ಮಂಡ್ಯ : ನಟ ದರ್ಶನ್ ಮತ್ತು ಯಶ್ ಪ್ರಚಾರಕ್ಕೆ ಬರ್ತಾ ಇರೋದಕ್ಕೆ ಹೆದರಿ ದಾಳಿ ನಡೆಸಿದ್ದಾರೆ ಎಂದು ಮಂಡ್ಯ ‘ಲೋಕ’ಕಣದ ಪಕ್ಷೇತರ ಅಭ್ಯರ್ಥಿ ಸುಮಲತಾ ಹೇಳಿದ್ದಾರೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ನಿವಾಸದ ಮೇಲೆ ಕಲ್ಲು ತೂರಾಟ ನಡೆದಿರುವ ವಿಚಾರಕ್ಕೆ ಸಂಬಂಧಪಟ್ಟಂತೆ ಮಂಡ್ಯದಲ್ಲಿ ಪ್ರತಿಕ್ರಿಯೆ ನೀಡಿದ ಸುಮಲತಾ ಅವರು, ‘ಉದ್ದೇಶ ಪೂರ್ವಕವಾಗಿಯೇ ಕಲ್ಲು ತೂರಾಟ ಮಾಡಿದ್ದಾರೆ. ನನ್ನ ಬೆಂಬಲಕ್ಕೆ ನಿಂತ ದರ್ಶನ್ ಮತ್ತು ಯಶ್ ನೋಡಿ ಹೆದರಿಕೊಂಡು ಈ ಕೆಲಸ ಮಾಡಿದ್ದಾರೆ. ಹೆದರಿಕೆಯಿಂದಲೇ ಈ ದಾಳಿ ನಡೆದಿದೆ. ಆದರೆ, ಯಾರು ಏನೇ ಮಾಡಿದ್ರೂ ಫಲಿತಾಂಶದಲ್ಲಿ ಉತ್ತರ ಸಿಗುತ್ತೆ ಎಂದಿದ್ದಾರೆ.