Site icon PowerTV

ತುಮಕೂರಿನಿಂದ ದೇವೇಗೌಡರ ಸ್ಪರ್ಧೆ: ಶಕ್ತಿ ಪ್ರದರ್ಶನಕ್ಕೆ ಮುಂದಾದ ಹಾಲಿ ಸಂಸದ..!

ತುಮಕೂರು: ಲೋಕಸಭಾ ಚುನಾವಣೆಯಲ್ಲಿ ತುಮಕೂರು ಕ್ಷೇತ್ರದಿಂದ ಹಾಲಿ ಸಂಸದರಾಗಿರುವ ಕಾಂಗ್ರೆಸ್​ನ ಎಸ್​ ಪಿ ಮುದ್ದಹನುಮೇಗೌಡ ಅವರಿಗೆ ಟಿಕೆಟ್ ಕೈತಪ್ಪಿರುವ ಹಿನ್ನಲೆ ಅವರ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಮ್ಮ ನಿವಾಸದಲ್ಲಿ ಬೆಂಬಲಿಗರ ಸಭೆ ಕರೆದಿರುವ ಮುದ್ದಹನುಮೇಗೌಡ ಕಾರ್ಯಕರ್ತರೊಂದಿಗೆ ಚರ್ಚೆ ನಡೆಸಲಿದ್ದಾರೆ. ಹೆಬ್ಬೂರು ಬಳಿಯ ತೋಟದ ನಿವಾಸದಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ತುಮಕೂರು ಕಾಂಗ್ರೆಸ್ ಸಂಸದರು ಶಕ್ತಿ ಪ್ರದರ್ಶನಕ್ಕೆ ಸಜ್ಜಾಗಿದ್ದಾರೆ. ಪಕ್ಷದ ವಿರುದ್ಧವೇ ಸಿಡಿದೆದ್ದ ಕಾಂಗ್ರೆಸ್ ಹಾಲಿ ಸಂಸದ ಬೆಂಬಲಿಗರೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳಲಿದ್ದಾರೆ. ಟಿಕೆಟ್ ಕೈ ತಪ್ಪಿರುವ ಹಿನ್ನೆಲೆ ಸಂಸದರ ನಡೆ ಕುತೂಹಲ ಕೆರಳಿಸಿದೆ.

ಮುದ್ದಹನುಮೇಗೌಡರಿಗೆ ಟಿಕೆಟ್​ ತಪ್ಪಿದ್ದು ಇದೇ ಮೊದಲ ಬಾರಿಯಲ್ಲ. 2013ರಲ್ಲಿ ವಿಧಾನಸಭೆ ಚುನಾವಣೆಗೆ ಸ್ವತಃ ದೇವೇಗೌಡ್ರು ಬಿ ಫಾರಂ ಕೊಟ್ಟಿದ್ದರು. ಕೊನೆ ಕ್ಷಣದಲ್ಲಿ ಜೆಡಿಎಸ್​ ವರಿಷ್ಠರೇ ಮುದ್ದಹನುಮೇಗೌಡರಿಗೆ ಟಿಕೆಟ್​ ತಪ್ಪಿಸಿದ್ದರು. ಮುದ್ದಹನುಮೇಗೌಡರ ವಿರುದ್ಧ ವ್ಯವಸ್ಥಿತ ಸಂಚು ರೂಪಿಸಲಾಗಿದೆ ಅಂತ ದೇವೇಗೌಡರ ವಿರುದ್ಧ ಗ್ರಾಮ ಪಂಚಾಯ್ತಿ ಅಧ್ಯಕ್ಷ ಗಂಗಾಧರಯ್ಯ ಆರೋಪ ಮಾಡಿದ್ದಾರೆ. ವಿಧಾನಸಭೆಗೆ ಸಕಲ ಸಿದ್ಧತೆ ಮಾಡಿಕೊಂಡಿದ್ದ ಮುದ್ದಹನುಮೇಗೌಡರಿಗೆ ಅಂದು ಬಿಗ್ ಶಾಕ್ ನೀಡಿದ್ರು. ಈಗ ಮತ್ತೋಮ್ಮೆ ಟಿಕೆಟ್ ಕೊಡದೇ ಮುದ್ದಹನುಮೇಗೌಡರನ್ನ ತುಳಿಯುತ್ತಿದ್ದಾರೆ ಅಂತ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Exit mobile version