Friday, March 29, 2024

‘ಲೋಕ’ ಸಂಗ್ರಾಮದ ಜೊತೆ ಜೊತೆಗೇ ಐಪಿಎಲ್ ಹಂಗಾಮ..!

ಪ್ರಜಾಪ್ರಭುತ್ವದ ಹಬ್ಬ ಚುನಾವಣೆ… ಲೋಕಸಭಾ ಚುನಾವಣಾ ಕಣ ರಂಗೇರುತ್ತಿದೆ. ಇಡೀ ದೇಶದಲ್ಲೀಗ ‘ಲೋಕ’ ಸಂಗ್ರಾಮದ್ದೇ ಮಾತು… ಸಡಗರ…ಸಂಭ್ರಮ… ಈ ನಡುವೆ ಐಪಿಎಲ್​ ಹಂಗಾಮ..!
ಮಾರ್ಚ್​ 23, ಅಂದ್ರೆ ನಾಳೆಯಿಂದ 12ನೇ ಆವೃತ್ತಿ ಐಪಿಎಲ್​ ಆರಂಭವಾಗುತ್ತಿದೆ. 8 ಟೀಮ್​ಗಳು ಚಾಂಪಿಯನ್ ಪಟ್ಟಕ್ಕಾಗಿ ಪೈಪೋಟಿ ನಡೆಸಲು ಸಜ್ಜಾಗಿವೆ.
ಚೆನ್ನೈನಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್​ ಬೆಂಗಳೂರು ಸೆಣೆಸಲಿವೆ. ಟೀಮ್​ ಇಂಡಿಯಾದ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಸಾರಥ್ಯದ ಚೆನ್ನೈ ಸೂಪರ್ ಕಿಂಗ್ಸ್ ಈ ವರೆಗೆ 3 ಬಾರಿ ಚಾಂಪಿಯನ್ (2010, 2011 ಮತ್ತು 2018) ಪಟ್ಟ ಅಲಂಕರಿಸಿದೆ. ಟೀಮ್ ಇಂಡಿಯಾದ ಕ್ಯಾಪ್ಟನ್ ರನ್ ಮಷಿನ್ ವಿರಾಟ್​ ಕೊಹ್ಲಿ ಸಾರಥ್ಯದ ರಾಯಲ್ ಚಾಲೆಂಜರ್ಸ್ ಬೆಂಗಳೂರು 2009, 2011 ಮತ್ತು 2016ರಲ್ಲಿ ರನ್ನರ್​ಅಪ್​ ಆಗಿತ್ತು,
ಇನ್ನು ಯುವ ಆಟಗಾರ ಶ್ರೇಯಸ್​ ಅಯ್ಯರ್​ ನಾಯಕತ್ವದ ಡೆಲ್ಲಿ ತಂಡ ಈ ಬಾರಿ ಡೆಲ್ಲಿ ಕ್ಯಾಪಿಟಲ್ಸ್​ ಆಗಿ ಕಣಕ್ಕಿಳಿಯುತ್ತಿದೆ, ಈ ಹಿಂದೆ ಡೆಲ್ಲಿ ಡೇರ್​ಡೆವಿಲ್ಸ್​ ಆಗಿ ಆಡಿದ್ದ ಟೀಮ್ 2008, 2009ರಲ್ಲಿ ಸೆಮಿಫೈನಲ್ ಪ್ರವೇಶಿಸಿತ್ತು. ರವಿಚಂದ್ರನ್ ಅಶ್ವಿನ್​ ನೇತೃತ್ವದ ಕಿಂಗ್ಸ್ ಇಲೆವೆನ್​ ಪಂಜಾಬ್​ ಐಪಿಎಲ್​ನ ಮತ್ತೊಂದು ಪ್ರಬಲ ತಂಡ. ಇದು 2008ರಲ್ಲಿ ಸೆಮಿಫೈನಲ್​ ಪ್ರವೇಶಿಸಿತ್ತು. 2014ರಲ್ಲಿ ರನ್ನರ್​ಅಪ್​ ಆಗಿ ಹೊರಹೊಮ್ಮಿತ್ತು.
2012 ಮತ್ತು 2014ರಲ್ಲಿ ಚಾಂಪಿಯನ್ ಆಗಿದ್ದ ಕೋಲ್ಕತ್ತಾ ನೈಟ್​​ ರೈಡರ್ಸ್​​ ಮೂರನೇ ಬಾರಿ ಚಾಂಪಿಯನ್ ಆಗುವ ನಿರೀಕ್ಷೆಯಲ್ಲಿದೆ. ಈ ಟೀಮ್​ಗೆ ಸಾರಥಿ ದಿನೇಶ್ ಕಾರ್ತಿಕ್.
ಹಿಟ್​ ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್ 2013, 2015 ಮತ್ತು 2017ರಲ್ಲಿ ಚಾಂಪಿಯನ್ ಆಗಿತ್ತು. 4 ನೇ ಬಾರಿ ಟ್ರೋಫಿಗೆ ಮುತ್ತಿಕ್ಕುವ ವಿಶ್ವಾಸದಲ್ಲಿದೆ. ಇನ್ನು ಡೇವಿಡ್​ ವಾರ್ನರ್​ ನೇತೃತ್ವದ ಸನ್​ರೈಸರ್ಸ್ ಹೈದರಾಬಾದ್​ 2016ರಲ್ಲಿ (ಡೆಕ್ಕನ್ ಚಾರ್ಜಸ್​) ಚಾಂಪಿಯನ್ ಆಗಿತ್ತು.  ತಂಡಗಳಲ್ಲದೆ ಚೊಚ್ಚಲ ಆವೃತ್ತಿಯ ಚಾಂಪಿಯನ್ ರಾಜಸ್ಥಾನ ರಾಯಲ್ಸ್​​ ಸೇರಿ 8 ತಂಡಗಳು ಕಣದಲ್ಲಿದ್ದು ಚಾಂಪಿಯನ್ ಪಟ್ಟಕ್ಕಾಗಿ ಜಿದ್ದಾಜಿದ್ದಿನ ಹೋರಾಟ ನಡೆಸಲಿವೆ.

RELATED ARTICLES

Related Articles

TRENDING ARTICLES