ಮಂಡ್ಯ: ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಮಂಡ್ಯ ರಣಕಣ ರಂಗೇರಿದೆ. ಈಗಾಗಲೇ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಮತ್ತು ಪಕ್ಷೇತರ ಅಭ್ಯರ್ಥಿ ಸುಮಲತಾ ಭರ್ಜರಿ ಪ್ರಚಾರದಲ್ಲಿ ತೊಡಗಿದ್ದಾರೆ. ಸುಮಲತಾ ಅಂಬರೀಶ್ ಅವರು ರೋಡ್ ಶೋ ನಡೆಸಿದ್ದು, ಸುಮಲತಾ ಪ್ರಚಾರದಲ್ಲಿ ರಾಷ್ಟ್ರೀಯ ಪಕ್ಷಗಳ ಬಾವುಟ ಹಾರಾಟವೂ ನಡೆದಿದೆ. ಹಾಗೆಯೇ ರೋಡ್ ಶೋನಲ್ಲಿ ರೈತ ಸಂಘದ ಬಾವುಟ ಕೂಡ ರಾರಾಜಿಸಿದೆ. ಸುಮಲತಾ ಅಂಬರೀಶ್ ಚುನಾವಣಾ ಪ್ರಚಾರದಲ್ಲಿ ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರು ಒಂದಾಗಿದ್ದಾರೆ. ಪಕ್ಷೇತರ ಅಭ್ಯರ್ಥಿ ಸುಮಲತಾ ಪರ ಬಿಜೆಪಿ, ಕಾಂಗ್ರೆಸ್ ಕಾರ್ಯಕರ್ತರು ಒಗ್ಗಟ್ಟಾಗಿದ್ದಾರೆ. ಪ್ರಚಾರದ ವೇಳೆ ಕಹಳೆ ಹಿಡಿದು ಕಾರ್ಯಕರ್ತರು ಹರ್ಷೋದ್ಘಾರ ಮಾಡಿದ್ದಾರೆ. ಹಾಗೆಯೇ ಕಹಳೆ ಊದಿ ಸುಮಲತಾ ಪರ ಮತಯಾಚಿಸಿದ್ದಾರೆ.