Sunday, September 24, 2023
Powertv Logo

Kannada Kannada English English Hindi Hindi Telugu Telugu Tamil Tamil Malayalam Malayalam

Homeರಾಜಕೀಯಗ್ರೌಂಡ್​​ ರಿಪೋರ್ಟ್​ : ಬಿಜೆಪಿ ಕೋಟೆಯಲ್ಲಿ ಮುಂದುವರಿಯುತ್ತಾ ಶೋಭಾ ವಿಜಯ ಯಾತ್ರೆ?

ಗ್ರೌಂಡ್​​ ರಿಪೋರ್ಟ್​ : ಬಿಜೆಪಿ ಕೋಟೆಯಲ್ಲಿ ಮುಂದುವರಿಯುತ್ತಾ ಶೋಭಾ ವಿಜಯ ಯಾತ್ರೆ?

ಗ್ರೌಂಡ್​​ ರಿಪೋರ್ಟ್​ 9 : ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ

ಉಡುಪಿ- ಚಿಕ್ಕಮಗಳೂರು : ಬಿಜೆಪಿಯ ಭದ್ರಕೋಟೆ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಶೋಭಾ ಕರಂದ್ಲಾಜೆ ಮತ್ತು ಪ್ರಮೋದ್ ಮಧ್ವರಾಜ್ ಅವರ ನಡುವಿನ ಜಿದ್ದಾಜಿದ್ದಿನ ಹೋರಾಟಕ್ಕೆ ವೇದಿಕೆಯಾಗಿದೆ. ಈ ಲೋಕಸಭಾ ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳಲ್ಲಿ 7ರಲ್ಲಿ ಬಿಜೆಪಿ ಶಾಸಕರಿದ್ದರೆ, ಒಂದು ಕ್ಷೇತ್ರದಲ್ಲಿ ಮಾತ್ರ ಕಾಂಗ್ರೆಸ್​ ಎಂಎಲ್​ಎ ಇದ್ದಾರೆ. ಜೆಡಿಎಸ್​ ಹೆಸರೇ ಇಲ್ಲಿಲ್ಲ. ಹೀಗಾಗಿ ಬಿಜೆಪಿಯ ಶೋಭಾ ಕರಂದ್ಲಾಜೆ ಅವರಿಗೆ ಹೆಚ್ಚಿನ ಬಲವಿದೆ. ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಅವರಿಗೆ ಅಂದುಕೊಂಡಷ್ಟು ಸುಲಭವಿಲ್ಲ.

ಅಸೆಂಬ್ಲಿ ಕ್ಷೇತ್ರಗಳು ಮತ್ತು ಶಾಸಕರು

ಉಡುಪಿ – ಬಿಜೆಪಿ- ಕೆ. ರಘುಪತಿ ಭಟ್​​

ಕಾರ್ಕಳ -ಬಿಜೆಪಿ -ವಿ. ಸುನಿಲ್​ ಕುಮಾರ್​​

ಕಾಪು – ಬಿಜೆಪಿ -ಲಾಲಾಜಿ ಆರ್​ ಮೆಂಡನ್​

ಕುಂದಾಪುರ – ಬಿಜೆಪಿ –  ಹಾಲಾಡಿ ಶ್ರೀನಿವಾಸ್​ ಶೆಟ್ಟಿ

ಚಿಕ್ಕಮಗಳೂರು – ಬಿಜೆಪಿ ಸಿಟಿ ರವಿ

ತರೀಕೆರೆ – ಬಿಜೆಪಿ – ಡಿ.ಎಸ್​. ಸುರೇಶ್​

ಶೃಂಗೇರಿ – ಕಾಂಗ್ರೆಸ್​ – ಟಿ ಡಿ ರಾಜೇಗೌಡ

ಮೂಡಿಗೆರೆ (ಎಸ್​ಸಿ) – ಬಿಜೆಪಿ -ಎಂ ಪಿ ಕುಮಾರಸ್ವಾಮಿ

ಇದುವರಿಗೆ ಈ ಕ್ಷೇತ್ರದಿಂದ 2 ಬಾರಿ ಬಿಜೆಪಿ, 1 ಬಾರಿ ಕಾಂಗ್ರೆಸ್​ ಅಭ್ಯರ್ಥಿಗಳು ಸಂಸತ್​​ ಪ್ರವೇಶಿಸಿದ್ದಾರೆ.
2009 : ಡಿ.ವಿ ಸದಾನಂದಗೌಡ, ಬಿಜೆಪಿ
2012 : ಕೆ. ಜಯಪ್ರಕಾಶ್ ಹೆಗಡೆ, ಕಾಂಗ್ರೆಸ್​
2014 : ಶೋಭಾ ಕರಂದ್ಲಾಜೆ, ಬಿಜೆಪಿ

2014ರ ‘ಲೋಕ’ ಸಮರ
ಬಿಜೆಪಿಯ ಶೋಭಾ ಕರಂದ್ಲಾಜೆ ಕಾಂಗ್ರೆಸ್​ನ ಕೆ.ಜಯಪ್ರಕಾಶ್ ಹೆಗ್ಡೆ 1,81,643 ಅಂತರದ ಗೆಲುವು ಪಡೆದಿದ್ದರು. ಶೋಭಾ ಕರಂದ್ಲಾಜೆಗೆ 5,81,168 ಮತಗಳು, ಕೆ.ಜಯಪ್ರಕಾಶ್ ಹೆಗ್ಡೆ ಅವರಿಗೆ 3,99,525 ಮತಗಳು ಬಂದಿದ್ದವು. ಜೆಡಿಎಸ್​ನ ವಿ.ಧನಂಜಯ್ ಕುಮಾರ್ ಕೇವಲ 14,895 ಮತಗಳನ್ನು ಪಡೆದಿದ್ದರು.

‘ಮತ’ಗಣಿತ

ಪುರುಷರು 7,30,388

ಮಹಿಳೆಯರು 7,64,105

ತೃತೀಯ ಲಿಂಗಿಗಳು 50

ಒಟ್ಟು 14,94,443

‘ಜಾತಿ’ ಗಣಿತ
ಎಸ್​ಸಿ, ಎಸ್​ಟಿ 2,11,500

ಬಿಲ್ಲವ 1,55,050

ಬಂಟ್ಸ್ 1,32,100

ಮುಸ್ಲಿಂ 1,23,300

ಮೊಗವೀರ 1,04,250

ಒಕ್ಕಲಿಗ 1,05,700

ಲಿಂಗಾಯತ 74,000

ಬ್ರಾಹ್ಮಣ 68,450

ಕ್ರೈಸ್ತರು 72,000

ಕುರುಬ 54,000

ಇತರೆ 3,94,102

ಅಭ್ಯರ್ಥಿಗಳ ಬಲಾಬಲ
ಪ್ರಮೋದ್ ಮಧ್ವರಾಜ್​​​​​​​​​​​​​​​​​​​​​​​​​​​​​​​ ಅವರಿಗೆ ಪೂರಕ ಅಂಶಗಳು

ರಾಜ್ಯದಲ್ಲಿ ಅಧಿಕಾರದಲ್ಲಿರುವ ದೋಸ್ತಿ ಪಕ್ಷಗಳ ಒಮ್ಮತದ ಅಭ್ಯರ್ಥಿ
ಸಿದ್ಧರಾಮಯ್ಯ ಸರಕಾರದಲ್ಲಿ ನಂಬರ್ ಒನ್​​ ಶಾಸಕರಾಗಿದ್ದವರು
ಹಾಲಿ ಸಂಸದೆ ಶೋಭಾ ಕರಂದ್ಲಾಜೆ ಜನಸಾಮಾನ್ಯರ ಹತ್ತಿರವೂ ಸುಳಿಯಲ್ಲ ಎಂಬ ಆರೋಪ
ಶೋಭಾ ಕರಂದ್ಲಾಜೆ ವಿರುದ್ಧ ಗೋ ಬ್ಯಾಕ್​ ಅಭಿಯಾನ
ಯುವಜನ ಕ್ರೀಡಾ ಸಚಿವರಾಗಿ ಸೇವೆ ನೀಡಿರುವ ಅನುಭವ
ಸಾಫ್ಟ್ ಹಿಂದುತ್ವ ಮತ್ತು ಮೊಗವೀರ ಸಮುದಾಯದವರ ಸಂಪೂರ್ಣ ಬೆಂಬಲ

ಪ್ರಮೋದ್ ಮಧ್ವರಾಜ್​​​​​​​​​​​​​​​​​​​​​​​​​​​​​​​ ಅವರಿಗೆ ಆತಂಕಗಳೇನು?

ಕಾರ್ಯಕರ್ತರೊಂದಿಗೆ ನಿರಂತರ ಸಂಪರ್ಕದಲ್ಲಿರಲು ವಿಫಲವಾಗಿರುವುದು
ಕರಾವಳಿಯಲ್ಲಿ ಹಿಂದುತ್ವ ಮತ್ತು ಮೋದಿ ಅಲೆ ಅಡ್ಡಿಯಾಗಬಹುದು
ಕಾಂಗ್ರೆಸ್ ಪಕ್ಷದವರಾಗಿ ಜೆಡಿಎಸ್​​ನಿಂದ ಸ್ಪರ್ಧಿಸಿರುವುದು
ಜೆಡಿಎಸ್​ನಿಂದ ಸ್ಪರ್ಧಿಸಿರುವುದರಿಂದ ಕಾಂಗ್ರೆಸ್​ ಕಾರ್ಯಕರ್ತರಿಗೆ ಅಸಮಾಧಾನ
ಚಾರ್ಮ್ ಉಳಿಸಿಕೊಳ್ಳದ ರಾಜಕೀಯ ನಾಯಕರ ಪಟ್ಟಿಯಲ್ಲಿರುವುದು

ಶೋಭಾ ಕರಂದ್ಲಾಜೆ ಅವರಿಗೆ ಪೂರಕ ಅಂಶಗಳು
ಕರಾವಳಿ ಭಾಗದಲ್ಲಿ ಬಿಜೆಪಿ 5 ಕ್ಷೇತ್ರಗಳಲ್ಲಿ ಹಿಡಿತ ಸಾಧಿಸಿರುವುದು
ಮೋದಿ ಮತ್ತು ಹಿಂದುತ್ವದ ಭದ್ರ ಕೋಟೆಯಾಗಿರುವ ಕರಾವಳಿ ಕ್ಷೇತ್ರ
ಮಹಿಳಾ ಅಭ್ಯರ್ಥಿ ಎನ್ನುವ ಸಿಂಪತಿ ಮತ್ತು ರಾಜ್ಯದ ಉತ್ತಮ ಮಹಿಳಾ ರಾಜಕಾರಣಿ
ಹಿಂದೂ ಕಾರ್ಯಕರ್ತರ ಜೊತೆಗೆ ಇರುವ ನಿರಂತರ ಸಂಪರ್ಕ

ಶೋಭಾ ಕರಂದ್ಲಾಜೆ ಅವರಿಗೆ ಆತಂಕಗಳೇನು?

ಹಾಲಿ ಸಂಸದೆಯಾಗಿ ಯಾವುದೇ ಕೆಲಸ ಮಾಡಿಲ್ಲ ಎನ್ನುವ ದೂರು
ಸ್ವ ಪಕ್ಷೀಯರಿಂದಲೇ ‘ಗೋ ಬ್ಯಾಕ್’ ಶೋಭಕ್ಕ ಅಭಿಯಾನ
ಪಕ್ಷದ ಕಾರ್ಯಕರ್ತರ ಕೈಗೆ ಸಿಗದೆ ಇರುವುದು
ಸಂಸದರ ನಿಧಿ ಬಳಕೆ ಮಾಡದೆ ಇರುವುದು
ನೋಟಾ ಅಭಿಯಾನ ಆರಂಭವಾಗಿರುವುದು

ಪ್ರಭಾವ ಬೀರುವ ಅಂಶಗಳು
——————————————–
ಮಲ್ಪೆಯಿಂದ ಕಾಣೆಯಾದ ಮೀನುಗಾರ ಪತ್ತೆ ವಿಚಾರ
ಅಸಮರ್ಪಕ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿಯ ಸಮಸ್ಯೆ
3-4 ವರ್ಷಗಳಿಂದ ಜಿಲ್ಲೆಯಲ್ಲಿ ಮರಳುಗಾರಿಕೆ ಸ್ಥಗಿತವಾಗಿರುವುದು
ಅಡಿಕೆ ಬೆಳೆಗಾರರ ಸಮಸ್ಯೆ, ಕಸ್ತೂರಿ ರಂಗನ್ ವರದಿ ವಿಚಾರ
ಚಿಕ್ಕಮಗಳೂರಿಗೆ ಹೊಸ ಯೋಜನೆಗಳು ಬಾರದಿರುವುದು

ಸಂಸದರು ಮಾಡಿದ್ದೇನು? (ಅನುದಾನ ಬಳಕೆ)
ಒಟ್ಟು ಅನುದಾನ 3,777 ಕೋಟಿ ರೂಪಾಯಿ
ಕೇಂದ್ರ ರಸ್ತೆ ನಿಧಿ ಯೋಜನೆಗೆ 569.09 ಕೋಟಿ ರೂಪಾಯಿ
ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಗೆ 82.05 ಕೋಟಿ ರೂಪಾಯಿ
ರಾಷ್ಟ್ರಿಯ ಹೆದ್ದಾರಿ ಅಭಿವೃದ್ಧಿ ಯೋಜನೆಗೆ 1147 ಕೋಟಿ ರೂಪಾಯಿ
ಕರಾವಳಿ ಪ್ರವಾಸೋದ್ಯಮಕ್ಕೆ 25 ಕೋಟಿ ರೂಪಾಯಿ
ವಿದ್ಯುತ್ ಸಂಪರ್ಕಕ್ಕೆ 247.57 ಕೋಟಿ ರೂಪಾಯಿ
ಶಿಕ್ಷಣಕ್ಕೆ 257.13 ಕೋಟಿ ರೂಪಾಯಿ
ನಗರಾಭಿವೃದ್ಧಿಗೆ 135.5 ಕೋಟಿ ರೂಪಾಯಿ
ಚಿಕ್ಕಮಗಳೂರಿಗೆ 136 ಕೋಟಿ ರೂಪಾಯಿ
ಲೋಕಸಭಾ ಕ್ಷೇತ್ರದಾದ್ಯಂತ 2,02,379 ಶೌಚಾಲಯ ನಿರ್ಮಾಣ
ಶೋಭಾ ಕೇಂದ್ರದ ಯೋಜನೆ ಮಾತ್ರ ಜಾರಿಗೆ ತಂದಿದ್ದಾರೆ ಅನ್ನೋದು ಜನರ ಆರೋಪ
ಸಂಸದರ ನಿಧಿ ಬಳಕೆಯಲ್ಲಿ ವಿಫಲರಾಗಿದ್ದಾರೆ ಎಂಬ ದೂರು

ಕ್ಷೇತ್ರ ಪರಿಚಯ
ಚಿಕ್ಕಮಗಳೂರು ಕಾಫಿಗೆ ಬಹಳ ಪ್ರಸಿದ್ಧ
ಚಿಕ್ಕಮಗಳೂರು ಕಾಫಿ ನಾಡು ಎಂದೇ ಪ್ರಖ್ಯಾತ
ಕೆಮ್ಮಣ್ಣುಗುಂಡಿ ಗಿರಿಧಾಮ ಬಹಳ ಫೇಮಸ್​​
ಬಾಬಾಬುಡನ್ ಗಿರಿ ಹಿಂದು-ಮುಸ್ಲಿಮರ ಯಾತ್ರಾ ಸ್ಥಳ
ಇತಿಹಾಸ ಪ್ರಸಿದ್ಧ ಉಡುಪಿ ಶ್ರೀಕೃಷ್ಣ ದೇವಸ್ಥಾನ
ಶೃಂಗೇರಿ ಶಾರದಾಂಬೆಯ ದೇವಾಲಯ
ಕೊಲ್ಲೂರು ಮೂಕಾಂಬಿಕೆ, ಹೊರನಾಡು ಅನ್ನಪೂರ್ಣೇಶ್ವರಿ ಕ್ಷೇತ್ರ
ಕಾರ್ಕಳದಲ್ಲಿರುವ ಗೋಮಟೇಶ್ವರ ಈ ಕ್ಷೇತ್ರದ ವಿಶೇಷ
ನಯನ ಮನೋಹರವಾದ ಮರವಂತೆ ಮತ್ತು ಮಲ್ಪೆ ಕಡಲು
ಸೈಂಟ್ ಮೇರಿಸ್ ದ್ವೀಪ ಬಹಳ ಪ್ರಸಿದ್ಧ
ಮೀನುಗಾರಿಕಾ ಬಂದರುಗಳೇ ಕ್ಷೇತ್ರದ ಪ್ರೇಕ್ಷಣೀಯ ಸ್ಥಳಗಳು
ಯಕ್ಷಗಾನ, ಹುಲಿವೇಷ, ಕೋಲ, ಜನಪದ ಕಲೆಗಳ ತವರೂರು

LEAVE A REPLY

Please enter your comment!
Please enter your name here

Most Popular

Recent Comments