Thursday, May 30, 2024

ಗ್ರೌಂಡ್​ ರಿಪೋರ್ಟ್ : ನಾನ್​ಸ್ಟಾಪ್ ಮುನಿಯಪ್ಪ V/S ಕಾರ್ಪೋರೇಟರ್ ಮುನಿಸ್ವಾಮಿ

ಗ್ರೌಂಡ್​ ರಿಪೋರ್ಟ್ 4: ಕೋಲಾರ ಲೋಕಸಭಾ ಕ್ಷೇತ್ರ
ಕೋಲಾರ : ಸೋಲಿಲ್ಲದ ಸರದಾರ ಕೆ.ಹೆಚ್ ಮುನಿಯಪ್ಪ ಹಾಗೂ ಕಾಂಗ್ರೆಸ್​ನ ಭದ್ರಕೋಟೆಯಲ್ಲಿ ಮೊಟ್ಟ ಮೊದಲಬಾರಿಗೆ ಕಮಲ ಅರಳಿಸಲು ಉತ್ಸುಕರಾಗಿರುವ ಎಸ್​.ಮುನಿಸ್ವಾಮಿ ನಡುವಿನ ನೇರ ಹಣಾಹಣಿಗೆ ಸಜ್ಜಾಗಿದೆ ಕೋಲಾರ ಲೋಕಸಭಾ ಕ್ಷೇತ್ರ.
ನಾನ್​ ಸ್ಟಾಪ್​ ಮುನಿಯಪ್ಪ V/S ಕಾರ್ಪೋರೇಟರ್ ಮುನಿಸ್ವಾಮಿ ನಡುವಿನ ಈ ಸಮರದಲ್ಲಿ ‘ಕೇಸರಿ’ಗೂ ‘ಕೈ’ಗೂ ಕೂಡ ಬಂಡಾಯದ ಬಿಸಿ ತಟ್ಟಿದೆ. ಮತದಾರರ ‘ಮುನಿ’ಸು ಯಾರ ಬಲಿ ಪಡೆಯುತ್ತೆ ಅನ್ನೋದನ್ನು ಕಾದುನೋಡಬೇಕು.
ಇನ್ನು ಕೋಲಾರ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ 8 ವಿಧಾನಸಭಾ ಕ್ಷೇತ್ರಗಳು ಬರುತ್ತವೆ. ಸದ್ಯ 8ರಲ್ಲಿ 5 ಕ್ಷೇತ್ರಗಳಲ್ಲಿ ಕಾಂಗ್ರೆಸ್, 2ರಲ್ಲಿ ಜೆಡಿಎಸ್​ ಶಾಸಕರು ಹಾಗೂ ಒಂದು ಕ್ಷೇತ್ರದಲ್ಲಿ ಪಕ್ಷೇತರ ಶಾಸಕರಿದ್ದಾರೆ.

ಅಸೆಂಬ್ಲಿ ಕ್ಷೇತ್ರಗಳು ಮತ್ತು ಶಾಸಕರು

ಶಿಡ್ಲಘಟ್ಟ- ಕಾಂಗ್ರೆಸ್ (ಚಿಕ್ಕಬಳ್ಳಾಪುರ ಜಿಲ್ಲೆ)
ಚಿಂತಾಮಣಿ- ಜೆಡಿಎಸ್ (ಚಿಕ್ಕಬಳ್ಳಾಪುರ ಜಿಲ್ಲೆ)
ಶ್ರೀನಿವಾಸಪುರ-  ಕಾಂಗ್ರೆಸ್ (ಕೆ.ಆರ್.ರಮೇಶ್ ಕುಮಾರ್ ಸ್ಪೀಕರ್)
ಮುಳಬಾಗಿಲು – ಪಕ್ಷೇತರ (ಹೆಚ್.ನಾಗೇಶ್ ಕಾಂಗ್ರೆಸ್ ಸಹಸದಸ್ಯ)
ಕೋಲಾರ – ಜೆಡಿಎಸ್
ಮಾಲೂರು-ಕಾಂಗ್ರೆಸ್
ಬಂಗಾರಪೇಟೆ – ಕಾಂಗ್ರೆಸ್
ಕೆಜಿಎಫ್-  ಕಾಂಗ್ರೆಸ್ (ಎಂ.ರೂಪಕಲಾ, ಸಂಸದ ಕೆ.ಎಚ್.ಮುನಿಯಪ್ಪ ಪುತ್ರಿ)

ಇನ್ನೂ ಅರಳದ ಕಮಲ
1951ರಿಂದ ಇಲ್ಲಿಯವರೆಗೆ ಬಿಜೆಪಿ ಅಭ್ಯರ್ಥಿಗಳಾರು ಕೋಲಾರ ಲೋಕಸಭಾ ಚುನಾವಣೆಯಲ್ಲಿ ಗೆಲುವಿನ ನಗೆ ಬೀರಿಲ್ಲ. ಇದುವರೆಗೆ 15 ಬಾರಿ ಕಾಂಗ್ರೆಸ್​ ಮತ್ತು 1 ಬಾರಿ ಜನತಾ ಪಾರ್ಟಿಗೆ ಮತದಾರರು ಆಶೀರ್ವಾದ ಮಾಡಿದ್ದಾರೆ. ಮುಖ್ಯವಾಗಿ ಹಾಲಿ ಕಾಂಗ್ರೆಸ್ ಸಂಸದ ಕೆ.ಹೆಚ್ ಮುನಿಯಪ್ಪ ಅವರು 1991ರಿಂದ ನಿರಂತರವಾಗಿ ಗೆದ್ದಿದ್ದಾರೆ. 7 ಬಾರಿ ಗೆದ್ದಿರುವ ಮುನಿಯಪ್ಪ ಅವರು 8ನೇ ಬಾರಿ ಸಂಸತ್ ಪ್ರವೇಶಿಸುವ ನಿರೀಕ್ಷೆಯಲ್ಲಿದ್ದಾರೆ.
1951 : ಎಂ.ವಿ ಕೃಷ್ಣಪ್ಪ, ಕಾಂಗ್ರೆಸ್​
1957 : ಕೆ.ಸಿ ರೆಡ್ಡಿ, ಕಾಂಗ್ರೆಸ್
1962 : ದೊಡ್ಡ ಹನುಮಯ್ಯ, ಕಾಂಗ್ರೆಸ್
1967, 1971, 1977, 1980 : ಜಿ.ವೈ ಕೃಷ್ಣ, ಕಾಂಗ್ರೆಸ್
1984 : ವಿ. ವೆಂಕಟೇಶ್, ಜನತಾಪಾರ್ಟಿ
1989 : ವೈ. ರಾಮಕೃಷ್ಣ, ಕಾಂಗ್ರೆಸ್
1991, 1996, 1998, 1999, 2004, 2009, 2014 : ಕೆ.ಹೆಚ್​ ಮುನಿಯಪ್ಪ, ಕಾಂಗ್ರೆಸ್​

2014ರ ಚುನಾವಣೆ
2014ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ.ಹೆಚ್ ಮುನಿಯಪ್ಪ ಅವರು 47,850 ಮತಗಳ ಅಂತರದ ಗೆಲುವು ಪಡೆದ ಸತತ 7ನೇ ಬಾರಿಗೆ ಸಂಸತ್ ಪ್ರವೇಶಿಸಿದ್ದರು. ಮುನಿಯಪ್ಪ ಅವರು 4,18,926 ಮತಗಳನ್ನು ಪಡೆದಿದ್ದರು. ಅವರಿಗೆ ಪ್ರಬಲ ಪ್ರತಿಸ್ಪರ್ಧೆ ಒಡ್ಡಿದ ಜೆಡಿಎಸ್​ನ ಕೋಲಾರ ಕೇಶವ ಅವರು 3,71,076 ಮತಗಳನ್ನು ಪಡೆದಿದ್ದರು.

‘ಮತ’ ಗಣಿತ
ಪುರುಷರು 8,09,331
ಮಹಿಳೆಯರು 8,02,896
ಸೇವಾ ಮತದಾರರು 1,076
ಒಟ್ಟು 16,13,303

‘ಜಾತಿ’ ಗಣಿತ
ಒಕ್ಕಲಿಗ 3,80,000
ಕುರುಬ 2,10,000
ಭೋವಿ 2,00,000
ಮುಸ್ಲಿಂ 1,50,000
ಬಣಜಿಗ 70,000
ಎಸ್ಸಿ/ಎಸ್ಟಿ 2,50,000
ಇತರೆ 3,53,000

ಕೋಲಾರ ಲೋಕ ಚಿತ್ರಣ
ಕೆ.ಹೆಚ್ ಮುನಿಯಪ್ಪಗೆ ಪೂರಕ ಅಂಶಗಳೇನು?
ರಾಜ್ಯದಲ್ಲಿ ಕಾಂಗ್ರೆಸ್, ಜೆಡಿಎಸ್ ಮೈತ್ರಿ ಸರ್ಕಾರ ಅಧಿಕಾರದಲ್ಲಿರುವುದು
ಕೋಲಾರ, ಚಿಂತಾಮಣಿ ಬಿಟ್ಟು 6 ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್ ಶಾಸಕರು ಇರುವುದು
ಈ ಕ್ಷೇತ್ರದ ಬಹುತೇಕ ಸ್ಥಳೀಯ ಸಂಸ್ಥೆಗಳು ಸಹ ಕಾಂಗ್ರೆಸ್ ಹಿಡಿತದಲ್ಲಿರುವುದು
ಸತತವಾಗಿ 7 ಸಲ ಸಂಸದರಾಗಿ ಗೆದ್ದಿರುವುದೇ ಪ್ಲಸ್ ಪಾಯಿಂಟ್
ಜನರನ್ನು ತಮ್ಮತ್ತ ಸೆಳೆಯುವ ಚಾಣಾಕ್ಷತನ
ಸಮಯೋಚಿತ ರಾಜಕೀಯದಲ್ಲಿ ಮುನಿಯಪ್ಪ ಎತ್ತಿದ ಕೈ
ಮೀಸಲು ಕ್ಷೇತ್ರವಾಗಿದ್ದರಿಂದ ಜಾತಿ ಲೆಕ್ಕಾಚಾರದಿಂದಲೂ ಜಿಲ್ಲೆಯಲ್ಲಿ ಹಿಡಿತ
ಹೆಚ್.ಡಿ. ದೇವೇಗೌಡರು, ಬಿ.ಎಸ್. ಯಡಿಯೂರಪ್ಪ ಜೊತೆ ಆತ್ಮೀಯತೆ

ಕೆ.ಎಚ್ ಮುನಿಯಪ್ಪರಿಗಿರುವ ಆತಂಕಗಳೇನು?
ಕೋಲಾರ ಕಾಂಗ್ರೆಸ್​​ನಲ್ಲಿ ಮುನಿಯಪ್ಪ ವಿರುದ್ಧವೇ ಮುನಿಸು!
ಸ್ಪೀಕರ್ ರಮೇಶ್ ಕುಮಾರ್ ಸೇರಿ ಕೈ ಶಾಸಕರು, ಪ್ರಭಾವಿ ಮುಖಂಡರಿಂದ ವಿರೋಧ
8ನೇ ಗೆಲುವಿಗೆ ಸ್ವಪಕ್ಷೀಯರೇ ಅಡ್ಡಿಯಾಗುತ್ತಿರುವುದು
ಸೋಲಿನ ರುಚಿ ತೋರಿಸಲು ಟೊಂಕ ಕಟ್ಟಿನಿಂತ ಸ್ವಪಕ್ಷೀಯ ಶಾಸಕರು, ಮುಖಂಡರು
ಮುನಿಯಪ್ಪ ವಿರುದ್ಧ ಅಕ್ರಮ ಭೂಮಿ ಖರೀದಿ ಆರೋಪ‘

ಎಸ್. ಮುನಿಸ್ವಾಮಿಗೆ ಇರುವ ಪೂರಕ ಅಂಶಗಳೇನು?
ಪ್ರಧಾನಿ ನರೇಂದ್ರ ಮೋದಿ ನಾಮಬಲ
ಮಾಲೂರು, ಬಂಗಾರಪೇಟೆ ಮತ್ತು ಕೆಜಿಎಫ್​​ನಲ್ಲಿ ಬಿಜೆಪಿಯ ಮಾಜಿ MLAಗಳಿರುವುದು
ಕ್ಷೇತ್ರದ ವ್ಯಾಪ್ತಿಯಲ್ಲಿ ಬಿಜೆಪಿ ಮತದಾರರ ಸಂಖ್ಯೆ ಗಣನೀಯವಾಗಿರುವುದು
ಕೆ.ಹೆಚ್. ಮುನಿಯಪ್ಪ ವಿರುದ್ಧವೇ ಸ್ವಪಕ್ಷೀಯರು ಅಸಮಾಧಾನಗೊಂಡಿರುವುದು
ಮುನಿಯಪ್ಪ ವಿರೋಧಿ ಬಣದಿಂದಾಗಿ ಮುನಿಸ್ವಾಮಿಗೆ ಲಾಭ ಆಗುವ ಸಾಧ್ಯತೆ

ಎಸ್. ಮುನಿಸ್ವಾಮಿಗೆ ಇರುವ ಆತಂಕಗಳೇನು?
ಬಿಜೆಪಿಯ ಟಿಕೆಟ್ ಆಕಾಂಕ್ಷಿಗಳಲ್ಲಿ ಭುಗಿಲೆದ್ದ ಅಸಮಾಧಾನ
ಬಂಡಾಯದ ಬಾವುಟ ಹಾರಿಸುತ್ತಿರುವ ಡಿ.ಎಸ್ ವೀರಯ್ಯ
ಇಡೀ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ಪ್ರಾತಿನಿಧ್ಯವಿಲ್ಲದಿರುವುದು
ಸ್ಥಳೀಯ ಸಂಸ್ಥೆಗಳಲ್ಲಿ ಬಿಜೆಪಿ ಅಧಿಕಾರದಲ್ಲಿ ಇಲ್ಲ
ಸ್ಥಳೀಯ ಪ್ರಭಾವಿ ಮುಖಂಡರು ಕೂಡ ಲೋಕ ಸಮರದ ವೇಳೆ ತಟಸ್ಥವಾಗುವುದು
ಯುವ ಕಾರ್ಯಕರ್ತರು ಮತ್ತು ಮುಖಂಡರ ಉತ್ಸಾಹಕ್ಕೆ ಹಿರಿಯರು ಸ್ಪಂದಿಸದಿರುವುದು

ಪ್ರಭಾವ ಬೀರುವ ಅಂಶಗಳು
ಕೋಲಾರ ಜಿಲ್ಲೆಯಲ್ಲಿ ಶಾಶ್ವತ ನೀರಾವರಿಯಿಲ್ಲ, ನದಿ ನೆಲೆಯೂ ಇಲ್ಲ
5 ಸಾವಿರಕ್ಕೂ ಹೆಚ್ಚು ಕೆರೆಗಳು ಬತ್ತಿಹೋಗಿದ್ದರೂ ನಿರ್ಲಕ್ಷ್ಯ
ಎತ್ತಿನ ಹೊಳೆ ಯೋಜನೆ ಜಾರಿಯಾಗೋದು ಯಾವಾಗ?
ಕೆ.ಸಿ. ವ್ಯಾಲಿ ಯೋಜನೆ ಪೂರ್ಣಗೊಂಡರೂ ಆಗಾಗ ಅಡೆತಡೆ
ಬೆಮೆಲ್ ಮತ್ತು ಹಾಲು ಒಕ್ಕೂಟ ಹೊರತುಪಡಿಸಿ ಯಾವುದೇ ಸಾರ್ವಜನಿಕ ಉದ್ದಿಮೆಗಳಿಲ್ಲ
BGML ಮುಚ್ಚಿದ ಮೇಲೆ ಕೆಜಿಎಫ್​​ನಲ್ಲಿ ಪರ್ಯಾಯ ಕೈಗಾರಿಕೆ ಸ್ಥಾಪನೆಯಾಗಿಲ್ಲ
ಕೆಜಿಎಫ್​​ನಿಂದ ಬೆಂಗಳೂರಿಗೆ ಹೊಟ್ಟೆಪಾಡಿಗಾಗಿ ಪ್ರತಿ ದಿನ 10 ಸಾವಿರಕ್ಕೂ ಅಧಿಕ ಮಂದಿ ಬರುತ್ತಾರೆ

ಸಂಸದರು ಮಾಡಿದ್ದೇನು? (ಅನುದಾನ ಬಳಕೆ)
ಹೊಸಕೋಟೆಯಿಂದ ಕೋಲಾರ ಜಿಲ್ಲೆಯ ಗಡಿವರೆಗೆ (ಆಂಧ್ರಪ್ರದೇಶ ಸರಹದ್ದು) ಚತುಷ್ಪಥ ರಸ್ತೆ
ಕೋಲಾರ ಜಿಲ್ಲೆಯಲ್ಲಿ ಹಾದುಹೋಗುವ ರೈಲ್ವೆ ಮಾರ್ಗಗಳ ಉನ್ನತೀಕರಣ
ಕೋಲಾರ-ಚಿಕ್ಕಬಳ್ಳಾಪುರ ನಡುವೆ 440 ಕೋಟಿ ವೆಚ್ಚದಲ್ಲಿ ಗೇಜ್ ಪರಿವರ್ತನೆ
ಶ್ರೀನಿವಾಸಪುರದಲ್ಲಿ ರೈಲ್ವೆ ಕೋಚ್ ಫ್ಯಾಕ್ಟರಿ
ಶ್ರೀನಿವಾಸಪುರದಲ್ಲಿ ಏಕಲವ್ಯ ವಸತಿ ಶಾಲೆ ಸ್ಥಾಪನೆ
ಕೋಲಾರ ಜಿಲ್ಲೆಯಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಪೂರಕ ಸಹಕಾರ

========================================

ಕ್ಷೇತ್ರದ ವಿಶೇಷ

ಮುಳಬಾಗಿಲು ಕುರುಡುಮಲೆ ಗಣಪತಿ ದೇಗುಲ ಬಹಳ ಪ್ರಸಿದ್ಧ
ಆವಣಿ ರಾಮಲಿಂಗೇಶ್ವರ, ಗುಟ್ಟಹಳ್ಳಿಯ ಬಂಗಾರು ತಿರುಪತಿ ದೇವಾಲಯ
ಮಾಲೂರಿನ ಚಿಕ್ಕತಿರುಪತಿ ವೆಂಕಟರಮಣಸ್ವಾಮಿ ದೇವಾಲಯ
ಅಂತರಗಂಗೆಯ ಕಾಶಿ ವಿಶ್ವೇಶ್ವರ ದೇವಾಲಯ
ಅಂಜನಾದ್ರಿ ಬೆಟ್ಟ, ಗುಹಾಂತರ ದೇವಾಲಯ, ಮುರುಗಮಲ್ಲ ಮಸೀದಿ
ಕಮ್ಮಸಂದ್ರದ ಕೋಟಿಲಿಂಗೇಶ್ವರ, ಕೆಜಿಎಫ್ ಚಿನ್ನದ ಗಣಿ
ಬೂದಿಕೋಟೆಯಲ್ಲಿರುವ ಹೈದರಾಲಿ ಜನ್ಮಸ್ಥಳ

RELATED ARTICLES

Related Articles

TRENDING ARTICLES