Thursday, April 25, 2024

ಆರ್​ಸಿಬಿಗೆ 4ನೇ ಸೋಲು, ಆರ್​​ಆರ್​​​​​​​​​​​ಗೆ ಚೊಚ್ಚಲ ಗೆಲುವು..!

ಜೈಪುರ : ರಾಯಲ್​ ಚಾಲೆಂಜರ್ಸ್​​ ಬೆಂಗಳೂರು 12ನೇ ಆವೃತ್ತಿಯ ತನ್ನ 4ನೇ ಮ್ಯಾಚ್​ನಲ್ಲೂ ಸೋಲುವ ಮೂಲಕ ಅಭಿಮಾನಿಗಳಿಗೆ ನಿರಾಸೆ ಉಂಟು ಮಾಡಿದೆ. ಕಳೆದ 3 ಮ್ಯಾಚ್​ಗಳಲ್ಲಿ ಸೋತಿದ್ದ ರಾಜಸ್ಥಾನ್​ ರಾಯಲ್ಸ್​ ಆರ್​ಸಿಬಿ ಎದುರು 7 ವಿಕೆಟ್​​ಗಳ ಗೆಲುವು ಪಡೆದು ಪ್ರಸಕ್ತ ಆವೃತ್ತಿಯಲ್ಲಿ ಚೊಚ್ಚಲ ಗೆಲುವು ದಾಖಲಿಸಿದೆ.

‘ಸೋತವರ ಕಾಳಗ’ಕ್ಕೆ ಸಾಕ್ಷಿಯಾಗಿದ್ದ ಜೈಪುರದ ಸವಾಯ್​ ಮಾನ್ಸಿಂಗ್​ ಸ್ಟೇಡಿಯಂನಲ್ಲಿ ನಡೆದ ಮ್ಯಾಚ್​ನಲ್ಲಿ ಟಾಸ್​ ಗೆದ್ದ ಅತಿಥೇಯ ರಾಜಸ್ಥಾನ್ ರಾಯಲ್ಸ್​ ಪ್ರವಾಸಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರನ್ನು ಮೊದಲು ಬ್ಯಾಟಿಂಗ್​​ಗೆ ಆಹ್ವಾನಿಸಿತು.

ಮೊದಲು ಬ್ಯಾಟಿಂಗ್ ಮಾಡಿದ ಆರ್​ಸಿಬಿಗೆ ಕ್ಯಾಪ್ಟನ್​ ವಿರಾಟ್​ ಕೊಹ್ಲಿ (23), ಪಾರ್ಥಿವ್ ಪಟೇಲ್ (67) 49ರನ್​ಗಳ ಆರಂಭಿಕ ಜೊತೆಯಾಟವನ್ನು ನೀಡಿದರು. ತಂಡದ ಮೊತ್ತ 49 ಆಗಿದ್ದಾಗ ವಿರಾಟ್​ ಪೆವಿಲಿಯನ್ ಸೇರಿದರು. ನಂತರ ಬಂದ ಎ.ಬಿ ಡಿವಿಲಿಯರ್ಸ್​  (13) ಮತ್ತು ಹೆಟ್ಮೇರ್ (1) ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲವಾದರು. ಸ್ಟೋಯಿನ್ಸ್​ ಅಜೇಯ 31, ಮೊಯಿನ್ ಅಲಿ ಅಜೇಯ 18ರನ್ ಮಾಡಿದರು. ಅಂತಿಮವಾಗಿ ಆರ್​​ಸಿಬಿ ತನ್ನ ಪಾಲಿನ 20 ಓವರ್​ಗಳಲ್ಲಿ 4 ವಿಕೆಟ್​ಗೆ ಕೇವಲ 158ರನ್​ಗಳಿಸಿತು.

ಆರ್​ಆರ್​ ಕೊನೆಯ ಎಸೆತದಲ್ಲಿ ಗೆಲುವಿನ ಕೇಕೆ ಹಾಕಿತು. ಕ್ಯಾಪ್ಟನ್​ ಅಜಿಂಕ್ಯ ರಹಾನೆ 22, ಜೋಸ್​ ಬಟ್ಲರ್​ 59 ರನ್​​ಗಳಿಸಿ ಉತ್ತಮ ಆರಂಭ ನೀಡಿ ಪೆವಿಲಿಯನ್​ ಸೇರಿದ್ರು. ಸ್ಟೀವನ್​ ಸ್ಮಿತ್​  38 ರನ್​ ಕೊಡುಗೆ ನೀಡಿದ್ರು. ರಾಹುಲ್ ತ್ರಿಪತಿ ಅಜೇಯ 34,  ಸ್ಟ್ರೋಕ್​ ಅಜೇಯ 1ರನ್​​ ​ಗಳಿಸಿ ಗೆಲುವಿನ ದಡ ಸೇರಿಸಿ ಸಂಭ್ರಮಿಸಿದ್ರು.

RELATED ARTICLES

Related Articles

TRENDING ARTICLES