Friday, September 13, 2024

ಒಂದೇ ನಿಮಿಷಕ್ಕೆ ಉಪೇಂದ್ರ ರೋಡ್​ ಶೋ ಅಂತ್ಯ..!

ಚಿತ್ರದುರ್ಗ: ವಿಭಿನ್ನವಾಗಿ ರಾಜಕೀಯ ಮಾಡಲು ಹೊರಟಿರುವ ಚಿತ್ರ ನಟ ಉಪೇಂದ್ರ ರೋಡ್​ ಶೋ ಒಂದೇ ನಿಮಿಷಕ್ಕೆ ಮುಗಿದ ಘಟನೆ ಕೋಟೆ ನಾಡು ಚಿತ್ರದುರ್ಗದಲ್ಲಿ ನಡೆಯಿತು. 9 ಗಂಟೆಗೆ ನಿಗದಿಯಾಗಿದ್ದ ರೋಡ್​ ಶೋಗೆ ಉಪೇಂದ್ರ ಅರ್ಧ ಗಂಟೆ ತಡವಾಗಿ ಆಗಮಿಸಿದ್ರು. ನಗರದ ವೀರಭದ್ರಸ್ವಾಮಿ ದೇವಾಲಯದಿಂದ ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿ ಪರವಾಗಿ ಉಪೇಂದ್ರ ಅವರು ಪ್ರಚಾರ ಆರಂಭಿಸಿದ್ರು. ಆದ್ರೆ ನಿರೀಕ್ಷಿತ ಮಟ್ಟದಲ್ಲಿ ಜನರೂ ಜಮಾಯಿಸದೇ ಉಪೇಂದ್ರ ಒಂದೇ ನಿಮಿಷಕ್ಕೆ ರೋಡ್​ ಶೋ ಮುಗಿಸಿದ್ರು ಎನ್ನಲಾಗ್ತಿದೆ. ಅಲ್ಲದೇ ಬಿರು ಬಿಸಿಲು ಕೂಡ ರೋಡ್​ ಶೋ ಮೊಟಕುಗೊಳಿಸಲು ಕಾರಣ ಎನ್ನಲಾಗ್ತಿದೆ. ಏನೇ ಇರಲಿ ವಿಭಿನ್ನ ರಾಜಕೀಯ ಹಾದಿ ಹಿಡಿದಿರೋ ಉಪೇಂದ್ರ ರೋಡ್​ ಶೋ ಕೂಡ ಡಿಫರೆಂಟಾಗೇ ಮುಕ್ತಾಯ ಕಂಡಿದೆ.

RELATED ARTICLES

Related Articles

TRENDING ARTICLES