Wednesday, September 18, 2024

ಹಾಸನದಲ್ಲಿ ಬಿಜೆಪಿ ಪರ ‘ತಾರಾ’ ಪ್ರಚಾರ

ಹಾಸನ: ಲೋಕಸಭಾ ಚುನಾವಣೆ ದಿನ ಸಮೀಪಿಸುತ್ತಿದ್ದು, ಹಾಸನ ಲೋಕಸಭಾ ಕ್ಷೇತ್ರದಲ್ಲಿ ಪಕ್ಷಗಳ ಪ್ರಚಾರ ಕಾರ್ಯ ಭರದಿಂದ ಸಾಗಿದೆ. ಇದೀಗ ಬಿಜೆಪಿ ಅಭ್ಯರ್ಥಿ ಎ. ಮಂಜು ಪರ ನಟಿ ತಾರಾ ಅವರು ಹಾಸನದಲ್ಲಿಂದು ಪ್ರಚಾರ ನಡೆಸಲಿದ್ದಾರೆ. ಅರಕಲಗೂಡು ಕ್ಷೇತ್ರ ವ್ಯಾಪ್ತಿಯಲ್ಲಿ ರೋಡ್ ಶೋ ನಡೆಸಲಿರುವ ನಟಿ ತಾರಾ ಅವರು ನಂತರ ಕಾರ್ಯಕರ್ತರ ಸಭೆ ನಡೆಸಲಿದ್ದಾರೆ. ಹಾಸನ ಲೋಕಸಭಾ ಕ್ಷೇತ್ರ ರಂಗೇರಿದ್ದು, ಮಾಜಿ ಪ್ರಧಾನಿ ಹೆಚ್​. ಡಿ ದೇವೇಗೌಡ ಅವರ ಮೊಮ್ಮಗ, ಪ್ರಜ್ವಲ್​ ರೇವಣ್ಣ ಅವರು ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಅವರಿಗೆದುರಾಗಿ ಬಿಜೆಪಿಯಿಂದ ಎ. ಮಂಜು ಅವರು ಸ್ಪರ್ಧಿಸುತ್ತಿದ್ದಾರೆ.

RELATED ARTICLES

Related Articles

TRENDING ARTICLES