Saturday, September 14, 2024

ಚಿಲ್ಲರೆ ಕಾಸು ತಂದು ಚುನಾವಣೆಗೆ ನಿಂತಿದ್ದಾರೆ ವಿನಯ್​..!

ಶಿವಮೊಗ್ಗ: ಲೋಕಸಭಾ ಚುನಾವಣೆಗೆ ಕರ್ನಾಟಕದಲ್ಲಿ ಎರಡನೇ ಹಂತದ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿರುವ ಇಂದು ವ್ಯಕ್ತಿಯೊಬ್ಬರು ಡಿಫರೆಂಟಾಗಿ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಚಿಲ್ಲರೆ ಹಣವನ್ನು ಬಳಸಿಕೊಂಡು ಇದೀಗ ಎಲೆಕ್ಷನ್​ಗೆ ನಿಂತ್ಕೊಂಡಿದ್ದಾರೆ. ಚೀಲದ ತುಂಬೆಲ್ಲಾ ಚಿಲ್ಲರೆ ತುಂಬ್ಕೊಂಡ ಈ ವ್ಯಕ್ತಿ ಚುನಾವಣಾಧಿಕಾರಿಗಳ ಕಚೇರಿಗೆ ಬಂದು ಇದೀಗ ಎಲೆಕ್ಷನ್​ಗೆ ನಿಂತಿದ್ದಾರೆ.

ಹೌದು, ಇಂದು ಚುನಾವಣಾಧಿಕಾರಿಗಳ ಕಚೇರಿಗೆ ಬಂದ ಇವರ ಹೆಸರು ವಿನಯ್ ರಾಜಾವತ್. ಕಳೆದ ಬಾರಿ ವಿಧಾನಸಭೆ ಚುನಾವಣೆ ವೇಳೆಯಲ್ಲಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ಧ ಚುನಾವಣೆಗೆ ಸ್ಪರ್ಧಿಸಿ ಕೇವಲ 400 ಮತಗಳನ್ನು ಪಡೆದು ಸೋಲು ಅನುಭವಿಸಿದ್ದ ಯುವಕ ವಿನಯ್, ಈ ಬಾರಿ ವಿಭಿನ್ನವಾಗಿ ಎಲೆಕ್ಷನ್​ಗೆ ನಿಂತಿದ್ದಾರೆ. ಇಂದು ಕೇವಲ 1 ರೂ. ಹಾಗೂ 2 ರೂ. ಗಳ ಚಿಲ್ಲರೆ ನಾಣ್ಯಗಳನ್ನು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿಕೊಂಡು ಬಂದು, ತನ್ನ ಉಮೇದುವಾರಿಕೆ ಸಲ್ಲಿಸಿ, ಹಣವನ್ನು ಡಿಪಾಸಿಟ್ ಮಾಡಿದ್ದಾರೆ.  12,500 ರೂ. ಗಳ ಚಿಲ್ಲರೆ ಹಣವನ್ನು ಜಿಲ್ಲಾಧಿಕಾರಿಗಳ ಕಚೇರಿಗೆ ತಂದ ಇವರನ್ನು ಸಾರ್ವಜನಿಕರು, ಪೊಲೀಸರು, ಬೆಕ್ಕಸ ಕಣ್ಣಿನಿಂದ ನೋಡುತ್ತಿದ್ರು. ಚಿಲ್ಲರೆ ತೋರಿಸಿದ ವಿನಯ್​ ಆ ಚೀಲವನ್ನ ಎತ್ತಿಕೊಂಡು ಹೋಗಿ ಜಿಲ್ಲಾಧಿಕಾರಿಗಳ ಮುಂದೆ ಇಟ್ಟು, ಪಕ್ಷೇತರನಾಗಿ ಉಮೇದುವಾರಿಕೆ ಸಲ್ಲಿಸಿದ್ದಾರೆ. ವಿನಯ್​ ವರ್ತನೆಗೆ ಜಿಲ್ಲಾಧಿಕಾರಿಗಳೇ ಆಶ್ಚರ್ಯಗೊಂಡು ನಗುಮೊಗದಿಂದಲೇ, ಅದನ್ನು ಸ್ವೀಕರಿಸಿದ್ದಾರಂತೆ.  ಅಂದಹಾಗೆ ಈ ವಿನಯ್ ರಾಜಾವತ್, ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಲು ಎತ್ತಿನ ಗಾಡಿಯಲ್ಲಿ ಬಂದಿದ್ದು, ಡಿಫರೆಂಟ್ ಗೆಟಪ್​ನಲ್ಲಿ ಬಂದು, ಡಿಫರೆಂಟಾಗಿ ನಾಮಪತ್ರ ಸಲ್ಲಿಸಿದ್ದಾರೆ.

RELATED ARTICLES

Related Articles

TRENDING ARTICLES