Wednesday, January 22, 2025

ಸೋಲಿನ ಭೀತಿಯಿಂದ ರಾಹುಲ್​ ಪಲಾಯನ : ನಿರ್ಮಲಾ ಸೀತಾರಾಮನ್

ಉಡುಪಿ : ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಸೋಲುವ ಭಯವಿದೆ. ಆದ್ದರಿಂದ ಅವರು ತಮ್ಮ ಕ್ಷೇತ್ರದಿಂದ ಪಲಾಯನ ಮಾಡುತ್ತಿದ್ದಾರೆ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.
ಉಡುಪಿಯಲ್ಲಿ ಮಾತನಾಡಿದ ಅವರು, ‘ಸ್ಮೃತಿ ಇರಾನಿ ಸೋತರೂ ಅಮೇಥಿ ಜನರ ನಿರಂತರ ಸಂಪರ್ಕದಲ್ಲಿದ್ದಾರೆ. ಕೇಂದ್ರದಿಂದ ಕ್ಷೇತ್ರವನ್ನು ಅಭಿವೃದ್ಧಿ ಪಡಿಸಿದ್ದಾರೆ. ಅಮೇಥಿ ಕ್ಷೇತ್ರ ಹಿಂದೆಂದೂ ಕಾಣದ ಅಭಿವೃದ್ಧಿಯನ್ನು ಕಂಡಿದೆ. ಅದಕ್ಕೆ ಕಾರಣ ಸ್ಮೃತಿ ಇರಾನಿಯವರು. ಹೀಗಾಗಿ ರಾಹುಲ್​ ಗಾಂಧಿ ಅವರಿಗೆ ಭಯ ಆವರಿಸಿದೆ. ಸೋಲಿನ ಭೀತಿಯಿಂದ ರಾಹುಲ್​ ಗಾಂಧಿ ಬೇರೆ ಕ್ಷೇತ್ರಕ್ಕೆ ಪಲಾಯನ ಮಾಡುತ್ತಿದ್ದಾರೆ’ ಎಂದರು.

RELATED ARTICLES

Related Articles

TRENDING ARTICLES