ಮುಂಬೈ : ಯುವ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ರಿಷಭ್ ಪಂತ್ ಅವರ ಪರಾಕ್ರಮದಿಂದ 12ನೇ ಆವೃತ್ತಿಯ ತನ್ನ ಚೊಚ್ಚಲ ಹಾಗೂ ಟೂರ್ನಿಯ 3ನೇ ಮ್ಯಾಚ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಶುಭಾರಂಭ ಮಾಡಿದೆ. ತವರು ನೆಲದಲ್ಲಿ ಮುಂಬೈ ಇಂಡಿಯನ್ಸ್ ಪರಾಭವಗೊಂಡಿದೆ.
ವಾಂಖೆಡೆಯಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಪಂತ್ ಅವರ ಅಜೇಯ 78ರನ್. ಓಪನರ್ ಶಿಖರ್ ಧವನ್ ಅವರ 43 ಹಾಗೂ ಕೊಲಿನ್ ಇನ್ಗ್ರಾಮ್ ಅವರ 47 ರನ್ಗಳ ಆಟದ ನೆರವಿನಿಂದ 6 ವಿಕೆಟ್ ನಷ್ಟಕ್ಕೆ 213ರನ್ ಗಳಿಸಿತು. ರಿಷಬ್ ಪಂತ್ ಕೇವಲ 27 ಎಸೆತಗಳಲ್ಲಿ 7 ಸಿಕ್ಸರ್, 7 ಬೌಂಡರಿ ಮೂಲಕ 78 ರನ್ ಕಲೆಹಾಕಿ ಔಟಾಗದೆ ಉಳಿದರು.
214ರನ್ಗಳ ಬೃಹತ್ ಸವಾಲನ್ನು ಬೆನ್ನತ್ತಿದ ಮುಂಬೈ ಇಂಡಿಯನ್ಸ್ 19.2 ಓವರ್ಗಳಲ್ಲಿ 176ರನ್ಗಳಿಗೆ ಆಲೌಟ್ ಆಗಿ ಸೋಲುಂಡಿತು. ಮುಂಬೈ ಪರ ಯುವರಾಜ್ ಸಿಂಗ್ (53) ಮತ್ತು ಕೃನಾಲ್ ಪಾಂಡ್ಯ (32) ಹೊರತುಪಡಿಸಿದರೆ ಯಾವೊಬ್ಬ ಬ್ಯಾಟ್ಸ್ಮನ್ ಕೂಡ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಲಿಲ್ಲ.