ್ಯರ್ಥಿ ಪ್ರಕಾಶ್​ ರೈ ಅವರಿಗೆ ಆತಂಕಗಳೇನು?
ಅಭಿಮಾನಿಗಳು ಹೆಚ್ಚಿದ್ದರೂ ಮತಗಳಾಗಿ ಪರಿವರ್ತನೆ ಆಗದಿರಬಹುದು
ಈ ಕ್ಷೇತ್ರ ಬಿಜೆಪಿಯ ಭದ್ರಕೋಟೆಯಾಗಿರುವುದು
ರಾಜಕೀಯ ಅನುಭವ ಕೊರತೆ
ಈವರೆಗೂ ಕ್ಷೇತ್ರದ ಜನ ಪಕ್ಷೇತರ ಅಭ್ಯರ್ಥಿಗಳಿಗೆ ಒಲವು ತೋರಿಸಿಲ್ಲ
ಮೋದಿ ಅಲೆ ಮತ್ತು ಹೆಚ್ಚು ವಿವಾದಾತ್ನಕ ಹೇಳಿಕೆಗಳು ಏಟು ಕೊಡುವ ಸಾಧ್ಯತೆ

ಪ್ರಭಾವ ಬೀರುವ ಅಂಶಗಳು
ತಮಿಳರ ಪ್ರಾಬಲ್ಯ ಜಾಸ್ತಿ ಇರುವುದು
ಸ್ಲಂಗಳು ಬಹಳ ಇವೆ. ಯಾವುದೂ ಅಭಿವೃದ್ಧಿಯಾಗಿಲ್ಲ
ಅಲ್ಪ ಸಂಖ್ಯಾತರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ
ಕೆಲ ಭಾಗಗಳಲ್ಲಿ ಕುಡಿಯುವ ನೀರಿನ ಸಮಸ್ಯೆ
ಬೆಂಗಳೂರು ಗ್ರಾಮಾಂತರ ಲೋಕ ಚಿತ್ರಣ

ಸಂಸದರು ಮಾಡಿದ್ದೇನು? (ಅನುದಾನ ಬಳಕೆ)
ಲೋಕಸಭೆಯಲ್ಲಿ ಶೇ. 83ರಷ್ಟು ಹಾಜರಾತಿ
5 ವರ್ಷಗಳಲ್ಲಿ 314 ಪ್ರಶ್ನೆ ಕೇಳಿದ್ದಾರೆ
ಪ್ರದೇಶಾಭಿವೃದ್ಧಿ ನಿಧಿ 25 ಕೋ. ರೂ. ಪೈಕಿ 24.32 ಕೋಟಿ. ರೂ. ಬಳಕೆ
ಶೇಕಡಾ 97.28 ರಷ್ಟು ಸಾಧನೆ ಮಾಡಿರುವ ಪಿ.ಸಿ. ಮೋಹನ್​
ಬೆಂಗಳೂರಿಗೆ ಉಪನಗರ ರೈಲು ಯೋಜನೆ ವರದಾನ
ಆದರ್ಶ ಗ್ರಾಮ ಯೋಜನೆಯಡಿ ಯರಪ್ಪನಹಳ್ಳಿ ಗ್ರಾಮದ ಅಭಿವೃದ್ಧಿ
ಶೌಚಗೃಹ, ನೀರಿನ ಟ್ಯಾಂಕ್​, ಶುದ್ಧ ಕುಡಿಯುವ ನೀರಿನ ಘಟಕ
ರಂಗ ಮಂದಿರ, ಸಮುದಾಯ ಭವನ ನಿರ್ಮಾಣ
ಕಬ್ಬನ್​​ ಪಾರ್ಕ್​​ನಲ್ಲಿ ಸುರಕ್ಷತೆಗಾಗಿ ಸಿಸಿ ಕ್ಯಾಮರಾ ಅಳವಡಿಕೆ
ಬೆಂಗಳೂರು ಕೇಂದ್ರ ಲೋಕ ಚಿತ್ರಣ

ಕ್ಷೇತ್ರ ಪರಿಚಯ
ಐಟಿ ಕಂಪೆನಿಗಳು ಹೆಚ್ಚಿನ ಸಂಖ್ಯೆಯಲ್ಲಿರುವುದು ಮಹದೇವಪುರದಲ್ಲಿ
ಕೆಂಪೇಗೌಡ ಬಸ್​ ನಿಲ್ದಾಣ, ರೈಲ್ವೆ ನಿಲ್ದಾಣ ಇರುವುದು ಗಾಂಧಿನಗರದಲ್ಲಿ
ಚಾಮರಾಜಪೇಟೆ ಅಂದರೆ ಹಳೆಯ ಬೆಂಗಳೂರು ಎಂದೇ ಪ್ರಸಿದ್ಧ
ಕೋಟೆ ಶ್ರೀ ಪ್ರಸನ್ನ ವೆಂಕಟೇಶ್ವರ ಸ್ವಾಮಿ ದೇಗುಲ
ಇಸ್ಕಾನ್​ ಟೆಂಪಲ್​, ಟಿಪ್ಪು ಸುಲ್ತಾನ್​​ ಬೇಸಿಗೆ ಅರಮನೆ
ಕಂಟೋನ್ಮೆಂಟ್​ ರೈಲ್ವೆ ನಿಲ್ದಾಣ, ರಸೆಲ್​ ಮಾರ್ಕೆಟ್​

RELATED ARTICLES

Related Articles

TRENDING ARTICLES