Sunday, September 24, 2023
Powertv Logo

Kannada Kannada English English Hindi Hindi Telugu Telugu Tamil Tamil Malayalam Malayalam

Homeರಾಜ್ಯಕಾಂಗ್ರೆಸ್​ ಸಭೆಯಲ್ಲಿ ಮೋದಿ ಭಾವಚಿತ್ರ ಹಿಡಿದು ಘೋಷಣೆ

ಕಾಂಗ್ರೆಸ್​ ಸಭೆಯಲ್ಲಿ ಮೋದಿ ಭಾವಚಿತ್ರ ಹಿಡಿದು ಘೋಷಣೆ

ಹಾಸನ: ಚನ್ನರಾಯಪಟ್ಟಣ ಕಾಂಗ್ರೆಸ್​ನಲ್ಲಿ‌ ಅಸಮಾಧಾನ ಭುಗಿಲೆದ್ದಿದ್ದು, ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮೋದಿ ಭಾವಚಿತ್ರ ಪ್ರದರ್ಶಿಸಿ ಘೋಷಣೆ ಕೂಗಿದ ಘಟನೆ ನಡೆದಿದೆ. ಮಾಜಿ ಶಾಸಕ ಸಿ.ಎಸ್.ಪುಟ್ಟೇಗೌಡ ನಿವಾಸದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆ ಕರೆಯಲಾಗಿತ್ತು. ಸಭೆಯಲ್ಲಿ ಮುಖಂಡರು ಭಾಷಣ ಆರಂಭಸುತ್ತಿದ್ದಂತೆ ಗದ್ದಲ ಎಬ್ಬಿಸಿದ್ದು, ನಾವು ಜೆಡಿಎಸ್​ಗೆ ಮತ ಹಾಕಲ್ಲ ಬಿಜೆಪಿ ಹಾಕ್ತೀವಿ ಎಂದು ಘೋಷಣೆ ಕೂಗಿದ್ದಾರೆ. ಇದೇ ವೇಳೆ ಪ್ರಧಾನಿ ಮೋದಿಯವರ ಭಾವಚಿತ್ರ ಪ್ರದರ್ಶಿಸಿ ಘೋಷಣೆಗಳನ್ನ ಕೂಗಿದ್ದು, ಕಾಂಗ್ರೆಸ್ ಮುಖಂಡರು ‌ಹಾಗೂ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು.

8 COMMENTS

LEAVE A REPLY

Please enter your comment!
Please enter your name here

Most Popular

Recent Comments