Friday, September 20, 2024

ಸೂಪರ್ ಓವರ್ ನಲ್ಲಿ ಡೆಲ್ಲಿಗೆ ರೋಚಕ ಗೆಲುವು..!

ನವದೆಹಲಿ : ಕೋಲ್ಕತ್ತಾ ನೈಟ್ ರೈಡರ್ಸ್ ಎದುರು ಡೆಲ್ಲಿ ಕ್ಯಾಪಿಟಲ್ಸ್ ಸೂಪರ್ ಓವರ್ ನಲ್ಲಿ ರೋಚಕ ಗೆಲುವು ಪಡೆದಿದೆ. 

ಮೊದಲು ಬ್ಯಾಟಿಂಗ್ ಮಾಡಿದ ಕೋಲ್ಕತ್ತಾ ಆ್ಯಂಡ್ರೆ ರಸೆಲ್ (62) ಮತ್ತು ಕ್ಯಾಪ್ಟನ್ ದಿನೇಶ್ ಕಾರ್ತಿಕ್ (50) ಅವರ ಅರ್ಧಶತಕದ ನೆರವಿನಿಂದ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ಗೆ 185 ರನ್ ಗಳಿಸಿತು.
ಗುರಿ ಬೆನ್ನತ್ತಿದ ಡೆಲ್ಲಿ ಪೃಥ್ವಿ ಶಾ 99 , ನಾಯಕ ಶ್ರೇಯಸ್ ಅಯ್ಯರ್ ಅವರ 43 ರನ್ ಗಳ ಆಟದ ನೆರವಿನಿಂದ ಸುಲಭ ಗೆಲುವಿನ ಸನಿಹ ಹೋಗಿತ್ತು. ಆದರೆ, ವಿಜಯಲಕ್ಷ್ಮೀ ಎರಡೂ ತಂಡಕ್ಕೆ ಒಲಿಯದೆ ಪಂದ್ಯ ಟೈ ಆಯಿತು. ನಂತರ ಸೂಪರ್ ಓವರ್ ನಲ್ಲಿ ಮೊದಲು ಬ್ಯಾಟ್ ಮಾಡಿದ ಡೆಲ್ಲಿ 1ವಿಕೆಟ್ ಕಳೆದುಕೊಂಡು 11ರನ್ ಗಳಿಸಿತು. ನಂತರ ಕೋಲ್ಕತ್ತಾ ತನ್ನ ಪಾಲಿನ 1ಓವರ್ ಗಳಲ್ಲಿ 7 ರನ್ ಗಳಿಸಲಷ್ಟೇ ಶಕ್ತವಾಯಿತು. ಇದರೊಂದಿಗೆ ಡೆಲ್ಲಿ ಗೆದ್ದು ಬೀಗಿತು.

RELATED ARTICLES

Related Articles

TRENDING ARTICLES