Tuesday, October 15, 2024

ದೇವೇಗೌಡ್ರನ್ನು ಮಣಿಸಲು ಬಿಜೆಪಿ ಮಾಡಿರೋ ‘9’ರ ರಣತಂತ್ರವೇನು?

ತುಮಕೂರು : ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರನ್ನು ಸೋಲಿಸಲು ಬಿಜೆಪಿ ‘9’ ರ ರಣತಂತ್ರವನ್ನು ರೂಪಿಸಿದೆ. ಸಂಖ್ಯಾಶಾಸ್ತ್ರವನ್ನು ಆಧಾರವಾಗಿಟ್ಟುಕೊಂಡು ಬಿಜೆಪಿ ಮಾಸ್ಟರ್ ಪ್ಲಾನ್ ಮಾಡಿದೆ ಅಂತ ತಿಳಿದುಬಂದಿದೆ. ದೇವೇಗೌಡರಿಗೂ ಅಂಕಿ 9ಕ್ಕೂ ಆಗ್ಬರಲ್ಲ ಅನ್ನೋ ಶಾಸ್ತ್ರವನ್ನೇ ನಂಬಿಕೊಂಡು ಬಿಜೆಪಿ ‘ಒಂಬತ್ತರ ಲೆಕ್ಕದಲ್ಲೇ’ ತೀರ್ಮಾನ ತೆಗೆದುಕೊಳ್ಳಲು ಮುಂದಾಗಿದೆ..!
ತುಮಕೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಿ.ಎಸ್​ ಬಸವರಾಜ್​ ಅವರು ಇಂದು 9 ಕಾರುಗಳಲ್ಲಿ ಬಂದು ನಾಮಪತ್ರ ಸಲ್ಲಿಸಲು ನಿರ್ಧರಿಸಿದ್ದಾರೆ. 9 ಜನ ಪ್ರಮುಖ ಕಾರ್ಯಕರ್ತರು ಮುಂದಾಳತ್ವವಹಿಸಿಕೊಳ್ಳುತ್ತಿದ್ದಾರೆ. ಇಂದು ಏನೇ ಮಾಡಿದ್ರೂ 9ರ ಲೆಕ್ಕಾಚಾರದಲ್ಲೇ ಮಾಡಲು ಬಸವರಾಜ್ ಮತ್ತು ಜಿಲ್ಲಾ ಬಿಜೆಪಿ ಪ್ಲಾನ್ ಮಾಡಿದೆ ಎಂದು ಹೇಳಲಾಗುತ್ತಿದೆ.
ಹಾಸನವನ್ನು ಮೊಮ್ಮಗ ಪ್ರಜ್ವಲ್​ಗೆ ಬಿಟ್ಟುಕೊಟ್ಟಿರುವ ಮಾಜಿ ಪ್ರಧಾನಿ ದೇವೇಗೌಡರು ಕೊನೇ ಕ್ಷಣದಲ್ಲಿ ತುಮಕೂರಿಂದ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಕಾಂಗ್ರೆಸ್​ ಟಿಕೆಟ್ ಕೈ ತಪ್ಪಿರುವ ಹಾಲಿ ಸಂಸದ ಎಸ್​.ಪಿ ಮುದ್ದಹನುಮೇಗೌಡ ಅವರು ದೊಡ್ಡಗೌಡರ ವಿರುದ್ಧ ಕಣಕ್ಕಿಳಿಯಲು ನಿರ್ಧರಿಸಿ ನಾಮಪತ್ರ ಸಲ್ಲಿಸಿದ್ದಾರೆ. ಅಷ್ಟೇ ಅಲ್ಲದೆ ಮಾಜಿ ಶಾಸಕ ಕೆ.ಎನ್ ರಾಜಣ್ಣ ಕೂಡ ಕಣಕ್ಕಿಳಿಯಲು ಡಿಸೈಡ್ ಮಾಡಿದ್ದು, ಕಾಂಗ್ರೆಸ್​ನ ಈ ನಾಯಕರ ನಡೆ ದೇವೇಗೌಡ್ರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಮೈತ್ರಿಯಲ್ಲಿನ ಈ ಜಿದ್ದಾಜಿದ್ದಿ ಬಿಜೆಪಿ ಅಭ್ಯರ್ಥಿ ಬಸವರಾಜ್ ಅವರಿಗೆ ಪ್ಲಸ್ ಆಗುವ ಸಾಧ್ಯತೆ ಹೆಚ್ಚಿದೆ.

RELATED ARTICLES

Related Articles

TRENDING ARTICLES