ತುಮಕೂರು : ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಹಾಗೂ ಹಾಲಿ ಸಂಸದ ಎಸ್.ಪಿ ಮುದ್ದಹನುಮೇಗೌಡ ಅವರು ನಾಮಪತ್ರ ಸಲ್ಲಿಸಿ ಅಧಿಕೃತವಾಗಿ ಚುನಾವಣಾ ಅಖಾಡಕ್ಕೆ ಧುಮುಕಿದ್ದಾರೆ.
ದೇವೇಗೌಡ್ರು ಬೃಹತ್ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮಧ್ಯಾಹ್ನ 2.11ಕ್ಕೆ ನಾಮಪತ್ರ ಸಲ್ಲಿಸಿದರು. ಸ್ವಕ್ಷೇತ್ರ ಹಾಸನವನ್ನು ಮೊಮ್ಮಗ ಪ್ರಜ್ವಲ್ ರೇವಣ್ಣ ಅವರಿಗೆ ಬಿಟ್ಟುಕೊಟ್ಟ ಗೌಡರು, ಬೆಂಗಳೂರು ಉತ್ತರದಲ್ಲಿ ಕಣಕ್ಕಿಳಿಯುತ್ತಾರಾ ಅಥವಾ ತುಮಕೂರಲ್ಲಿ ಕಣಕ್ಕಿಳಿಯುತ್ತಾರೋ ಅನ್ನೋ ಕುತೂಹಲವಿತ್ತು. ಕೊನೆಗೆ ಗೌಡರು ತುಮಕೂರನ್ನು ಆಯ್ಕೆ ಮಾಡಿಕೊಂಡು, ಇವತ್ತು ನಾಮಪತ್ರವನ್ನೂ ಸಲ್ಲಿಸಿದ್ದಾರೆ. ಆದರೆ, ತುಮಕೂರಲ್ಲಿ ಗೌಡರ ವಿರುದ್ಧ ಕಾಂಗ್ರೆಸ್ ಸಂಸದ ಎಸ್.ಪಿ ಮುದ್ದಹನುಮೇಗೌಡ ಕೂಡ ನಾಮಪತ್ರ ಸಲ್ಲಿಸಿದ್ದಾರೆ. ಹಾಲಿ ಸಂಸದ ಆಗಿದ್ದರೂ ಅವರನ್ನು ಕಡೆಗಾಣಿಸಿ ಜೆಡಿಎಎಸ್ಗೆ ಕ್ಷೇತ್ರ ಬಿಟ್ಟುಕೊಟ್ಟಿದ್ದಕ್ಕೆ ಮುದ್ದಹನುಮೇಗೌಡರ ಆಕ್ರೋಶಕ್ಕೆ ಕಾರಣವಾಗಿದೆ. ಅವರು ಹಠಕ್ಕೆ ಬಿದ್ದು ದೊಡ್ಡಗೌಡರ ವಿರುದ್ಧ ಸ್ವಕ್ಷೇತ್ರದಲ್ಲಿ ಅಖಾಡಕ್ಕೆ ಇಳಿದಿದ್ದಾರೆ.
ತುಮಕೂರಲ್ಲಿ ಗೌಡ್ರು VS ಗೌಡ್ರು : ನಾಮಪತ್ರ ಸಲ್ಲಿಸಿದ ದೇವೇಗೌಡ್ರು, ಮುದ್ದಹನುಮೇಗೌಡ್ರು..!
TRENDING ARTICLES