Friday, July 19, 2024

ಸುದೀಪ್​ ನಿರ್ಧಾರದ ಬಗ್ಗೆ ಸುಮಲತಾ ಅಭಿಪ್ರಾಯವೇನು?

ಬೆಂಗಳೂರು : ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರು ಬೆಂಗಳೂರಿನ ಪ್ರೆಸ್​ಕ್ಲಬ್​ನಲ್ಲಿ ಮಾಧ್ಯಮ ಸಂವಾದ ನಡೆಸಿದ್ರು. ಸಂವಾದದಲ್ಲಿ ಅನೇಕ ವಿಚಾರಗಳ ಬಗ್ಗೆ ಮಾತಾನಾಡಿದ್ರು. ಅಂತೆಯೇ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಪ್ರಚಾರಕ್ಕೆ ಬರದಿರುವ ಬಗ್ಗೆಯೂ ಸುಮಲತಾ ತನ್ನ ಅಭಿಪ್ರಾಯವನ್ನು ತಿಳಿಸಿದ್ರು.
‘ಸುದೀಪ್​ ಅವರು ಶೂಟಿಂಗ್​ನಲ್ಲಿ ಬ್ಯುಸಿ ಇದ್ದಾರೆ. ಹಾಗಾಗಿ ಬಂದಿಲ್ಲ. ಅವರಿಗೆ ರಾಜಕಾರಣದಿಂದ ದೂರ ಉಳಿಯಬೇಕು ಅಂತ ಅನಿಸಿದ್ದರೆ ನಾನು ಅವರ ನಿರ್ಧಾರವನ್ನು ಸ್ವಾಗತಿಸುತ್ತೇನೆ. ದರ್ಶನ್​ ಹಾಗೂ ಯಶ್​ ಕೂಡ ಅವರಾಗಿಯೇ ಪ್ರಚಾರ ಮಾಡುತ್ತಿದ್ದಾರೆ. ನಾನು ಯಾರಿಗೂ ಒತ್ತಾಯ ಮಾಡಿ ಹೇಳಿಲ್ಲ’ ಎಂದರು.
ಕಾವೇರಿ ವಿಚಾರದಲ್ಲಿ ಅಂಬರೀಶ್ ಅವರು ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ರು. ನಾನು ಕಾವೇರಿ ವಿಚಾರದಲ್ಲಿ ಅದೇ ಹೋರಾಟ ಮಾಡಲು ತಯಾರಿದ್ದೇನೆ .ಮಹಿಳಾ ಸಬಲೀಕರಣಕ್ಕೆ ಒತ್ತು ಕೊಡುತ್ತೇನೆ. ಈಗಿನ ಪೀಳಿಗೆಗೆ ಉದ್ಯೋಗ ಅವಶ್ಯಕತೆ ಇದೆ, ಅದರ ಬಗ್ಗೆಯೂ ಒತ್ತು ಕೊಡುತ್ತೇನೆ.

RELATED ARTICLES

Related Articles

TRENDING ARTICLES