Wednesday, April 24, 2024

ಬೆಂಗಳೂರು ದಕ್ಷಿಣದಿಂದ ಬಿ.ಕೆ ಹರಿಪ್ರಸಾದ್ ಕಣಕ್ಕೆ..! ಧಾರವಾಡಕ್ಕೆ ಮಾತ್ರ ‘ಕೈ’ಗೆ ಸಿಕ್ಕಿಲ್ವಾ ಕ್ಯಾಂಡಿಡೇಟ್?

ಕಾಂಗ್ರೆಸ್​ ಬೆಂಗಳೂರು ದಕ್ಷಿಣಕ್ಕೂ ತನ್ನ ಅಭ್ಯರ್ಥಿಯನ್ನು ಘೋಷಿಸಿದೆ. ರಾಜ್ಯಸಭಾ ಸದಸ್ಯ ಬಿ.ಕೆ ಹರಿಪ್ರಸಾದ್ ಅವರ ಹೆಸರನ್ನು ‘ಕೈ’ ಪಡೆ ಅಂತಿಮಗೊಳಿಸಿದೆ.
ಬಿಜೆಪಿಯಿಂದ ಪ್ರಧಾನಿ ನರೇಂದ್ರ ಮೋದಿ ಅವರು ಕಣಕ್ಕಿಳಿಯುವ ಸಾದ್ಯತೆ ಇರೋದ್ರಿಂದ ಬಿಜೆಪಿ ಅಭ್ಯರ್ಥಿ ಘೋಷಣೆ ಬಳಿಕ ಕಾಂಗ್ರೆಸ್​ ತನ್ನ ಕ್ಯಾಂಡಿಡೇಟ್ ಅನ್ನು ಫೈನಲ್ ಮಾಡುತ್ತೆ ಎಂದು ಹೇಳಲಾಗಿತ್ತು. ಒಂದು ವೇಳೆ ಮೋದಿ ಸ್ಪರ್ಧಿಸಿದ್ರೆ ಟ್ರಬಲ್ ಶೂಟರ್ ಡಿ.ಕೆ ಶಿವಕುಮಾರ್ ಅವರನ್ನು ಕಣಕ್ಕಿಳಿಸಲು ಕಾಂಗ್ರೆಸ್​ ಪ್ಲಾನ್ ಮಾಡಿದೆ ಅನ್ನೋ ಮಾತು ಕೇಳಿಬಂದಿತ್ತು. ಆದರೆ, ಇದೀಗ ಕಾಂಗ್ರೆಸ್​ ತನ್ನ ಅಭ್ಯರ್ಥಿಯನ್ನಾಗಿ ಬಿ.ಕೆ ಹರಿಪ್ರಸಾದ್ ಅವರನ್ನು ಕಣಕ್ಕಿಳಿಸಿದೆ.
ಬಿಜೆಪಿ ಬೆಂಗಳೂರು ದಕ್ಷಿಣದಿಂದ ತನ್ನ ಅಭ್ಯರ್ಥಿಯನ್ನ ಘೋಷಿಸಿಲ್ಲ.. ಬಿಜೆಪಿಗೂ ಮುನ್ನವೇ ಕಾಂಗ್ರೆಸ್​ ತನ್ನ ಅಭ್ಯರ್ಥಿಯನ್ನ ಘೋಷಿಸಿದ್ದು, ಒಟ್ಟು ಇಲ್ಲಿಯ ವರೆಗೆ 19 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನ ಕಾಂಗ್ರೆಸ್​​ ಫೈನಲ್ ಮಾಡಿದೆ. ಇನ್ನು ಧಾರವಾಡಕ್ಕೆ ಮಾತ್ರ ಕಾಂಗ್ರೆಸ್​ ಅಭ್ಯರ್ಥಿಯನ್ನ ಅಂತಿಮಗೊಳಿಸಿಲ್ಲ. ಈ ಕ್ಷೇತ್ರಕ್ಕೆ ಮಾತ್ರ ಕಾಂಗ್ರೆಸ್​ಗೆ ಕ್ಯಾಂಡಿಡೇಟ್ ಸಿಕ್ಕಿಲ್ವಾ..?

ರಾಜ್ಯ ಕಾಂಗ್ರೆಸ್​ನ ಅಭ್ಯರ್ಥಿಗಳ ಪಟ್ಟಿ
ಚಿಕ್ಕಬಳ್ಳಾಪುರ – ವೀರಪ್ಪ ಮೊಯ್ಲಿ
ಕೋಲಾರ – ಕೆ.ಎಚ್​. ಮುನಿಯಪ್ಪ
ರಾಯಚೂರು – ಬಿ.ವಿ. ನಾಯ್ಕ್​​
ಬೆಂಗಳೂರು ಕೇಂದ್ರ – ರಿಜ್ವಾನ್ ಅರ್ಷದ್
ಬಾಗಲಕೋಟೆ – ವೀಣಾ ಕಾಶಪ್ಪನವರ್​
ಬೀದರ್ – ಈಶ್ವರ್ ಖಂಡ್ರೆ
ಕಲಬುರಗಿ – ಮಲ್ಲಿಕಾರ್ಜುನ್ ಖರ್ಗೆ
ಬೆಂಗಳೂರು ಗ್ರಾಮಾಂತರ – ಡಿ.ಕೆ. ಸುರೇಶ್
ಚಾಮರಾಜ ನಗರ – ಧ್ರುವ ನಾರಾಯಣ್​​
ಬಳ್ಳಾರಿ – ವಿ.ಎಸ್​. ಉಗ್ರಪ್ಪ
ಚಿಕ್ಕೋಡಿ – ಪ್ರಕಾಶ್ ಹುಕ್ಕೇರಿ
ಮೈಸೂರು – ಕೊಡಗು – ವಿಜಯ್ ಶಂಕರ್​
ಚಿತ್ರದುರ್ಗ – ಬಿ.ಎನ್​​. ಚಂದ್ರಪ್ಪ
ಬೆಳಗಾವಿ – ವಿರುಪಾಕ್ಷಿ ಎಸ್​. ಸಾಧುನ್ನವರ್​​​
ದಾವಣಗೆರೆ – ಶಾಮನೂರು ಶಿವಶಂಕರಪ್ಪ
ದಕ್ಷಿಣ ಕನ್ನಡ – ಮಿಥುನ್​​​ ರೈ​​
ಕೊಪ್ಪಳ – ರಾಜಶೇಖರ್​ ಹಿಟ್ನಾಳ್​​
ಹಾವೇರಿ- ಡಿ.ಆರ್​​. ಪಾಟೀಲ್​​​​​​

ಬೆಂಗಳೂರು ದಕ್ಷಿಣ – ಬಿ.ಕೆ ಹರಿಪ್ರಸಾದ್

ಪಟ್ಟಿ ಬಿಡುಗಡೆಗೆ ಬಾಕಿ ಇರುವ ಕ್ಷೇತ್ರಗಳು
ಧಾರವಾಡ

RELATED ARTICLES

Related Articles

TRENDING ARTICLES