Thursday, December 26, 2024

ಕಾಂಗ್ರೆಸ್‌ ಪ್ರಣಾಳಿಕೆ ಭಯೋತ್ಪಾದನೆ ಸ್ನೇಹಿ: ನಿರ್ಮಲಾ ಸೀತಾರಾಮನ್

ದೆಹಲಿ: ಕಾಂಗ್ರೆಸ್​ ಪ್ರಣಾಳಿಕೆ ಭಯೋತ್ಪಾದನೆ ಸ್ನೇಹಿ. ಹಾಗೂ ಸೇನೆಗೆ ವಿರೋಧವಾಗಿದೆ. ಪ್ರಣಾಳಿಕೆಯಲ್ಲಿ ಕಾಂಗ್ರೆಸ್​ ನೀಡಿರುವ ಭರವಸೆಗಳು ದೇಶದ ಭದ್ರತೆಗೆ ಅಪಾಯಕಾರಿಯಾಗಿವೆ ಅಂತ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ನಿನ್ನೆಯಷ್ಟೇ ಬಿಡುಗಡೆಯಾದ ಕಾಂಗ್ರೆಸ್​ ಪ್ರಣಾಳಿಕೆ ಬಗ್ಗೆ ಪ್ರತಿಕ್ರಿಯಿಸಿದ ನಿರ್ಮಲಾ ಸೀತಾರಾಮನ್ ಅವರು, “ಸೇನೆಗೆ ಇರುವಂತಹ ವಿಶೇಷ ಅಧಿಕಾರಗಳನ್ನು ಕಿತ್ತುಕೊಳ್ಳುವ ಬಗ್ಗೆ ಕಾಂಗ್ರೆಸ್​ ಮಾತನಾಡುತ್ತಿದೆ. ಸೇನೆಯ ಕೆಲವು ವಿಶೇಷ ಅಧಿಕಾರಗಳನ್ನು ಹಿಂಪಡೆಯುವುದಕ್ಕೆ ನಿಗದಿತ ನಿಯಮಗಳಿವೆ. ಕಾಂಗ್ರೆಸ್​ ಹೇಳಿದಂತೆ ಮಾಡಿದಲ್ಲಿ ಆಂತರಿಕ ಭದ್ರತೆಗೆ ತೊಂದರೆಯಾಗಲಿದೆ” ಎಂದಿದ್ದಾರೆ. ಪ್ರಣಾಳಿಕೆಯಲ್ಲಿ ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಯೋಧರ ಕುರಿತು ನಮೂದಿಸದಿರುವ ಕುರಿತು ಕಾಂಗ್ರೆಸ್​ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. “ಪುಲ್ವಾಮಾ ದಾಳಿ ಬಗ್ಗೆ ಹುತಾತ್ಮ ಯೋಧರ ಬಗ್ಗೆ ಅನುಕಂಪ ತೋರಿಸುತ್ತಲೇ, ಇನ್ನೊಂದು ಕಡೆ ಸೇನೆಯ ವಿಶೇಷ ಅಧಿಕಾರ ಕಿತ್ತುಕೊಂಡು ಅವರನ್ನು ದುರ್ಬಲಗೊಳಿಸಲು ಪ್ರಯತ್ನಿಸುತ್ತಿದ್ದಾರೆ” ಅಂತ ಆರೋಪಿಸಿದ್ದಾರೆ.

RELATED ARTICLES

Related Articles

TRENDING ARTICLES