Sunday, September 24, 2023
Powertv Logo

Kannada Kannada English English Hindi Hindi Telugu Telugu Tamil Tamil Malayalam Malayalam

Homeರಾಜಕೀಯಗ್ರೌಂಡ್​ ರಿಪೋರ್ಟ್ : ಮೊಯ್ಲಿ ಕೋಟೆಯಲ್ಲಿ ಬಚ್ಚೇಗೌಡ ಅರಳಿಸ್ತಾರಾ ಕಮಲ?

ಗ್ರೌಂಡ್​ ರಿಪೋರ್ಟ್ : ಮೊಯ್ಲಿ ಕೋಟೆಯಲ್ಲಿ ಬಚ್ಚೇಗೌಡ ಅರಳಿಸ್ತಾರಾ ಕಮಲ?

ಗ್ರೌಂಡ್​ ರಿಪೋರ್ಟ್ – 2 : ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ

ಚಿಕ್ಕಬಳ್ಳಾಪುರ : ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಅವರ ಕೋಟೆ ಚಿಕ್ಕಬಳ್ಳಾಪುರ. ಕಳೆದ ಎರಡು ಅವಧಿಯಲ್ಲಿ ಗೆಲುವಿನ ನಗೆ ಬೀರಿ ಸಂಸತ್ ಪ್ರವೇಶಿಸಿದ್ದಾರೆ. ಮೂರನೇ ಗೆಲುವನ್ನು ಎದುರು ನೋಡುತ್ತಿರುವ ಮೊಯ್ಲಿಯವರಿಗೆ ಈ ಬಾರಿ ‘ಮೈತ್ರಿ’ ಬಲವಿದೆ. ದೋಸ್ತಿ ಕೋಟೆಯಲ್ಲಿ ಬಿಜೆಪಿ ರಣಕಲಿ ಬಿ.ಎನ್ ಬಚ್ಚೇಗೌಡರು ಕಮಲ ಅರಳಿಸೋಕೆ ರೆಡಿಯಾಗಿದ್ದಾರೆ. ಮೊಯ್ಲಿ – ಬಚ್ಚೇಗೌಡರ ನಡುವಿನ ಜಿದ್ದಾಜಿದ್ದಿನ ಸ್ಪರ್ಧೆಗೆ ವೇದಿಕೆ ಆಗಿರೋ ಚಿಕ್ಕಬಳ್ಳಾಪುರದ ಗ್ರೌಂಡ್ ರಿಪೋರ್ಟ್ ಇಲ್ಲಿದೆ.
8 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡ ಲೋಕಸಭಾ ಕ್ಷೇತ್ರ ಚಿಕ್ಕಬಳ್ಳಾಪುರ. 8 ಎಂಎಲ್​ಎಗಳಲ್ಲಿ 5 ಮಂದಿ ಕಾಂಗ್ರೆಸ್​ವರು, ಇಬ್ಬರು ಜೆಡಿಎಸ್​ನವರು ಒಬ್ಬರು ಮಾತ್ರ ಬಿಜೆಪಿ ಎಂಎಲ್​ಎ. ಅಂದರೆ ಸದ್ಯ ಒಟ್ಟು 7 ಕ್ಷೇತ್ರಗಳು ಮೈತ್ರಿ ಕೈಯಲ್ಲಿದೆ. ಹೀಗಾಗಿ ಮೊಯ್ಲಿ ಅವರಿಗೆ ಬಲ ಸಿಕ್ಕಂತಾಗಿದೆ.
ಅಸೆಂಬ್ಲಿ ಕ್ಷೇತ್ರಗಳು ಮತ್ತು ಶಾಸಕರು 
ಗೌರಿಬಿದನೂರು – ಕಾಂಗ್ರೆಸ್ (ಎನ್.ಎಚ್.ಶಿವಶಂಕರ ರೆಡ್ಡಿ, ಕೃಷಿ ಸಚಿವ)
ಬಾಗೇಪಲ್ಲಿ- ಕಾಂಗ್ರೆಸ್ (ಸುಬ್ಬಾರೆಡ್ಡಿ , ನಿಗಮ ಮಂಡಳಿ ಅಧ್ಯಕ್ಷ)
ಚಿಕ್ಕಬಳ್ಳಾಪುರ- ಕಾಂಗ್ರೆಸ್ (ಕೆ. ಸುಧಾಕರ್)
ಹೊಸಕೋಟೆ -ಕಾಂಗ್ರೆಸ್ (ಎಂಟಿಬಿ ನಾಗರಾಜ್ / ವಸತಿಸಚಿವ)
ದೊಡ್ಡಬಳ್ಳಾಪುರ – ಕಾಂಗ್ರೆಸ್ (ವೆಂಕಟರಾಮಯ್ಯ /ನಿಗಮ ಮಂಡಳಿ)
ದೇವನಹಳ್ಳಿ (ಎಸ್ಸಿ) – ಜೆಡಿಎಸ್ (ನಿಸರ್ಗ ನಾರಾಯಣಸ್ವಾಮಿ)
ನೆಲಮಂಗಲ (ಎಸ್ಸಿ) -ಜೆಡಿಎಸ್ (ಡಾ. ಶ್ರೀನಿವಾಸಮೂರ್ತಿ)
ಯಲಹಂಕ ಬಿಜೆಪಿ – (ಎಸ್.ಆರ್.ವಿಶ್ವನಾಥ್)

ಖಾತೆ ತೆರೆಯದ ಬಿಜೆಪಿ
ಇದುವರೆಗೆ ನಡೆದ ಚಿಕ್ಕಬಳ್ಳಾಪುರ ಕ್ಷೇತ್ರದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ 10 ಬಾರಿ, ಜನತಾದಳ 1 ಬಾರಿ ಜಯ ಸಾಧಿಸಿದ್ದು, ಬಿಜೆಪಿ ಖಾತೆ ತೆರೆದೇ ಇಲ್ಲ..!
1977 : ಎಂ.ವಿ ಕೃಷ್ಣಪ್ಪ, ಕಾಂಗ್ರೆಸ್
1980 : ಎಸ್​.ಎನ್​ ಪ್ರಸನ್ನಕುಮಾರ್, ಕಾಂಗ್ರೆಸ್​
1984, 1989, 1991 : ವಿ.ಕೃಷ್ಣ ರಾವ್​, ಕಾಂಗ್ರೆಸ್​
1996 : ಆರ್​.ಎಲ್ ಜಲಪ್ಪ, ಜನತಾ ದಳ
1998, 1999, 2004 : ಆರ್​.ಎಲ್ ಜಲಪ್ಪ, ಕಾಂಗ್ರೆಸ್​
2009, 2014 : ವೀರಪ್ಪ ಮೊಯ್ಲಿ, ಕಾಂಗ್ರೆಸ್​
ಇನ್ನು 1952-66ರಲ್ಲಿ ಕ್ಷೇತ್ರವಿರಲಿಲ್ಲ. 1977ರ ಮೊದಲು ಚಿಕ್ಕಬಳ್ಳಾಪುರ ಕ್ಷೇತ್ರದ ಬದಲು ಮಧುಗಿರಿ ಕ್ಷೇತ್ರವಿತ್ತು. 1967ರಿಂದ 77ರವರೆಗೆ ಮಧುಗಿರಿ ಕ್ಷೇತ್ರವಾಗಿತ್ತು. ಆ ವೇಳೆ 1967ರಲ್ಲಿ ಮಾಲಿ ಮರಿಯಪ್ಪ (ಕಾಂಗ್ರೆಸ್), 1967 ಸುಧಾ ವಿ. ರೆಡ್ಡಿ (ಕಾಂಗ್ರೆಸ್), 1971ರಲ್ಲಿ ಕೆ.ಮಲ್ಲಣ್ಣ (ಕಾಂಗ್ರೆಸ್​) ಮಧುಗಿರಿ ಕ್ಷೇತ್ರದಿಂದ ಸಂಸತ್ತಿಗೆ ಆಯ್ಕೆಯಾಗಿದ್ದರು.

2014 ರಲ್ಲಿ ಬಲಾಬಲ : ಕಳೆದ ಲೋಕಸಭಾ ಚುನಾವಣೆಯಲ್ಲಿ ವೀರಪ್ಪ ಮೊಯ್ಲಿಯವರು ಬಿಜೆಪಿಯ ಬಿ.ಎನ್ ಬಚ್ಚೇಗೌಡರ ವಿರುದ್ಧ 9,520 ಮತಗಳ ಅಂತರದ ಗೆಲುವು ದಾಖಲಿಸಿದ್ದರು. ಎಂ. ವೀರಪ್ಪ ಮೊಯ್ಲಿ (ಕಾಂಗ್ರೆಸ್) 4,24,800 ಮತಗಳನ್ನು, ಬಿ.ಎನ್.ಬಚ್ಚೇಗೌಡ (ಬಿಜೆಪಿ) 4,15,280 ಮತಗಳನ್ನು, ಹೆಚ್.ಡಿ.ಕುಮಾರಸ್ವಾಮಿ (ಜೆಡಿಎಸ್ 3,46,339) ಮತಗಳನ್ನು ಪಡೆದಿದ್ದರು.

‘ಮತ’ಗಣಿತ
ಪುರುಷರು 9,02,487
ಮಹಿಳೆಯರು 8,87,921
ಒಟ್ಟು 17,90,408

‘ಜಾತಿ’ಗಣಿತ
ಎಸ್ಸಿ/ಎಸ್ಟಿ 3,30,000
ಒಕ್ಕಲಿಗರು 3,00,000
ಕುರುಬರು 2,30,000
ಬಲಜಿಗರು 1,65,000
ಮುಸ್ಲಿಂ 1,50,000
ಗೊಲ್ಲರು 90,000
ಇತರರು 5,26,000 ( ಗಾಣಿಗ, ದೇವಾಂಗ, ಲಿಂಗಾಯತ, ಈಡಿಗರು, ಸವಿತಾ ಸಮಾಜ, ರೆಡ್ಡಿ)

ಚಿಕ್ಕಬಳ್ಳಾಪುರ ಕದನ ಕಲಿಗಳ ಬಲಾಬಲ

ವೀರಪ್ಪ ಮೊಯ್ಲಿಗೆ ಪೂರಕ ಅಂಶಗಳು
ಮಾಜಿ ಸಿಎಂ, ಮಾಜಿ ಕೇಂದ್ರ ಸಚಿವರಾಗಿ ‘ಕೈ’ಕಮಾಂಡ್ ನಿಕಟ ಸಂಪರ್ಕ
ಕಳೆದ ಎರಡು ಲೋಕಸಭಾ ಚುನಾವಣೆಯಲ್ಲಿ ಗೆದ್ದಿರುವ ಆತ್ಮವಿಶ್ವಾಸ
ಸಂಸದರ ಅನುದಾನ ಬಳಕೆ ಮಾಡಿಕೊಂಡು ಹಲವು ಅಭಿವೃದ್ಧಿ ಕಾರ್ಯ
ದೋಸ್ತಿ ಪಕ್ಷಗಳ ಒಮ್ಮತದ ಅಭ್ಯರ್ಥಿ ಆಗಿರುವುದು ಅನುಕೂಲಕರ
ಲೋಕ ವ್ಯಾಪ್ತಿಯಲ್ಲಿ ಇಬ್ಬರು ಸಚಿವರು ಸೇರಿ 7 ಶಾಸಕರ ಬೆಂಬಲ (5 ಕಾಂಗ್ರೆಸ್ / 2 ಜೆಡಿಎಸ್ ಶಾಸಕ)

ವೀರಪ್ಪ ಮೊಯ್ಲಿಗೆ ಇರುವ ಆತಂಕಗಳು

ಕಳೆದೆರಡು ಅವಧಿಯಲ್ಲಿ ಗೆದ್ರೂ ರೈತರಿಗೆ ಸ್ಪಂದಿಸಿಲ್ಲ ಎನ್ನುವ ಆರೋಪ
ಎತ್ತಿನಹೊಳೆ ನೀರುವ ತರುವ ಭರವಸೆಯಲ್ಲಿ ಸಂಪೂರ್ಣ ವೈಫಲ್ಯ
2 ವರ್ಷಗಳಲ್ಲೇ ನೀರು ಹರಿಸುವ ಭರವಸೆ ಈಡೇರಿಸುವಲ್ಲಿ ವಿಫಲರಾಗಿದ್ದು
ಪ್ರಸಕ್ತ ಅವಧಿಯಲ್ಲಿ ಕ್ಷೇತ್ರಕ್ಕೆ ಬಾರದೇ ನಿರ್ಲಕ್ಷ್ಯ ತೋರಿರುವ ಆರೋಪ
ಜಾತಿ ಸಮೀಕರಣ ವೀರಪ್ಪ ಮೊಯ್ಲಿ ಪರವಾಗಿ ಇಲ್ಲದಿರುವುದು
ಕಳೆದ ಬಾರಿ ಹೆಚ್ಡಿಕೆ ಸ್ಪರ್ಧೆ ಮೊಯ್ಲಿ ಗೆಲುವಿಗೆ ಪರೋಕ್ಷ ಕಾರಣವಾಗಿದ್ದು
ಕ್ಷೇತ್ರದಲ್ಲಿ ಹೊರಗಿನ ಅಭ್ಯರ್ಥಿ ಎನ್ನುವ ಅಭಿಪ್ರಾಯ ದಟ್ಟ ಆಗ್ತಿರುವುದು

ಬಚ್ಚೇಗೌಡಗೆ ಪೂರಕ ಅಂಶಗಳೇನು?

ಕಳೆದ ಅವಧಿಯಲ್ಲಿ ಅತೀ ಕಡಿಮೆ ಅಂತರದಲ್ಲಿ ಸೋತಿರುವ ಅನುಕಂಪ
ಜಾತಿ ಸಮೀಕರಣದಲ್ಲಿ ಬಚ್ಚೇಗೌಡರು ಹೆಚ್ಚು ಮತ ಗಳಿಸುವ ನಿರೀಕ್ಷೆ
ಸ್ಥಳೀಯರಾಗಿ ಎಲ್ಲರ ಜೊತೆ ಸಂಪರ್ಕ ಚೆನ್ನಾಗಿರುವುದು ಪ್ಲಸ್ ಪಾಯಿಂಟ್
5 ಬಾರಿ ಶಾಸಕರಾಗಿ, ಸಚಿವರಾಗಿ ಕೆಲಸ ನಿರ್ವಹಿಸಿದ ಅನುಭವ
ನರೇಂದ್ರ ಮೋದಿ ಪ್ರಭಾವದಲ್ಲಿ ಬಿಜೆಪಿ ಪರ ಅಲೆ ಇರುವುದು

ಬಚ್ಚೇಗೌಡಗೆ ಇರುವ ಆತಂಕಗಳೇನು?
ಬಚ್ಚೇಗೌಡ, ಇವರ ಕುಟುಂಬದ ಮೇಲೆ ಹತ್ತಾರು ಆರೋಪಗಳು ಇರುವುದು
ಮಿನಿ ಬಿಹಾರ್ನಂತೆ ಹೊಸಕೋಟೆಯಲ್ಲಿ ತಮ್ಮದೇ ಸಾಮ್ರಾಜ್ಯ ಸ್ಥಾಪಿಸಿದ ಆರೋಪ
ಲೋಕಸಭಾ ವ್ಯಾಪ್ತಿಯಲ್ಲಿ ಬಿಜೆಪಿಗೆ ಹೆಚ್ಚಿನ ನೆಲೆ ಇಲ್ಲದಿರುವುದು
8 ವಿಧಾನಸಭಾ ಕ್ಷೇತ್ರಗಳ ಪೈಕಿ ಕೇವಲ ಓರ್ವ ಬಿಜೆಪಿ ಶಾಸಕ ಇರುವುದು
ಚುನಾವಣೆಯಲ್ಲಿ ಪ್ರಭಾವ ಬೀರುವ ಅಂಶಗಳು
ಬರಗಾಲ ಪೀಡಿತ ಪ್ರದೇಶದಲ್ಲಿ ಶಾಶ್ವತ ನೀರಾವರಿ ಯೋಜನೆ
ಎತ್ತಿನಹೊಳೆ ಯೋಜನೆ ಜಾರಿಯಾಗುತ್ತಾ? ನೀರು ಯಾವಾಗ ಬರುತ್ತೆ?
ಆಮೆ ಗತಿಯಲ್ಲಿ ಬೆಂಗಳೂರಿನ ಕೆರೆಗಳ ಕೊಳಚೆ ನೀರು ಶುದ್ಧೀಕರಿಸಿ ಹರಿಸುವ ಯೋಜನೆ
ಕ್ಷೇತ್ರದಲ್ಲಿ ಮೂಲಸೌಕರ್ಯಗಳ ಕೊರತೆ, ಕೃಷಿಕರು ಎದುರಿಸುತ್ತಿರುವ ಸಮಸ್ಯೆಗಳು
ಬೆಂಗಳೂರು ನಗರದ ಹೊರಭಾಗದ ಪ್ರದೇಶಗಳಲ್ಲಿ ಭೂಗಳ್ಳರ ಹಾವಳಿ

ಹಾಲಿ ಸಂಸದ ವೀರಪ್ಪ ಮೊಯ್ಲಿಯವರು ಕ್ಷೇತ್ರಕ್ಕೆ ನೀಡಿದ ಕೊಡುಗೆ

ಹೆಬ್ಬಾಳ, ನಾಗವಾರ ಕೆರೆ ಕೊಳಚೆ ನೀರು ಶುದ್ಧೀಕರಿಸಿ ಹರಿಸುವ ಕಾಮಗಾರಿ
ಸೆಂಟರ್ ಫಾರ್ ಟ್ರೇನಿಂಗ್ ಮಾಸ್ಟರ್ ಟ್ರೇನರ್ ಇನ್ ಸ್ಕಿಲ್ ಡೆವಲಪ್ಮೆಂಟ್ ಸ್ಥಾಪನೆ
(ವಿಶ್ವೇಶ್ವರಯ್ಯ ಹುಟ್ಟೂರು ಮುದ್ದೇನಹಳ್ಳಿಯಲ್ಲಿ)
ಹೊಸಕೋಟೆಯಲ್ಲಿ 150 ಎಕರೆ ಪ್ರದೇಶದಲ್ಲಿ ಡಿ.ವಿ.ಗುಂಡಪ್ಪ ವಿವಿ ಸ್ಥಾಪನೆ
ದೇವನಹಳ್ಳಿಯಲ್ಲಿ ಹಾರ್ಡ್ವೇರ್ ಪಾರ್ಕ್ ಸ್ಥಾಪನೆ
ಹೊಸಕೋಟೆಯಲ್ಲಿ ಹೆಚ್ಪಿಸಿಎಲ್ ಸಂಸ್ಥೆಯ ಸಂಶೋಧನಾ ಮತ್ತು ಅಭಿವೃದ್ಧಿ ಕೇಂದ್ರ
ಕಿಸಾನ್ ಸಭಾ ಟ್ರಸ್ಟ್ ವತಿಯಿಂದ ಬಡಮಕ್ಕಳಿಗೆ ಉಚಿತ ವಸತಿ ಪ್ರೌಢ ಶಾಲೆ
600 ಹಾಸಿಗೆಗಳ ಹೈಟೆಕ್ ಆಸ್ಪತ್ರೆ ನಿರ್ಮಾಣಕ್ಕೆ ಕೇಂದ್ರದಿಂದ 100 ಕೋಟಿ ಒದಗಿಸಿದ್ದು

ಚಿಕ್ಕಬಳ್ಳಾಪುರ ಕ್ಷೇತ್ರ ವಿಶೇಷ

ಕೆಆರ್​ಎಸ್​ ಡ್ಯಾಮ್ ಹರಿಕಾರರಾದ ಎಂ.ವಿಶ್ವೇಶ್ವರಯ್ಯ ಇದೇ ಜಿಲ್ಲೆಯ ಮುದ್ದೇನಹಳ್ಳಿಯವರು
ಬೆಂಗಳೂರಿಗರ ಫೇವರಿಟ್ ಸ್ಪಾಟ್ ನಂದಿ ಹಿಲ್ಸ್ ಈ ಕ್ಷೇತ್ರ ವ್ಯಾಪ್ತಿಯಲ್ಲಿದೆ
ಗೊಲ್ಲಹಳ್ಳಿಯ ವೀರಾಂಜನೇಯ ಸ್ವಾಮಿ ದೇವಸ್ಥಾನ ಸಖತ್ ಫೇಮಸ್
ಮಿನಿ ಜಲಿಯನ್ ವಾಲಾಬಾಗ್ ಎಂದೇ ಹೆಸರಾದ ವಿದುರಾಶ್ವತ್ಥ ದೇವಸ್ಥಾನ
ಚಿಕ್ಕಬಳ್ಳಾಪುರ ಸಮೀಪದ ಶ್ರೀ ಸತ್ಯ ಸಾಯಿ ಬಾಬಾ ಸ್ಕೂಲ್, ಯುನಿವರ್ಸಿಟಿ

LEAVE A REPLY

Please enter your comment!
Please enter your name here

Most Popular

Recent Comments