Thursday, May 30, 2024

ಇಂದು ರಾಯಲ್ಸ್​ – ಕಿಂಗ್ಸ್ ಬಿಗ್ ಫೈಟ್​..!

ಜೈಪುರ : ಐಪಿಎಲ್​ ಚೊಚ್ಚಲ ಆವೃತ್ತಿಯ ಚಾಂಪಿಯನ್​ ರಾಜಸ್ಥಾನ್ ರಾಯಲ್ಸ್ ಪ್ರಸಕ್ತ ಸಾಲಿನ ಟೂರ್ನಿಯ ತನ್ನ ಫಸ್ಟ್ ಮ್ಯಾಚ್​ನಲ್ಲಿ ಕಿಂಗ್ಸ್​ ಇಲೆವೆನ್​ ಪಂಜಾಬ್​ ಅನ್ನು ಎದುರಿಸಲಿದೆ.
ಇಂದು ಜೈಪುರದಲ್ಲಿ ನಡೆಯಲಿರುವ ಟೂರ್ನಿಯ 4ನೇ ಪಂದ್ಯ ರಾಯಲ್ಸ್​ VS ಕಿಂಗ್ಸ್​ ನಡುವಿನ ಜಿದ್ದಾಜಿದ್ದಿನ ಹೋರಾಟಕ್ಕೆ ಸಾಕ್ಷಿಯಾಗಲಿದೆ.
ಅಜಿಂಕ್ಯ ರಹಾನೆ ನೇತೃತ್ವದ ಆರ್​ಆರ್​ ಹಾಗೂ ರವಿಚಂದ್ರನ್ ಅಶ್ವಿನ್ ನಾಯಕತ್ವದ ಪಂಜಾಬ್​ ಒಟ್ಟು ಇದುವರೆಗೆ 17 ಬಾರಿ ಮುಖಾಮುಖಿಯಾಗಿವೆ. ಅದರಲ್ಲಿ ಆರ್​ಆರ್​ 10ರಲ್ಲಿ ಹಾಗೂ ಪಂಜಾಬ್​ 7ರಲ್ಲಿ ಗೆಲುವು ಸಾಧಿಸಿವೆ. ನಾಯಕ ಅಜಿಂಕ್ಯ ರಹಾನೆ, ಸ್ಟೀವನ್ ಸ್ಮಿತ್​, ಸಂಜು ಸ್ಯಾಮ್ಸನ್​, ಬೆನ್​​ಸ್ಟ್ರೋಕ್ಸ್​​ ಆರ್​ಆರ್ ಪಡೆಯ ಪ್ರಮುಖ ಆಟಗಾರರು. ಪಂಜಾಬ್​ಗೆ ನಾಯಕ ಅಶ್ವಿನ್, ಹೊಡಿಬಡಿ ದಾಂಡಿಗ ಕ್ರಿಸ್​ಗೇಲ್​, ಕನ್ನಡಿಗ ಕೆ.ಎಲ್ ರಾಹುಲ್​, ಡೇವಿಡ್​ ಮಿಲ್ಲರ್​, ವೇಗಿ ಮೊಹಮ್ಮದ್​​ ಶಮಿ ಮತ್ತಿತರ ಸ್ಟಾರ್ ಆಟಗಾರರ ಬಲವನ್ನು ಹೊಂದಿದೆ. ಪಂದ್ಯ ರಾತ್ರಿ 8ಗಂಟೆಗೆ ಆರಂಭವಾಗಲಿದೆ.

RELATED ARTICLES

Related Articles

TRENDING ARTICLES