Saturday, July 27, 2024

ಗ್ರೌಂಡ್​ ರಿಪೋರ್ಟ್​ : ‘ಡಿಕೆ’ ಬ್ರದರ್ಸ್​​ ಸಾಮ್ರಾಜ್ಯದಲ್ಲಿ ಕಮಲ ಪಡೆ ‘ನಾರಾಯಣ’ ಜಪ…!

ಗ್ರೌಂಡ್​ ರಿಪೋರ್ಟ್​ 11 : ಬೆಂಗಳೂರು ಗ್ರಾಮಾಂಗತರ ಲೋಕಸಭಾ ಕ್ಷೇತ್ರ

ಬೆಂಗಳೂರು ಗ್ರಾಮಾಂತರ : ಲೋಕಸಭಾ ಚುನಾವಣಾ ಕಣ ದಿನದಿಂದ ದಿನಕ್ಕೆ ರಂಗೇರುತ್ತಲೇ ಇದೆ. ರಾಜ್ಯದ 28 ಕ್ಷೇತ್ರಗಳಲ್ಲೂ ಎಲ್ಲಾ ಪಕ್ಷಗಳು, ಅಭ್ಯರ್ಥಿಗಳು ಭರದಿಂದ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಅಂತೆಯೇ ಬೆಂಗಳೂರು ಗ್ರಾಮಾಂತರ ಕ್ಷೇತ್ರವೂ ಕೂಡ ಕಾವೇರಿದೆ. ಕಾಂಗ್ರೆಸ್​​ ಕಲಿ ಡಿ.ಕೆ ಸುರೇಶ್​ ಹಾಗೂ ಬಿಜೆಪಿಯ ಅಶ್ವತ್ಥ ನಾರಾಯಣ ಅವರ ನಡುವಿನ ಹೋರಾಟಕ್ಕೆ ವೇದಿಕೆಯಾಗಿದೆ ಈ ಬೆಂಗಳೂರು ಗ್ರಾಮಾಂತರ ಕ್ಷೇತ್ರ.
ಡಿಕೆ’ ಬ್ರದರ್ಸ್​​ ಸಾಮ್ರಾಜ್ಯದಲ್ಲಿ ಕಮಲ ಪಡೆ ‘ನಾರಾಯಣ’ ಜಪ ಶುರುವಾಗಿದೆ. ಡಿ.ಕೆ. ಸುರೇಶ್’​ ಅವರನ್ನು ಕಟ್ಟಿ ಹಾಕ್ತಾರಾ ‘ಕೇಸರಿ ಕಲಿ’ ಅನ್ನೋದು ಕುತೂಹಲವಾಗಿದೆ. ಈ ಲೋಕಸಭಾ ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳಲ್ಲಿ 3 ಕ್ಷೇತ್ರಗಳಲ್ಲಿ ಜೆಡಿಎಸ್​, 4ರಲ್ಲಿ ಕಾಂಗ್ರೆಸ್ ಮತ್ತು 1ರಲ್ಲಿ ಮಾತ್ರ ಬಿಜೆಪಿ ಶಾಸಕರಿದ್ದಾರೆ.

ಅಸೆಂಬ್ಲಿ ಕ್ಷೇತ್ರಗಳು ಮತ್ತು ಶಾಸಕರು

ರಾಮನಗರ -ಜೆಡಿಎಸ್ -​ ಅನಿತಾ ಕುಮಾರಸ್ವಾಮಿ

ಚನ್ನಪಟ್ಟಣ – ಜೆಡಿಎಸ್ -​ ಎಚ್​.ಡಿ ಕುಮಾರಸ್ವಾಮಿ

ಮಾಗಡಿ -ಜೆಡಿಎಸ್​  -ಎ ಮಂಜುನಾಥ್​

ಕನಕಪುರ – ಕಾಂಗ್ರೆಸ್​ -ಡಿ.ಕೆ ಶಿವಕುಮಾರ್

ಕುಣಿಗಲ್ – ಕಾಂಗ್ರೆಸ್​​ – ಡಾ.ಹೆಚ್​.ಡಿ ರಂಗನಾಥ್​

ಆನೇಕಲ್​ – ಕಾಂಗ್ರೆಸ್​ – ಶಿವಣ್ಣ

ರಾಜರಾಜೇಶ್ವರಿ ನಗರ – ಕಾಂಗ್ರೆಸ್​ – ಮುನಿರತ್ನ

ಬೆಂಗಳೂರು ದಕ್ಷಿಣ -ಬಿಜೆಪಿ – ಎಂ.ಕೃಷ್ಣಪ್ಪ

ಇದುವರೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ 1 ಬಾರಿ ಜೆಡಿಎಸ್​​. 2 ಬಾರಿ ಕಾಂಗ್ರೆಸ್​ ಅಭ್ಯರ್ಥಿಗಳು ಜಯಿಸಿದ್ದಾರೆ. 2008ರಲ್ಲಿ ಈ ಕ್ಷೇತ್ರ ಅಸ್ಥಿತ್ವಕ್ಕೆ ಬಂದಿದ್ದು, ಅದಕ್ಕೂ ಮುನ್ನ ಕನಕಪುರ ಲೋಕಸಭಾ ಕ್ಷೇತ್ರವಾಗಿತ್ತು. ಆಗ 9 ಬಾರಿ ಕಾಂಗ್ರೆಸ್​, 1 ಬಾರಿ ಬಿಜೆಪಿ, ಒಮ್ಮೆ ಜನತಾದಳ, ಒಮ್ಮೆ ಜೆಡಿಎಸ್​, ಅಭ್ಯರ್ಥಿಗಳು ಗೆದ್ದಿದ್ದರು. ಈ ಕನಕಪುರ ಕ್ಷೇತ್ರ ಅಸ್ಥಿತ್ವಕ್ಕೆ ಬಂದಿದ್ದು 1967ರಲ್ಲಿ.
ಕನಕಪುರ ಕ್ಷೇತ್ರ
1967 : ಎಂ.ವಿ ರಾಜಶೇಖರನ್, ಕಾಂಗ್ರೆಸ್
1971 : ಸಿ.ಕೆ ಜಾಫರ್ ಷರೀಫ್, ಕಾಂಗ್ರೆಸ್
1977, 1980,1984,1989, 1991 : ಎಂ.ವಿ ಚಂದ್ರಶೇಖರ ಮೂರ್ತಿ, ಕಾಂಗ್ರೆಸ್​
2002 : ಹೆಚ್.ಡಿ ದೇವೇಗೌಡ, ಜೆಡಿಎಸ್​ (ಉಪ ಚುನಾವಣೆ)
2004 : ತೇಜಸ್ವಿನಿ ಶ್ರೀರಮೇಶ್, ಕಾಂಗ್ರೆಸ್​

ಬೆಂಗಳೂರು ಗ್ರಾಮಾಂತರ
2009 : ಹೆಚ್​.ಡಿ ಕುಮಾರಸ್ವಾಮಿ, ಜೆಡಿಎಸ್​
2013 : ಡಿ.ಕೆ ಸುರೇಶ್​, ಕಾಂಗ್ರೆಸ್
2014 : ಡಿ.ಕೆ ಸುರೇಶ್​, ಕಾಂಗ್ರೆಸ್​

ಲೋಕ ಸಮರ – 2014 : ಕಳೆದ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್​ನ ಡಿ.ಕೆ ಸುರೇಶ್​ ಅವರು ಬಿಜೆಪಿಯ ತುಳಸಿ ಮುನಿರಾಜು ಗೌಡ ಅವರ ವಿರುದ್ಧ 2,31,480 ಮತಗಳ ಅಂತರದಿಂದ ಗೆಲುವು ಪಡೆದಿದ್ದರು. ಡಿ ಕೆ ಸುರೇಶ್ 6,52,723 ಮತಗಳನ್ನು, ತುಳಸಿ ಮುನಿರಾಜು ಗೌಡ 4,21,243 ಮತಗಳನ್ನು ಪಡೆದಿದ್ದರು. ಜೆಡಿಎಸ್​ನ ಪ್ರಭಾಕರ ರೆಡ್ಡಿ ಅವರಿಗೆ 3,17,870 ಮತಗಳು ಬಂದಿದ್ದವು.

‘ಮತ’ಗಣಿತ
ಪುರುಷರು 12,89,577

ಮಹಿಳೆಯರು 12,07,963

ಹೊಸ ಮತದಾರರು 4,31,000

ಒಟ್ಟು 24,97,540

‘ಜಾತಿ’ ಗಣಿತ
ಒಕ್ಕಲಿಗರು 7,10,000

ಎಸ್​​ಸಿ/ಎಸ್​ಟಿ 5,20,000

ಲಿಂಗಾಯತರು 2,60,000

ಕುರುಬರು 1,00,000

ರೆಡ್ಡಿ ಸಮುದಾಯ 1,00,000

ಮುಸ್ಲಿಂ 2,50,000

ಇತರೆ 4,00,000

ಅಭ್ಯರ್ಥಿಗಳ ಬಲಾಬಲ
ಡಿ.ಕೆ ಸುರೇಶ್ ಅವರಿಗೆ ಪೂರಕ ಅಂಶಗಳೇನು?
ಕಾಂಗ್ರೆಸ್ ಹಾಗೂ ಜೆಡಿಎಸ್​​ನ ಒಮ್ಮತದ ಅಭ್ಯರ್ಥಿ
ಕ್ಷೇತ್ರದಲ್ಲಿರುವ ಕಾಂಗ್ರೆಸ್​ ಮತ್ತು ಜೆಡಿಎಸ್​ನ ಶಾಸಕರ ಬೆಂಬಲ
ಕ್ಷೇತ್ರದಲ್ಲಿ ಅಭಿವೃದ್ಧಿ ಹರಿಕಾರ ಎಂಬ ಹೆಸರು
ಕ್ಷೇತ್ರಕ್ಕೆ ಶೇ.100 ಅನುದಾನ ಬಳಕೆ ಮಾಡಿರುವುದು
ಸಾಕಷ್ಟು ಅಭಿವೃದ್ಧಿ ಕಾರ್ಯಗಳು ಕೈ ಹಿಡಿಯಲಿವೆ ಅನ್ನೋ ನಿರೀಕ್ಷೆ
ಡಿಕೆ ಬ್ರದರ್ಸ್​​ ಭದ್ರಕೋಟೆ ಬೆಂಗಳೂರು ಗ್ರಾಮಾಂತರ
ಹ್ಯಾಟ್ರಿಕ್ ಗೆಲುವಿಗೆ ಪಣ ತೊಟ್ಟಿರುವುದು
ಬಿಜೆಪಿ ಅಭ್ಯರ್ಥಿ ಅಶ್ವತ್ಥನಾರಾಯಣ ಕ್ಷೇತ್ರದ ಜನರಿಗೆ ಪರಿಚಿತರಲ್ಲ

ಡಿ.ಕೆ ಸುರೇಶ್ ಅವರಿಗಿರುವ ಆತಂಕಗಳೇನು?
‘ಪಾಳೆಗಾರಿಕೆ ಸಂಸ್ಕೃತಿ’ ಎಂಬ ಆರೋಪ
ಶುದ್ಧ ಹಸ್ತರಲ್ಲ ಎಂಬ ಭಾವನೆ ಜನರಲ್ಲಿ ಇರುವುದು
ಕುಡಿಯುವ ನೀರಿನ ಸಮಸ್ಯೆ ಜಾಸ್ತಿಯಾಗಿದೆ
ಕುಡಿಯುವ ನೀರಿನ ಸಮಸ್ಯೆ ಬಗ್ಗೆ ನಿರ್ಲಕ್ಷ್ಯ
ಮೋದಿ ಅಲೆ ಚಿತ್ರಣ ಬದಲಿಸಬಹುದು ಎಂಬ ಆತಂಕ

ಅಶ್ವತ್ಥನಾರಾಯಣ ಅವರಿಗೆ ಪೂರಕ ಅಂಶಗಳೇನು?
ಸುನಾಮಿಯಂತೆ ಎದ್ದಿರುವ ಪ್ರಧಾನಿ ನರೇಂದ್ರ ಮೋದಿ ಅಲೆ
ಕ್ಷೇತ್ರದಲ್ಲಿ ಈ ಬಾರಿಯಾದರೂ ಕೇಸರಿ ಪತಾಕೆ ಹಾರಿಸುವ ಹಠ
ಅಶ್ವತ್ಥನಾರಾಯಣಗೆ ಸಂಘಪರಿವಾರದ ಪ್ರಬಲ ಬೆಂಬಲ
ಡಿಕೆ ಬ್ರದರ್ಸ್​​ ಕಾರ್ಯವೈಖರಿ ಬಗ್ಗೆ ಕೆಲವರಲ್ಲಿ ಅಸಮಾಧಾನ ಇರುವುದು

ಅಶ್ವತ್ಥನಾರಾಯಣ ಅವರಿಗಿರುವ ಆತಂಕಗಳು?
ಡಿಕೆ ಬ್ರದರ್ಸ್ ಭದ್ರಕೋಟೆ ಭೇದಿಸುವುದು ಅಷ್ಟು ಸುಲಭವಲ್ಲ
ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿಯಿರುವುದರಿಂದ ‘ಮತ’ ಆತಂಕ
ಕಮಲ ಪಡೆಯಲ್ಲಿಯೇ ಒಳಜಗಳ
ಬಿಜೆಪಿ ಹೈಕಮಾಂಡ್ ಕೂಡ ಈ ಕ್ಷೇತ್ರವನ್ನು ಆಟಕ್ಕುಂಟು ಲೆಕ್ಕಕ್ಕಿಲ್ಲದ ಹಾಗೆ ನೋಡುತ್ತಿರುವುದು
ಕ್ಷೇತ್ರದಲ್ಲಿ ಒಬ್ಬರೇ ಬಿಜೆಪಿ ಶಾಸಕರು ಇರುವುದು
ಮೋದಿ ಅಲೆಯನ್ನು ಪ್ರಮುಖವಾಗಿ ನಂಬಿಕೊಂಡಿರುವುದು

ಪ್ರಭಾವ ಬೀರುವ ಅಂಶಗಳು
ಕ್ಷೇತ್ರದಲ್ಲಿ ಪ್ರಮುಖವಾಗಿ ಜಾತಿ ಪ್ರಾಬಲ್ಯ ಕೆಲಸ ಮಾಡುತ್ತದೆ
ಒಕ್ಕಲಿಗರು ಅಧಿಕವಾಗಿರುವುದರಿಂದ ಅವರೇ ನಿರ್ಣಾಯಕ
ಹಾಲಿ ಸಂಸದರು ರಾಮನಗರ ಜಿಲ್ಲೆಗಷ್ಟೇ ಸೀಮಿತ ಎಂಬ ಅಪವಾದ
ರಾಮನಗರ ಜಿಲ್ಲೆಯಲ್ಲಿ ಕಲ್ಲು, ಮರಳು ಅಕ್ರಮ ಗಣಿಗಾರಿಕೆ ಅವ್ಯಾಹತವಾಗಿರುವುದು
ಕಬ್ಬು, ರೇಷ್ಮೆ ಬೆಳೆಗಾರರಿಗೆ ಬೆಂಬಲ ಬೆಲೆ ಒದಗಿಸುವಲ್ಲಿ ಸಂಸದರ ಪಾತ್ರ ತೀರಾ ಕಡಿಮೆ
ನಗರ ಪ್ರದೇಶಗಳಲ್ಲಿ ಟ್ರಾಫಿಕ್ ಸಮಸ್ಯೆ ಹೆಚ್ಚು
ಎಗ್ಗಿಲ್ಲದೆ ತಲೆಯೆತ್ತುತ್ತಿರುವ ಅಪಾರ್ಟ್​​ಮೆಂಟ್​​ಗಳು
ಕೆರೆಗಳು ವಸತಿ ಪ್ರದೇಶಗಳಾಗಿ ಬದಲಾಗುತ್ತಿರುವುದು
ಇತ್ತೀಚಿನ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಜಾಸ್ತಿಯಾಗಿರುವುದು

ಸಂಸದರು ಮಾಡಿದ್ದೇನು? (ಅನುದಾನ ಬಳಕೆ) (ಡಿ.ಕೆ ಸುರೇಶ್​)
ಸಂಸದರ ಕ್ಷೇತ್ರಾಭಿವೃದ್ಧಿ ನಿಧಿಯನ್ನು ಶೇ.100 ರಷ್ಟು ಬಳಕೆ ಮಾಡಿದ್ದಾರೆ
ಕೇಂದ್ರದ 25 ಕೋಟಿ ರೂಪಾಯಿ ಅನುದಾನವನ್ನು ಯೋಜನೆಗಳಿಗೆ ಬಳಕೆ ಮಾಡಿದ್ದಾರೆ
ಸಂಸದರ ಆದರ್ಶ ಗ್ರಾಮ ಯೋಜನೆಯಲ್ಲಿ ಕನಕಪುರ ತಾಲೂಕಿನ ಯಲಚವಾಡಿ ಗ್ರಾಮ ಆಯ್ಕೆ
ಕ್ಷೇತ್ರ ವಾಪ್ತಿಯಲ್ಲಿ ಸಾಕಷ್ಟು ಮೂಲಸೌಕರ್ಯ ಕಲ್ಪಿಸಿಕೊಟ್ಟಿದ್ದಾರೆ
ರೇಷ್ಮೆನಾಡು ರಾಮನಗರ ಜಿಲ್ಲೆಗೆ ನೀರಾವರಿ ಯೋಜನೆಗಾಗಿ 200 ಕೋಟಿ ರೂ. ಮಂಜೂರು
ಕ್ಷೇತ್ರದಾದ್ಯಂತ ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಾಪನೆ
ಆನೆಕಲ್ ಪುರಸಭೆ ವ್ಯಾಪ್ತಿಯಲ್ಲಿ ಕುಡಿಯಲು ಕಾವೇರಿ ಸಂಪರ್ಕ ಕಲ್ಪಿಸಿದ್ದು ಸಂಸದರ ಹೆಸರಿಗಿರುವ ಹೆಗ್ಗಳಿಕೆ

ಕ್ಷೇತ್ರ ಪರಿಚಯ

ರೇಷ್ಮೆನಗರಿ ರಾಮನಗರದ ರಾಮದೇವರ ಬೆಟ್ಟ, ರೇವಣ್ಣ ಸಿದ್ದೇಶ್ವರ ಬೆಟ್ಟ
ಅಂಬೆಗಾಲು ಕೃಷ್ಣ ದೇವಾಲಯ, ಜಾನಪದ ಲೋಕ
ಬೊಂಬೆ ನಗರಿಯ ಕಣ್ವ ಜಲಾಶಯ, ಕಬ್ಬಾಳಮ್ಮ ದೇವಾಲಯ ಧಾರ್ಮಿಕ ಕ್ಷೇತ್ರ
ಕನಕಪುರದ ಸಂಗಮ, ಮೇಕೆದಾಟು, ಚುಂಚಿ ಫಾಲ್ಸ್ ಹೆಚ್ಚು ಪ್ರಸಿದ್ಧ
ಮಾಗಡಿಯ ಸಾವನದುರ್ಗ ಬೆಟ್ಟ, ಕೆಂಪೇಗೌಡರ ಕೋಟೆ, ರಂಗನಾಥ ಸ್ವಾಮಿ ದೇವಾಲಯ
ಕುಣಿಗಲ್​ ತಾಲೂಕಿನ ಚೋಳರ ಕಾಲದಲ್ಲಿ ನಿರ್ಮಿತವಾದ ಕೊಂಕನೋಮೇಶ್ವರ ದೇವಾಲಯ
ಖ್ಯಾತಿ ಪಡೆದಿರುವ ಮೂಡಲ್ ಕುಣಿಕಲ್​ ಕೆರೆ
ಬೆಂಗಳೂರಿನ ರಾಜರಾಜೇಶ್ವರಿ ದೇವಾಲಯ

RELATED ARTICLES

Related Articles

TRENDING ARTICLES