Saturday, June 22, 2024

ಕನ್ನಡಿಗ ರಾಹುಲ್ ಕಮಾಲ್, ಪಂಜಾಬ್ ಗೆ ಗೆಲುವು

ಮೊಹಾಲಿ : ಕನ್ನಡಿಗ ಕೆ.ಎಲ್ ರಾಹುಲ್ ಅವರ ಅಜೇಯ 71 ರನ್ ಗಳ ನೆರವಿನಿಂದ ಕಿಂಗ್ಸ್ ಇಲೆವೆನ್ ಪಂಜಾಬ್ ಮುಂಬೈ ಇಂಡಿಯನ್ಸ್ ವಿರುದ್ಧ 8 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ.

ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್
ಡಿ.ಕಾಕ್ (60) , ಕ್ಯಾಪ್ಟನ್ ರೋಹಿತ್ ಶರ್ಮಾ (32) , ಹಾರ್ದಿಕ್ ಪಾಂಡ್ಯ (31)ಅವರ ಉತ್ತಮ ಆಟದ ನೆರವಿನಿಂದ‌ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 176 ರನ್ ಗಳಿಸಿತು.
ಗುರಿ ಬೆನ್ನತ್ತಿದ ಪಂಜಾಬ್ ಕ್ರಿಸ್ ಗೇಲ್ (40), ಅಗರ್ ವಾಲ್ (43) ವಿಕೆಟ್ ಅನ್ನು ಮಾತ್ರ ಕಳೆದುಕೊಂಡು‌ ಇನ್ನೂ 8 ಬಾಲ್ ಗಳು ಬಾಕಿ ಇರುವಾಗಲೇ ಗುರಿ ತಲುಪಿತು. ರಾಹುಲ್ 71 ಮತ್ತು ಮಿಲ್ಲರ್ 15 ರನ್ ಗಳಿಸಿ ಅಜೇಯರಾಗಿ ಉಳಿದರು.

RELATED ARTICLES

Related Articles

TRENDING ARTICLES