Saturday, June 22, 2024

ಗ್ರೌಂಡ್​ ರಿಪೋರ್ಟ್ : ದೊಡ್ಡಗೌಡರ ‘ಸಂಸತ್​’ ಕನಸಿಗೆ ಅಡ್ಡಿಯಾಗ್ತಾರಾ ಬಸವರಾಜು?

ಗ್ರೌಂಡ್​ ರಿಪೋರ್ಟ್ 8 : ತುಮಕೂರು ಲೋಕಸಭಾ ಕ್ಷೇತ್ರ

ತುಮಕೂರು : ಮಾಜಿ ಪ್ರಧಾನಿ ಹೆಚ್​.ಡಿ ದೇವೇಗೌಡರ ಸ್ಪರ್ಧೆಯಿಂದ ರಂಗೇರಿರುವ ಕ್ಷೇತ್ರ ಕಲ್ಪತರು ನಾಡು ತುಮಕೂರು ಲೋಕಸಭಾ ಕ್ಷೇತ್ರ. ಕಾಂಗ್ರೆಸ್​ ತನ್ನ ಹಾಲಿ ಸಂಸದರಿದ್ದರೂ (ಎಸ್​.ಪಿ ಮುದ್ದಹನುಮೇಗೌಡ) ದೋಸ್ತಿ ಜೆಡಿಎಸ್​ಗೆ ಕ್ಷೇತ್ರವನ್ನು ಬಿಟ್ಟುಕೊಟ್ಟಿದೆ. ಇದರಿಂದ ಮನನೊಂದ ಸಂಸದ ಮುದ್ದಹನುಮೇಗೌಡ್ರು ಮೈತ್ರಿ ಅಭ್ಯರ್ಥಿ ದೇವೇಗೌಡರ ವಿರುದ್ಧವೇ ಅಖಾಡಕ್ಕೆ ಇಳಿಯಲು ಸಂಸದ ಎಸ್​.ಪಿ ಮುದ್ದಹನುಮೇಗೌಡ್ರು ಡಿಸೈಡ್​ ಮಾಡಿ, ನಾಮಪತ್ರವನ್ನೂ ಸಲ್ಲಿಸಿದ್ರು. ಆದ್ರೆ, ಡಿಸಿಎಂ ಡಾ.ಜಿ ಪರಮೇಶ್ವರ್ ಸೇರಿದಂತೆ ಕಾಂಗ್ರೆಸ್​ ಮುಖಂಡರು ಮುದ್ದಹನುಮೇಗೌಡರಿಂದ ನಾಮಪತ್ರ ವಾಪಸ್ಸು ಪಡೆಸುವಲ್ಲಿ ಯಶಸ್ವಿಯಾಗಿದ್ದಾರೆ.
ಸದ್ಯ ಮೈತ್ರಿ ಅಭ್ಯರ್ಥಿಯಾಗಿ ಹೆಚ್​.ಡಿ ದೇವೇಗೌಡರು ಕಣದಲ್ಲಿದ್ದಾರೆ. ಅವರಿಗೆ ಪ್ರತಿಸ್ಪರ್ಧಿಯಾಗಿ ಮಾಜಿ ಸಂಸದ ಜಿ.ಎಸ್​ ಬಸವರಾಜ್ ಅಖಾಡದಲ್ಲಿದ್ದಾರೆ.

ತುಮಕೂರು ಲೋಕಸಭಾ ಕ್ಷೇತ್ರದ 8 ವಿಧಾನಸಭಾ ಕ್ಷೇತ್ರಗಳಲ್ಲಿ 4 ಕ್ಷೇತ್ರಗಳಲ್ಲಿ ಬಿಜೆಪಿ, 3ರಲ್ಲಿ ಜೆಡಿಎಸ್​ ಮತ್ತು 1 ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ.

ಅಸೆಂಬ್ಲಿ ಕ್ಷೇತ್ರಗಳು ಮತ್ತು ಶಾಸಕರು

ಚಿಕ್ಕನಾಯಕನಹಳ್ಳಿ – ಬಿಜೆಪಿ – ಮಾಧುಸ್ವಾಮಿ

ತಿಪಟೂರು – ಬಿಜೆಪಿ – ಬಿ.ಸಿ ನಾಗೇಶ್

ತುರುವೆಕೆರೆ – ಬಿಜೆಪಿ – ಮಸಾಲೆ ಜಯರಾಮ್

ತುಮಕೂರು ನಗರ – ಬಿಜೆಪಿ – ಜಿ.ಬಿ ಜ್ಯೋತಿ ಗಣೇಶ್

ತುಮಕೂರು ಗ್ರಾಮಾಂತರ – ಜೆಡಿಎಸ್ – ಡಿ.ಸಿ ಗೌರಿಶಂಕರ್

ಕೊರಟಗೆರೆ (ಎಸ್ಸಿ) – ಕಾಂಗ್ರೆಸ್ – ಜಿ.ಪರಮೇಶ್ವರ್

ಗುಬ್ಬಿ – ಜೆಡಿಎಸ್ – ಶ್ರೀನಿವಾಸ್ – ಸಚಿವ ಸಣ್ಣ ಕೈಗಾರಿಕೆ

ಮಧುಗಿರಿ – ಜೆಡಿಎಸ್ – ವೀರಭದ್ರಯ್ಯ

ಲೋಕಸಭಾ ಚುನಾವಣೆಯ ಇತಿಹಾಸವನ್ನು ನೋಡಿದ್ರೆ ಇದುವರೆಗೆ ಕಾಂಗ್ರೆಸ್​ 10, ಬಿಜೆಪಿ 4, ಇತರೆ ಪಕ್ಷಗಳ ಅಭ್ಯರ್ಥಿಗಳು 2 ಬಾರಿ ಯಶ ಕಂಡಿದ್ದಾರೆ.
ಮೈಸೂರು ರಾಜ್ಯ
1951 : ಸಿ.ಆರ್​ ಬಸಪ್ಪ, ಕಾಂಗ್ರೆಸ್​
1957, 1962 : ಎಂ.ವಿ ಕೃಷ್ಣಪ್ಪ, ಕಾಂಗ್ರೆಸ್​
1967 : ಕೆ. ಲಕ್ಕಪ್ಪ, ಪ್ರಜಾ ಸೋಶಿಯಲಿಸ್ಟ್ ಪಾರ್ಟಿ
1971 : ಕೆ. ಲಕ್ಕಪ್ಪ, ಕಾಂಗ್ರೆಸ್​
ಕರ್ನಾಟಕ ರಾಜ್ಯ
1977, 1988 : ಕೆ. ಲಕ್ಕಪ್ಪ, ಕಾಂಗ್ರೆಸ್​
1984, 1989 : ಜಿ.ಎಸ್​ ಬಸವರಾಜ್​, ಕಾಂಗ್ರೆಸ್​
1991 : ಎಸ್​. ಮಲ್ಲಿಕಾರ್ಜುನಯ್ಯ, ಬಿಜೆಪಿ
1996 : ಸಿ.ಎನ್​ ಭಾಸ್ಕರಪ್ಪ, ಜನತಾದಳ
1998 : ಎಸ್​.ಮಲ್ಲಿಕಾರ್ಜುನಯ್ಯ, ಬಿಜೆಪಿ
1999 : ಜಿ.ಎಸ್​ ಬಸವರಾಜ್​, ಕಾಂಗ್ರೆಸ್​
2004 : ಎಸ್​. ಮಲ್ಲಿಕಾರ್ಜುನಯ್ಯ, ಬಿಜೆಪಿ
2009 : ಜಿ.ಎಸ್​ ಬಸವರಾಜ್​, ಬಿಜೆಪಿ
2014 : ಎಸ್​.ಪಿ ಮುದ್ದಹನುಮೇಗೌಡ, ಕಾಂಗ್ರೆಸ್​

2014ರ ಎಲೆಕ್ಷನ್ : ಕಾಂಗ್ರೆಸ್​ ಅಭ್ಯರ್ಥಿ ಎಸ್​.ಪಿ ಮುದ್ದಹನುಮೇಗೌಡರು ಬಿಜೆಪಿಯ ಜಿ.ಎಸ್​ ಬಸವರಾಜ್ ಅವರ ವಿರುದ್ಧ 74,041 ಮತಗಳ ಅಂತರದಿಂದ ಗೆಲುವು ಸಾಧಿಸಿ, ಮೊದಲ ಬಾರಿಗೆ ಸಂಸತ್ ಪ್ರವೇಶಿಸಿದ್ದರು. ಮುದ್ದಹನುಮೇಗೌಡರು 4,29,868 ಮತಗಳನ್ನು, ಬಸವರಾಜ್ 3,55,827 ಮತಗಳನ್ನು ಪಡೆದಿದ್ದರು.

ತುಮಕೂರು ‘ಮತ’ಗಣಿತ
——————
ಪುರುಷರು 7,97,512

ಮಹಿಳೆಯರು 7,97,191

ಯುವ ಮತದಾರರು 38,403

ಒಟ್ಟು 15,94,703

‘ಜಾತಿ’ಗಣಿತ

ಒಕ್ಕಲಿಗ 3,28,762

ಎಸ್​ಸಿ 2,89,889

ಲಿಂಗಾಯತ 2,74,840

ಮುಸ್ಲಿಂ 1,90,700

ಕುರುಬ 1,68,300

ಎಸ್​​​ಟಿ 1,07,000

ಯಾದವ 79,100

ಇತರೆ 2,09,693

ಅಭ್ಯರ್ಥಿಗಳ ಬಲಾಬಲ

ಹೆಚ್​​.ಡಿ. ದೇವೇಗೌಡರಿಗೆ ಪೂರಕ ಅಂಶಗಳೇನು?

ಹಿರಿಯ ರಾಜಕೀಯ ಮುತ್ಸದ್ದಿ, ಅನುಭವಿ ರಾಜಕಾರಣಿ, ಮಾಜಿ ಪ್ರಧಾನಿಗಳು
ಇದು ತಮ್ಮ ಕೊನೆಯ ಚುನಾವಣೆ ಎಂದು ದೇವೇಗೌಡರು ಹೇಳಿರುವುದು
ಕ್ಷೇತ್ರದಲ್ಲಿ ಒಕ್ಕಲಿಗರ ಪ್ರಾಬಲ್ಯವೇ ಅತಿ ಹೆಚ್ಚು ಇರುವುದು
ಮುಸ್ಲಿಂ ಸಮುದಾಯದವರು ಕಾಂಗ್ರೆಸ್​ ಬಿಟ್ರೆ ಜೆಡಿಎಸ್​ಗೆ ಮತ ಹಾಕಬಹುದು
ಕ್ಷೇತ್ರದ ಹಾಲಿ ಸಂಸದ ಮುದ್ದಹನುಮೇಗೌಡರು ಕಣದಿಂದ ಹಿಂದೆ ಸರಿದಿರುವುದು

ಹೆಚ್​​.ಡಿ. ದೇವೇಗೌಡರಿಗೆ ಇರೋ ಆತಂಕಗಳು
ಹೇಮಾವತಿ ನೀರು ತುಮಕೂರಿಗೆ ಬಿಡುವ ವಿಚಾರದಲ್ಲಿ ತೊಂದರೆ ಮಾಡಿರೋದು ಜನರ ಆಕ್ರೋಶಕ್ಕೆ ಕಾರಣ
ಕಾಂಗ್ರೆಸ್​ನ ಹಾಲಿ ಸಂಸದರಿಗೆ ಟಿಕೆಟ್ ನೀಡದೆ ಜೆಡಿಎಸ್ ಪಕ್ಷಕ್ಕೆ ಕ್ಷೇತ್ರ ಬಿಟ್ಟುಕೊಟ್ಟಿರೋದು
ಮುದ್ದಹನುಮೇಗೌಡರು ಒಪ್ಪಿಗೆ ನೀಡಿದರೂ ಬೆಂಬಲಿಗರಲ್ಲಿ ಅಸಮಾಧಾನ ಹಾಗೇ ಇರುವುದು
ದೇವೇಗೌಡರು ಗೆದ್ದರೆ ಮತ್ತೆ ತನ್ನ ಅಸ್ತಿತ್ವ ಸ್ಥಾಪಿಸುವುದು ಕಷ್ಟ ಎಂಬ ಆತಂಕ ‘ಕೈ’ ಕಾರ್ಯಕರ್ತರಲ್ಲಿರುವುದು

ಜಿ.ಎಸ್​. ಬಸವರಾಜು ಅವರಿಗೆ ಪೂರಕ ಅಂಶಗಳು
ನಾಲ್ಕು ಬಾರಿ ಸಂಸದರಾಗಿ ಗೆದ್ದು ಬಂದಿರೋದು
ಕ್ಷೇತ್ರದಲ್ಲಿ 4 ಮಂದಿ ಬಿಜೆಪಿಯ ಪ್ರಭಾವಿ ಶಾಸಕರು ಇರುವುದು
ದೇವೇಗೌಡರಂತೆ ಜಿ.ಎಸ್.ಬಸವರಾಜು ಕೂಡ ಹಿರಿಯ ನಾಯಕರು
ಗೆಲುವಿಗೆ ಲಿಂಗಾಯತರ ಮತಗಳು ಕೂಡ ನಿರ್ಣಾಯಕ
2014ರ ಚುನಾವಣೆಯಲ್ಲಿ ಸೋತಿರುವುದರಿಂದ ಅನುಕಂಪದ ಅಲೆ
ಪ್ರಧಾನಿ ನರೇಂದ್ರ ಮೋದಿ ವರ್ಚಸ್ಸು ಕೆಲಸಮಾಡಬಹುದು

ಜಿ.ಎಸ್​. ಬಸವರಾಜು ಅವರಿಗಿರುವ ಆತಂಕಗಳು

ಪವರ್ ಗ್ರೀಡ್ ವಿಚಾರದಲ್ಲಿ ರೈತರಿಗೆ ತೀವ್ರ ಅಸಮಾಧಾನ
ಭೂಮಿ ಕಳೆದು ಕೊಂಡಿರುವ ರೈತರಿಂದ ವಿರೋಧ
ಮಧುಗಿರಿ, ಕೊರಟಗೆರೆ, ಗುಬ್ಬಿ, ತುಮಕೂರು ತಾಲೂಕಿನಲ್ಲಿ ರೈತರ ಆಕ್ಷೇಪ
ಹಲವು ಕಡೆ ಸ್ವಪಕ್ಷದ ಕಾರ್ಯಕರ್ತರಿಂದಲೇ ವಿರೋಧ
ಟಿಕೆಟ್ ಕೈ ತಪ್ಪಿರುವ ಸುರೇಶ್ ಗೌಡ, ಸೊಗಡು ಶಿವಣ್ಣ ಕೈಕೊಡುವ ಸಾಧ್ಯತೆ
ಬಸವರಾಜು ಮೂಲತಃ ಕಾಂಗ್ರೆಸಿಗರು
ಸ್ವಪಕ್ಷದ ಕಾರ್ಯಕರ್ತರನ್ನು ಕಡೆಗಣನೆ ಮಾಡಿದ್ದಾರೆ ಅನ್ನೋ ಮಾತು
4 ಸಲ ಸಂಸದರಾಗಿಯೂ ಅಭಿವೃದ್ಧಿ ಕಾರ್ಯಗಳು ತೀರಾ ಕಡಿಮೆ ಅನ್ನೋದು ಜನರ ಅಭಿಪ್ರಾಯ
ಬಿಜೆಪಿ ಸರ್ಕಾರ ನಡೆದಾಡುವ ದೇವರು ಶ್ರೀ ಶಿವಕುಮಾರ ಸ್ವಾಮೀಜಿಯವರಿಗೆ ‘ಭಾರತ ರತ್ನ’ ನೀಡಿಲ್ಲ ಎಂಬ ಕೋಪ

ಚುನಾವಣೆಯಲ್ಲಿ ಪ್ರಭಾವ ಬೀರುವ ಅಂಶಗಳು
ಎತ್ತಿನಹೊಳೆ ಯೋಜನೆ ಜಾರಿಯಲ್ಲಿ ಆಗುತ್ತಿರುವ ವಿಳಂಬ
ದಶಕಗಳೇ ಕಳೆದರೂ ಹೇಮಾವತಿ ನೀರು ಸರಿಯಾಗಿ ತಲುಪುತ್ತಿಲ್ಲ
ಹೇಮಾವತಿ ನೀರು ತಲುಪಿಸುವ ಬಗ್ಗೆ ದೋಸ್ತಿ ಸರ್ಕಾರವೂ ನಿರ್ಲಕ್ಷ್ಯ ಮಾಡುತ್ತಿದೆ ಎಂಬ ಆರೋಪ
ಬಗೆಹರಿಯದ ತೆಂಗು ಮತ್ತು ಅಡಿಕೆ ಬೆಳಗಾರರ ಸಮಸ್ಯೆಗಳು
ಗುಬ್ಬಿ ಬಳಿ ಶುರುವಾಗದ ಹೆಲಿಕಾಪ್ಟರ್​​ ಘಟಕ ನಿರ್ಮಾಣ ಕಾಮಗಾರಿ
ಘೋಷಣೆಗೆ ಮಾತ್ರ ಸೀಮಿತಗೊಂಡಿದೆ ತುಮಕೂರು ಕೈಗಾರಿಕಾ ಕಾರಿಡಾರ್
ಬೆಂಗಳೂರು, ತುಮಕೂರು ತ್ವರಿತ ಸಂಪರ್ಕಕಕ್ಕೆ ರೈಲು ಸೇವೆ ಆಗಿಲ್ಲ

ಸಂಸದರು ಮಾಡಿದ್ದೇನು? (ಅನುದಾನ ಬಳಕೆ) (ಮುದ್ದಹನುಮೇಗೌಡ)
ಕಳೆದ 5 ವರ್ಷ ಸಂಸತ್ ಅಧಿವೇಶನದಲ್ಲಿ ಸಕ್ರಿಯ ಆಗಿರುವುದು ಇವರ ಹೆಗ್ಗಳಿಕೆ
109 ದಿನ ಸದನ ಕಲಾದಲ್ಲಿ ಭಾಗಿಯಾಗಿರುವ ಹೆಗ್ಗಳಿಕೆ
ಒಟ್ಟು 595 ಪ್ರಶ್ನೆಗಳನ್ನು ಇವರು ಕೇಳಿದ್ದು 273 ರಾಷ್ಟ್ರೀಯ ವಿಚಾರದ ಪ್ರಶ್ನೆಗಳಾಗಿವೆ
ತೆಂಗು ಮತ್ತು ಅಡಿಕೆ ಬೆಳಗಾರರ ಸಮಸ್ಯೆಗಳ ಬಗ್ಗೆ ರಾಜ್ಯದ ಧ್ವನಿಯಾಗಿದ್ದಾರೆ
ಉತ್ತಮ ಸರಾಸರಿ ಹೊಂದಿರುವ ಸಂಸದರು

ಕ್ಷೇತ್ರದ ಪರಿಚಯ
ವಿಶ್ವಾದ್ಯಂತ ಪ್ರಸಿದ್ಧಿ ಪಡೆದಿರುವ ಶ್ರೀ ಸಿದ್ಧಗಂಗಾ ಮಠ
ಏಷ್ಯಾದಲ್ಲೇ 2ನೇ ಅತ್ಯಂತ ದೊಡ್ಡ ಏಕಾಶಿಲಾ ಬೆಟ್ಟ
ದಕ್ಷಿಣ ಏಷ್ಯಾದ 2ನೇ ಅತಿ ದೊಡ್ಡ ಬಣ್ಣದ ಕೊಕ್ಕರೆ ಪಕ್ಷಿಧಾಮ ಕಾಗಲಾಗುಡ್ ಪಕ್ಷಿ ಧಾಮ
ಪಾವಗಡದಲ್ಲಿ ಏಷ್ಯಾದ ಅತಿ ದೊಡ್ಡ ಸೋಲಾರ್​​ ಪಾರ್ಕ್​​
ದೇವರಾಯದುರ್ಗದ ಯೋಗ ನರಸಿಂಹಸ್ವಾಮಿ ಬೆಟ್ಟ
ಗೂಳೂರು ಗಣಪತಿ, ಕೈದಾಳ, ಶ್ರೀ ವೈದ್ಯನಾಥೇಶ್ವರ ಸ್ವಾಮಿಯ ಪುಣ್ಯಕ್ಷೇತ್ರ
ಧಾರ್ಮಿಕ ಶ್ರದ್ಧಾಕೇಂದ್ರ ಗೊರವನಳ್ಳಿ ಲಕ್ಷ್ಮಿ ದೇವಾಲಯ

RELATED ARTICLES

Related Articles

TRENDING ARTICLES