Friday, July 19, 2024

ಕಾಂಗ್ರೆಸ್​ನಲ್ಲಿ 2 ಬಣವಿದೆ, ನಮ್ದು ಸಿದ್ದರಾಮಯ್ಯ ಬಣ : ಕೆ.ಎನ್ ರಾಜಣ್ಣ

ತುಮಕೂರು : ಕಾಂಗ್ರೆಸ್​ನಲ್ಲಿ 2 ಬಣವಿದೆ ಅಂತ ಕಾಂಗ್ರೆಸ್​ನ ಮಾಜಿ ಶಾಸಕರೇ ಒಪ್ಪಿಕೊಂಡಿದ್ದಾರೆ. ನಮ್ಮಲ್ಲಿ ಎರಡು ಬಣವಿದೆ. ಡಿಸಿಎಂ ಡಾ.ಜಿ ಪರಮೇಶ್ವರ್ ಸಿಎಂ ಆಗಬೇಕು ಅಂತ ಒಂದು ಬಣ, ಸಿದ್ದರಾಮಯ್ಯ ಸಿಎಂ ಆಗಬೇಕು ಅಂತ ಮತ್ತೊಂದು ಬಣವಿದೆ. ಅದ್ರಲ್ಲಿ ನಮ್ಮದು ಸಿದ್ದರಾಮಯ್ಯ ಬಣ ಎಂದು ಮಾಜಿ ಶಾಸಕ ಕೆ.ಎನ್ ರಾಜಣ್ಣ ಹೇಳಿದ್ದಾರೆ.
ತುಮಕೂರಲ್ಲಿ ಹಾಲಿ ಸಂಸದ ಎಸ್​.ಪಿ ಮುದ್ದಹನುಮೇಗೌಡರಿಗೆ ಟಿಕೆಟ್ ನಿರಾಕರಿಸಿ, ಕ್ಷೇತ್ರವನ್ನು ಜೆಡಿಎಸ್​ಗೆ ಬಿಟ್ಟುಕೊಟ್ಟು, ಮಾಜಿ ಪ್ರಧಾನಿ ಹೆಚ್​.ಡಿ ದೇವೇಗೌಡ್ರ ಸ್ಪರ್ಧೆಗೆ ಅವಕಾಶ ಮಾಡಿಕೊಟ್ಟಿದ್ದಕ್ಕೆ ಕೆಂಡಾಮಂಡಲರಾಗಿದ್ದ ರಾಜಣ್ಣ ಮುದ್ದಹನುಮೇಗೌಡರನ್ನು ಬೆಂಬಲಿಸಿದ್ದರು. ಅಷ್ಟೇ ಅಲ್ಲದೆ ಅವರ ಜೊತೆ ತಾವೂ ಕೂಡ ನಾಮಪತ್ರ ಸಲ್ಲಿಸಿದ್ದರು.
ಕಾಂಗ್ರೆಸ್ ನಾಯಕರ ಮನವೊಲಿಕೆಯಿಂದ ಮುದ್ದಹನುಮೇಗೌಡ್ರು ಮತ್ತು ರಾಜಣ್ಣ ಇಬ್ಬರೂ ನಾಮಪತ್ರ ಹಿಂಪಡೆದಿದ್ದಾರೆ. ಆದರೆ, ಇಬ್ಬರೂ ದೇವೇಗೌಡರ ಪರ ಪ್ರಚಾರಕ್ಕೆ ‘ಕೈ’ಗೆ ಬಲ ನೀಡ್ತಾರಾ ಅನ್ನೋದು ಕುತೂಹಲ.

RELATED ARTICLES

Related Articles

TRENDING ARTICLES