Sunday, December 22, 2024

ಬಿಎಸ್​ವೈಗೆ ಟ್ರಯಲ್, ಟೆಸ್ಟ್ ಎಲ್ಲಾ ಆಗಿದೆ, ಈಗ ರೆಸ್ಟ್ ಅಗತ್ಯವಿದೆ: ಡಿಕೆಶಿ

ಶಿವಮೊಗ್ಗ: ಬಿ. ಎಸ್​ ಯಡಿಯೂರಪ್ಪ ಅವರಿಗೆ ರೆಸ್ಟ್ ಅಗತ್ಯವಿದೆ. ಅವರ ಪಾರ್ಟಿಯವರೇ ರೆಸ್ಟ್ ಮಾತನ್ನು ಹೇಳಲಿದ್ದಾರೆ ಅಂತ ಸಚಿವ ಡಿ. ಕೆ. ಶಿವಕುಮಾರ್​ ಹೇಳಿದ್ದಾರೆ. ಶಿವಮೊಗ್ಗದಲ್ಲಿ ಮಧು ಬಂಗಾರಪ್ಪ ಪರ ಪ್ರಚಾರ ನಡೆಸುತ್ತಿರುವ ಸಚಿವ ಡಿ. ಕೆ. ಶಿವಕುಮಾರ್ ಅವರು ಮಾತನಾಡಿ, “ಯಡಿಯೂರಪ್ಪ ಅವರಿಗೆ ಟ್ರಯಲ್, ಟೆಸ್ಟ್ ಎಲ್ಲಾ ಅವಕಾಶ ನೀಡಿಯಾಗಿದೆ. ಈಗ ಅವರಿಗೆ ರೆಸ್ಟ್​ ಅಗತ್ಯವಿದೆ. ಕೇಂದ್ರ ನಾಯಕರೇ ಅವರಿಗೆ ರೆಸ್ಟ್​ ನೀಡಲಿದ್ದಾರೆ. ಬದಲಾವಣೆಗಾಗಿ ನಿಮ್ಮ ಸೇವೆಗೆ ಮಧು ಬಂಗಾರಪ್ಪ ಅವರನ್ನು ಆಯ್ಕೆ ಮಾಡಿ” ಎಂದಿದ್ದಾರೆ.

100 ಜನ ಡಿಕೆಶಿ ಬಂದ್ರೂ ಏನೂ ಮಾಡಕ್ಕಾಗಲ್ಲ ಎಂಬ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಈ ಮಾತನ್ನು ಯಡಿಯೂರಪ್ಪ, ಈಶ್ವರಪ್ಪ, ರಾಘವೇಂದ್ರ ಹೇಳಲಿ ನೋಡೋಣ. ಏ. 3ರವರೆಗೆ ಸಮಯ ನೀಡುತ್ತೇನೆ. ಹೇಳಲಿ” ಎಂದು ಸವಾಲೆಸೆದಿದ್ದಾರೆ.

RELATED ARTICLES

Related Articles

TRENDING ARTICLES