Monday, November 4, 2024

ಸುಮಲತಾ ಯಾವ ಹೆಸರಲ್ಲಿ ನಾಮಪತ್ರ ಸಲ್ಲಿಸಿದ್ರು? ಅವರ ಒಟ್ಟಾರೆ ಆಸ್ತಿ ಎಷ್ಟು?

ಮಂಡ್ಯ : ಸುಮಲತಾ ಅಂಬರೀಶ್ ಅವರು ನಾಮಪತ್ರ ಸಲ್ಲಿಸಿ, ಬೃಹತ್ ರ್ಯಾಲಿ ಹಾಗೂ ಸಮಾವೇಶದ ಮೂಲಕ ಲೋಕ ಸಮರದ ರಣಕಹಳೆ ಊದಿದ್ದಾರೆ. ಅವರಿಗೆ ಚಾಲಿಂಜಿಂಗ್ ಸ್ಟಾರ್ ದರ್ಶನ್ ಮತ್ತು ರಾಕಿಂಗ್ ಸ್ಟಾರ್ ಯಶ್ ಸೇರಿದಂತೆ ಚಿತ್ರರಂಗದ ಭಾರಿ ಬೆಂಬಲ ಸಿಕ್ಕಿದೆ. ಅಂಬರೀಶ್ ಅವರ ಅಭಿಮಾನಿಗಳು ಮಾತ್ರವಲ್ಲದೆ ಕಾಂಗ್ರೆಸ್​ನ ಸ್ಥಳೀಯ ಮುಖಂಡರು, ಕಾರ್ಯಕರ್ತರ ಬೆಂಬಲ ಕೂಡ ಸಿಕ್ಕಿದೆ.
ಸುಮಲತಾ ಅವರು ಸುಮಲತಾ ಅಂಬರೀಶ್ ಎನ್ನುವ ಹೆಸರಲ್ಲಿ ನಾಮಪತ್ರ ಸಲ್ಲಿಸಿರುತ್ತಾರೆ ಅಂತ ಬಹುತೇಕರು ಅಂದುಕೊಂಡಿರ್ತೀವಿ…ಆದರೆ, ಸುಮಲತಾ ಅವರು ಸುಮಲತಾ ಅಂಬರೀಶ್​ ಅನ್ನೋ ಹೆಸರಲ್ಲಿ ನಾಮಪತ್ರ ಸಲ್ಲಿಸಿಲ್ಲ. ಸುಮಲತಾ ಅಮರನಾಥ್ ಎನ್ನುವ ಹೆಸರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ..! ಅಂಬರೀಶ್ ಅವರ ಮೊದಲ ಹೆಸರು ಅಮರ್​ನಾಥ್​ ಅಂತ.
ಇನ್ನು ನಾಮಪತ್ರ ಸಲ್ಲಿಸುವಾಗ ಆಸ್ತಿ ವಿವರನ್ನು ನೀಡಬೇಕು. ಹಾಗಾದ್ರೆ ಸುಮಲತಾ ಅವರ ಒಟ್ಟಾರೆ ಆಸ್ತಿ ಎಷ್ಟಿರಬಹುದು ಅನ್ನೋ ಕುತೂಹಲ ಸಾಮಾನ್ಯವಾಗಿ ಇರುತ್ತೆ.
ಒಟ್ಟಾರೆ 42.49ಕೋಟಿ ರೂ ಆಸ್ತಿಯನ್ನು ಸುಮಲತಾ ಘೋಷಿಸಿದ್ದಾರೆ. ವಿವಿಧ ಬ್ಯಾಂಕ್‌ಗಳ ಉಳಿತಾಯ ಖಾತೆಗಳಲ್ಲಿ ₹ 1.33 ಕೋಟಿ, ದಿ.ಅಂಬರೀಷ್‌ ಖಾತೆಯಲ್ಲಿ ₹ 82 ಲಕ್ಷ ಹಣವಿದೆ. ಸುಮಲತಾ ಕೈಯಲ್ಲಿ ₹ 13 ಲಕ್ಷ ಹಣ ಇದೆ. ಎಚ್‌ಡಿಎಫ್‌ಸಿ, ಸಿಟಿ ಬ್ಯಾಂಕ್‌, ಎಸ್‌ಬಿಐ ಬ್ಯಾಂಕ್‌ಗಳಲ್ಲಿ ₹ 2 ಕೋಟಿ ಠೇವಣಿ ಇಟ್ಟಿದ್ದಾರೆ. ವಿವಿಧೆಡೆ ₹ 1 ಕೋಟಿ ತೊಡಗಿಸಿದ್ದಾರೆ ಎಂದು ಘೋಷಿಸಿದ್ದಾರೆ.
₹ 1.66 ಕೋಟಿ ಮೌಲ್ಯದ 5.6 ಕೆ.ಜಿ ಚಿನ್ನದ ಒಡವೆ. ₹ 13 ಲಕ್ಷ ಮೌಲ್ಯದ 31 ಕೆ.ಜಿ ಬೆಳ್ಳಿ ಇದೆ. ಬೆಂಗಳೂರಿನಲ್ಲಿ ₹ 18 ಕೋಟಿ ಮೌಲ್ಯದ ಮೂರು ಫ್ಲ್ಯಾಟ್‌ಗಳು ಇವೆ. ₹ 16 ಕೋಟಿ ಮೊತ್ತದ ಪಿತ್ರಾರ್ಜಿತ ಆಸ್ತಿ ಇರುವುದಾಗಿ ದಾಖಲಿಸಿದ್ದಾರೆ. ₹ 1.42 ಕೋಟಿ ಸಾಲ ಮಾಡಿದ್ದಾರೆ. ಹಲವರಿಗೆ ₹ 55 ಲಕ್ಷ ಸಾಲ ಕೊಟ್ಟಿದ್ದು, ಅದರಲ್ಲಿ ಪುತ್ರ ಅಭಿಷೇಕ್‌ಗೌಡಗೆ ₹ 39 ಲಕ್ಷ ಸಾಲ ನೀಡಿರುವುದಾಗಿ ಪ್ರಮಾಣಪತ್ರದಲ್ಲಿ ನಮೂದಿಸಿದ್ದಾರೆ.

RELATED ARTICLES

Related Articles

TRENDING ARTICLES