Monday, December 9, 2024

ಕಿಂಗ್ಸ್ ಎದುರು ನೈಟ್ ರೈಡರ್ಸ್​ಗೆ ಗೆಲುವು

ಕೋಲ್ಕತ್ತಾ : ಕನ್ನಡಿಗ ರಾಬಿನ್ ಉತ್ತಪ್ಪ ಅವರ ಅಜೇಯ 67, ನಿತೀಶ್ ರಾಣಾ ಅವರ 63 ಹಾಗೂ ಆ್ಯಂಡ್ರೆ ರಸೆಲ್ ಅವರ 48 ರನ್​ಗಳ ಬ್ಯಾಟಿಂಗ್ ವೈಭವದ ಬಲದಿಂದ ಕೋಲ್ಕತ್ತಾ ನೈಟ್ ರೈಡರ್ಸ್ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ 28ರನ್ ಗಳ ಜಯ ದಾಖಲಿಸಿತು.

ಈಡನ್ ಗಾರ್ಡನ್​​ನಲ್ಲಿ ನಡೆದ ಮ್ಯಾಚ್​ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕೋಲ್ಕತ್ತಾ ನಿಗದಿತ 20 ಓವರ್​​ಗಳಲ್ಲಿ ಕೇವಲ 4 ವಿಕೆಟ್ ಕಳೆದುಕೊಂಡು 218 ರನ್ ಗಳಿಸಿತು. ಸವಾಲಿನ ಗುರಿ ಬೆನ್ನತ್ತಿದ ಪಂಜಾಬ್ ಮಯಾಂಕ್ (58) ಮತ್ತು ಮಿಲ್ಲರ್ (ಅಜೇಯ 57) ಉತ್ತಮ ಆಟದ ನೆರವಿನಿಂದ ಸವಾಲಿನ ಗುರಿಯ ಸಮೀಪ ತಲುಪಿತಾದರೂ ಗೆಲುವು ಸಾಧ್ಯವಾಗಲಿಲ್ಲ. 20 ಓವರ್ ಗಳಲ್ಲಿ 4ವಿಕೆಟ್ ಗೆ 190 ರನ್ ಗಳಿಸಲಷ್ಟೇ ಶಕ್ತವಾಯಿತು.

RELATED ARTICLES

Related Articles

TRENDING ARTICLES