Friday, July 19, 2024

ನಟರು ಪ್ರಚಾರ ಮಾಡ್ಲಿ, ಕಷ್ಟ ಏನಂತ ಅವ್ರಿಗೂ ಗೊತ್ತಾಗ್ಲಿ: ಸಿಎಂ

ಹಾಸನ: ಚಿತ್ರ ನಟ ನಟಿಯರು ಪ್ರಚಾರ ಮಾಡ್ಲಿ, ಕಷ್ಟ ಏನು ಅನ್ನೋದು ಅವ್ರಿಗೂ ಗೊತ್ತಾಗ್ಲಿ ಅಂತ ಸಿಎಂ ಹೆಚ್​. ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಶಿವಮೊಗ್ಗಕ್ಕೆ ತೆರಳುವ ಮಾರ್ಗ ಮಧ್ಯೆ ಹಾಸನ- ಶ್ರವಣಬೆಳಗೊಳ ಕ್ಷೇತ್ರದ ಶಾಸಕ ಬಾಲಕೃಷ್ಣ ಮನೆಯಲ್ಲಿ ಉಪಹಾರ ಸೇವಿಸಿ ಹೇಳಿಕೆ ನೀಡಿದ ಸಿಎಂ ಕುಮಾರಸ್ವಾಮಿ ಅವರು ಮಂಡ್ಯದಲ್ಲಿ ಚಾಲೆಂಜಿಂಗ್​ ಸ್ಟಾರ್​ ದರ್ಶನ್ ಹಾಗೂ ನಟ ಯಶ್ ಅವರ ಪ್ರಚಾರದ ಕುರಿತು ವ್ಯಂಗ್ಯ ಮಾಡಿದ್ದಾರೆ.

“ಸ್ಟಾರ್​ ನಟರು ದಿನ ನಿತ್ಯ ಛತ್ರಿ ಹಿಡಿದು ಸಿನಿಮಾ ಶೂಟಿಂಗ್​ನಲ್ಲಿ ಭಾಗಿ ಆಗುತ್ತಿದ್ದರು. ಈಗ ಸುಡು ಬಿಸಿಲಿಗೆ ಬಂದಿದ್ದಾರೆ, ಸ್ವಲ್ಪ ಸುತ್ತಾಡಲಿ, ನಮ್ಮ ರೈತರ ಕಷ್ಟ ಅರ್ಥವಾಗಲಿ. ಪ್ರಚಾರಮಾಡಲಿ ಬಿಡಿ. ಕಷ್ಟ ಎನ್ನೋದು ಗೊತ್ತಾಗಲಿ. ಸ್ಟಾರ್​ ನಟರ ಪ್ರಚಾರದಿಂದ ನಾನು ಆತಂಕಗೊಂಡಿಲ್ಲ, ಮೇ 23ಕ್ಕೆ ಎಲ್ಲ ಗೊತ್ತಾಗುತ್ತೆ ” ಅಂತ ಹೇಳಿದ್ದಾರೆ. ಮಂಡ್ಯ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಪರ ನಟ ದರ್ಶನ್, ಹಾಗೂ ಯಶ್​ ಪ್ರಚಾರ ನಡೆಸುತ್ತಿದ್ದಾರೆ. ಇಂದೂ ಪ್ರಚಾರ ನಡೆಯಲಿದ್ದು, ದರ್ಶನ್ ಮೂರನೇ ದಿನವೂ ಪ್ರಚಾರದಲ್ಲಿ ಭಾಗವಹಿಸಲಿದ್ದಾರೆ.

RELATED ARTICLES

Related Articles

TRENDING ARTICLES